ರಾಜಸ್ಥಾನದಲ್ಲಿಯೂ ಇದೆ ಅತೀ ಎತ್ತರದ ಗೋಡೆ!
ಚೀನಾದ ಮಹಾ ಗೋಡೆಯಂತೆಯೇ ನಮ್ಮ ರಾಜಸ್ಥಾನದಲ್ಲಿಯೂ ಅತೀ ಎತ್ತರದ ಗೋಡೆಯೊಂದಿದೆ. ಇದು ಭಾರತದ ಗ್ರೇಟ್ ವಾಲ್. ಅಲ್ಲಿಗೆ ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ರಾಜಸ್ಥಾನದ ಐತಿಹಾಸಿಕ ತಾಣವಾಗಿರುವ ಕುಂಬಲ್‌ಘಡ್ ಕೋಟೆಗೆ ಹೆಸರುವಾಸಿಯಾದ ಕುಂಬಲ್‌ಘಡ್ ಪಟ್ಟಣವು ರಾಜಸ್ಥಾನದ ಪ್ರಖ್ಯಾತ ಐತಿಹಾಸಿಕ ತಾಣವಾಗಿದೆ. ಅಲ್ಲಿ ಭವ್ಯವಾದ ಸ್ಮಾರಕಗಳು, ಅರಮನೆಗಳು, ದೇವಾಲಯಗಳಿವೆ. ಕುಂಭಲ್‌ಘಡ್ ಕೋಟೆ ರಾಜಸ್ಥಾನದ ಎರಡನೇ ಪ್ರಮುಖ ಕೋಟೆಯಾಗಿದೆ. ಬೆಣಚುಕಲ್ಲು ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿರುವ ಕೋಟೆಯು ಪ್ರೇಕ್ಷಣೀಯ ಸ್ಥಳವಾಗಿ ಪ್ರವಾಸಿಗರನ್ನು ಸದಾ ಸೆಳೆಯುತ್ತದೆ.
ವಿಶ್ವದ ಎರಡನೇ ಅತಿ ಉದ್ದದ ಗೋಡೆ
ಕುಂಭಲ್‌ಘಡ್ ವನ್ಯಜೀವಿ ಅಭಯಾರಣ್ಯದಲ್ಲಿ ಲಯನ್ ಸಫಾರಿ ಕೂಡ ಇದೆ. ಅರಾವಳಿಯ ಬುಡದಲ್ಲಿರುವ ಈ ಪ್ರದೇಶವು ನೈಸರ್ಗಿಕವಾಗಿದೆ. ವಿವಿಧ ಜಾತಿಯ ಸಸ್ಯ ಮತ್ತು ಪ್ರಾಣಿಗಳು ಅಲ್ಲಿವೆ. ಇನ್ನು ಕುಂಬಲ್‌ಘಡ್ ಕೋಟೆಯ ಗೋಡೆಯು ಚೀನಾದ ಮಹಾ ಗೋಡೆಯ ನಂತರ ವಿಶ್ವದ ಎರಡನೇ ಅತಿ ಉದ್ದದ ಗೋಡೆಯಾಗಿದೆ. 2013ರಲ್ಲಿ ರಾಜಸ್ಥಾನ ಸರಕಾರವು ಕುಂಬಲ್‌ಘಡ್ ಕೋಟೆಯನ್ನು ಯುನೆಸ್ಕೋ ವಿಶ್ವ ಪಾರಂಪರ್ಯದ ಪಟ್ಟಿಗೆ ಸೇರಿಸಿದೆ.
ಕುಂಭಲ್‌ಘಡ್ 15 ನೇ ಶತಮಾನಕ್ಕೂ ಹಿಂದಿನದು. ಪಟ್ಟಣದ ಅಡಿಪಾಯವನ್ನು ಮೇವಾರ್ ರಾಜ ರಾಣಾ ಕುಂಭ ಅವರು ಹಾಕಿದ್ದಾರೆಂದು ಇತಿಹಾಸ ಹೇಳುತ್ತದೆ. ಈ ಕೋಟೆಯು ಮೇವಾರ್ ಆಡಳಿತಗಾರರಿಗೆ ಅವರ ಕಲಹ ಕಾಲದಲ್ಲಿ ಆಶ್ರಯ ನೀಡಿತು ಎನ್ನಲಾಗಿದೆ. ಕುಂಭಲ್‌ಘಡ್ ಮಹಾರಾಣ ಪ್ರತಾಪ್ ಅವರ ಜನ್ಮಸ್ಥಳವೂ ಆಗಿದೆ. ಕೋಟೆಯ ಹೊರತಾಗಿ, ಮೌರ್ಯ ಸಾಮ್ರಾಜ್ಯದ ವಂಶಸ್ಥರು ಕೆಲವು ಸುಂದರವಾದ ದೇವಾಲಯಗಳನ್ನು ಇಲ್ಲಿ ನಿರ್ಮಿಸಿದ್ದಾರೆ. ಮಹಾರಾಣಾ ಫತೇಹ್ ಸಿಂಗ್ 19 ನೇ ಶತಮಾನದಲ್ಲಿ ಕೋಟೆಯನ್ನು ನವೀಕರಿಸಿದ್ದಾನೆ. ಅಂದಿನಿಂದ ಇದು ವಿಶ್ವದ ಜನಪ್ರಿಯ ಪ್ರವಾಸಿ ತಾಣವಾಗಿದೆ.
ಬರೋಬ್ಬರಿ 3600 ಅಡಿ ಎತ್ತರದ ಗೋಡೆ
ಕುಂಭಲ್‌ಘಡ್ ಕೋಟೆಯು ಸಮುದ್ರ ಮಟ್ಟದಿಂದ 3600 ಅಡಿ ಎತ್ತರದಲ್ಲಿದ್ದು, ಇದನ್ನು ಹದಿಮೂರು ಎತ್ತರದ ಅರಾವಳಿ ಪರ್ವತ ಶಿಖರಗಳ ಮಡಿಲಲ್ಲಿ ನಿರ್ಮಿಸಲಾಗಿದೆ. ಸುಮಾರು 12 ಚದರ ಕಿ.ಮೀ ವ್ಯಾಪ್ತಿಯಲ್ಲಿ ಕೋಟೆಯ ಗೋಡೆಗಳು ಸುಮಾರು 36 ಕಿ.ಮೀ ವಿಸ್ತೀರ್ಣದಲ್ಲಿ ವ್ಯಾಪಿಸಿವೆ .ಈ ಕೋಟೆಯು ಸುತ್ತಮುತ್ತಲಿನ ಜಾಗವು ಅತ್ಯದ್ಭುತವಾಗಿದೆ. ಇದು ಸೆಂಟಿನೆಲ್‌ಗಳ ರೂಪದಲ್ಲಿ ನಿಲ್ಲುವ ಏಳು ಗೇಟ್‌ವೇಗಳನ್ನು ಹೊಂದಿದೆ. ಅತಿದೊಡ್ಡ ಗೇಟ್ ಅನ್ನು ರಾಮ್ ಪೋಲ್ ಅಥವಾ ರಾಮ್ ಗೇಟ್ ಎಂದು ಕರೆಯಲಾಗುತ್ತದೆ. ಇದು ಈ ಕೋಟೆಯ ವಿಶಿಷ್ಟ ಆಕರ್ಷಣೆಯಾಗಿದೆ. ಈ ಕೋಟೆಯಲ್ಲಿ ಸುಮಾರು 360 ದೇವಾಲಯಗಳಿವೆ, ಅವುಗಳಲ್ಲಿ 300 ಪ್ರಾಚೀನ ಜೈನ ದೇವಾಲಯಗಳಾಗಿವೆ.
ಕುಂಭಲ್‌ಘಡ್ ಗೋಡೆಗೆ ಹೇಗೆ ತಲುಪುವುದು?
ಕುಂಭಲ್‌ಘಡ್‌ಗೆ ಉದಯಪುರವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಕುಂಭಲ್‌ಘಡ್‌ದಿಂದ ಸುಮಾರು ಒಂದೂವರೆ - ಎರಡು ಗಂಟೆಗಳ ಪ್ರಯಾಣ. ಹತ್ತಿರದ ರೈಲು ನಿಲ್ದಾಣ ಫಲ್ನಾ ರೈಲ್ವೆ ನಿಲ್ದಾಣ. ಕುಂಭಲ್‌ಘಡ್‌ನ ರಸ್ತೆ ಮಾರ್ಗಗಳಿಂದಲೂ ಉತ್ತಮ ಸಂಪರ್ಕ ಹೊಂದಿದೆ. ಉದಯಪುರ ಕುಂಭಲ್‌ಘಡ್‌ದಿಂದ ಸರಿ ಸುಮಾರು 64 ಕಿ.ಮೀ. ದೂರದಲ್ಲಿದೆ. ಕುಂಭಲ್‌ಘಡ್‌ಗೆ ಬಸ್ ಸೇವೆಗಳಿವೆ. ಕ್ಯಾಬ್ ಅಥವಾ ಕಾರುಗಳಲ್ಲಿಯೂ ತೆರಳಬಹುದು.