Monday, June 16, 2025
Monday, June 16, 2025

ಈ ದೇವಾಲಯಗಳನ್ನು ಭೂತಗಳು ನಿರ್ಮಿಸಿವೆ ಎಂದರೆ ನಂಬುತ್ತೀರಾ?

ಭಾರತದಲ್ಲಿ ಭೂತಗಳು ನಿರ್ಮಿಸಿರುವ ಹತ್ತು ಹಲವು ದೇವಾಲಯಗಳಿವೆ. ಭೂತಗಳು ಹಿಂದೂ ದೇವಾಲಯಗಳನ್ನು ಒಂದೇ ರಾತ್ರಿಯಲ್ಲಿ ಕಟ್ಟಿವೆ ಎನ್ನಲಾಗುತ್ತದೆ.

ನಮ್ಮ ಭಾರತದಲ್ಲಿ ಲಕ್ಷಾಂತರ ಪವಿತ್ರ ಮತ್ತು ಪುರಾಣ ಪ್ರಸಿದ್ಧ ಹಿಂದೂ ದೇವಾಲಯಗಳಿವೆ. ವಿಶಿಷ್ಟ ಪದ್ಧತಿ, ಆಚಾರ, ವಿಚಾರ ಹಾಗು ಧಾರ್ಮಿಕ ನಂಬಿಕೆಗಳಿಂದಾಗಿ ದೇವಾಲಯಗಳು ಶ್ರೀಮಂತವಾಗಿವೆ. ಕೆಲವು ದೇವಾಲಯಗಳು ಪುರಾಣದ ಹಿನ್ನೆಲೆ ಮತ್ತು ಮಹಿಮೆಗಳಿಂದ ವಿಶ್ವ ವಿಖ್ಯಾತಿಗಳಿಸಿದೆ. ಸಾಕಷ್ಟು ದೇವಾಲಯಗಳು ಹಾಗೆಯೇ ಉದ್ಭವವಾಗಿವೆ ಎಂಬ ನಂಬಿಕೆಯಿದೆ. ಇನ್ನು ಕೆಲವು ದೇವಾಲಯಗಳು ಮಾನವ ನಿರ್ಮಿತ. ಆದರೆ ಒಂದೇ ರಾತ್ರಿಯಲ್ಲಿ ಭೂತಗಳು ನಿರ್ಮಿಸಿದ ಭಾರತದ ಹತ್ತಾರ ದೇವಾಲಯಗಳ ಬಗ್ಗೆ ನಿಮಗೆ ಗೊತ್ತಾ? ಇದು ಉತ್ಪ್ರೇಕ್ಷೆಯಲ್ಲ. ಸತ್ಯ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ದೇವಾಲಯಗಳನ್ನು ಭೂತಗಳೇ ಕಟ್ಟಿವೆ ಎನ್ನುತ್ತಾರೆ ಸ್ಥಳೀಯರು. ಆ ದೇವಾಲಯಗಳ ಕುರಿತಾದ ಮಾಹಿತಿ ಇಲ್ಲಿದೆ;

ಭೂತೋನ್ವಾಲಾ ಮಂದಿರ

ಒಂದೇ ರಾತ್ರಿಯಲ್ಲಿ ಭೂತಗಳಿಂದ ನಿರ್ಮಿಸಲ್ಪಟ್ಟ ದೇವಾಲಯದ ಹೆಸರು ಭೂತೋನ್ವಾಲಾ ಮಂದಿರ. ಇದೊಂದು ಪ್ರಸಿದ್ಧ ಶಿವಾಲಯವಾಗಿದೆ. ದೇವಸ್ಥಾನವನ್ನು ಕೆಂಪು ಇಟ್ಟಿಗೆಗಳಿಂದ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಯಾವುದೇ ರೀತಿಯ ಸಿಮೆಂಟ್‌ ಬಳಕೆಯಾಗಿಲ್ಲ. ಭೂತೋನ್ವಾಲಾ ಪುರಾತನವಾದ ದೇವಾಲಯವಾಗಿದ್ದು, ಸುಮಾರು 1000 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಭೂತಗಳು ದೇವಾಲಯದ ನಿರ್ಮಾಣವನ್ನು ಪೂರ್ಣಗೊಳಿಸುವ ಮುನ್ನವೇ ಸೂರ್ಯೋದಯವಾದ ಕಾರಣ ನಿರ್ಮಾಣ ಅಪೂರ್ಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

Built By Ghost

ಇನ್ನು ಭೂತಗಳು ನಿರ್ಮಿಸಿದ ದೇವಾಲಯ ದೇವನಹಳ್ಳಿಯಲ್ಲಿಯೂ ಇದೆ. ಆ ದೇವಾಲಯ ಯಾವುದು ಗೊತ್ತಾ? ವೇಣುಗೋಪಾಸ್ವಾಮಿ ದೇವಾಲಯ. ಗರ್ಭಗುಡಿಯಲ್ಲಿ ವೇಣುಗೋಪಾಲನ ಹೆಸರಿನಲ್ಲಿ ಮಹಾ ವಿಷ್ಣು ನೆಲೆಸಿದ್ದಾನೆ. ಅಷ್ಟಕ್ಕೂ ಈ ಆಲಯವಿರುವುದು ದೇವನಹಳ್ಳಿ ಕೋಟೆಯೊಳಗೆ.

ಒಂದೇ ರಾತ್ರಿಯಲ್ಲಿ ನಿರ್ಮಿಸಿದ ಕರ್ನಾಟಕದ ದೇವಾಲಯ

ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಒಂದೇ ರಾತ್ರಿ ಭೂತಗಳಿಂದ ನಿರ್ಮಿಸಲ್ಪಟ್ಟ ದೇವಾಲಯಯವಿದೆ. ಆ ದೇವಾಲಯದ ಹೆಸರು ಕೇಶವರಾಜ ದೇವಾಲಯ. ಜಾನಪದ ಕಥೆಯ ಪ್ರಕಾರ, ಪಾಂಡವರು ಒಂದೇ ರಾತ್ರಿಯಲ್ಲಿ ನಿರ್ಮಿಸಿದ ದೇವಾಲಯ ಇದಾಗಿದೆ. ಇದು ಕರ್ನಾಟಕ ಹಾಗು ಮಹಾರಾಷ್ಟ್ರ ರಾಜ್ಯಗಳ ದಾಪೋಲಿಯಲ್ಲಿ ಗುಪ್ತವಾಗಿ ಅಡಗಿದೆ. ಟ್ರೆಕ್ಕಿಂಗ್‌ ಮೂಲಕವಷ್ಟೇ ಈ ದೇವಸ್ಥಾನವನ್ನು ತಲುಪಬಹುದು. ಚಾರಣಿಗರು ಈ ದೇವಾಲಯಕ್ಕೆ ಒಮ್ಮೆ ಭೇಟಿಕೊಡಬಹುದು.

Keshaava

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!