Tuesday, August 19, 2025
Tuesday, August 19, 2025

ಭೂತಾನ್‌ನಲ್ಲಿ ಜಗತ್ತಿನ ಮೊದಲ ಕ್ರಿಪ್ಟೊ ಟೂರಿಸಂ ಪಾವತಿ!

ಭೂತಾನ್‌ ದೇಶವು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಕ್ರಿಪ್ಟೊ ಟೂರಿಸಂ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಡಿಜಿಟಲ್‌ ಕರೆನ್ಸಿಯು ಈ ಮೂಲಕ ಕ್ರಾಂತಿ ಹುಟ್ಟುಹಾಕಿದೆ.

ಜಗತ್ತಿನ ಮೊದಲ ರಾಷ್ಟ್ರೀಯ ಮಟ್ಟದ ಕ್ರಿಪ್ಟೋ ಟೂರಿಸಂ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಭೂತಾನ್ ದೇಶವು ತಯಾರಿ ನಡೆಸಿದೆ. ಬೈನಾನ್ಸ್ ಪೇ ಮತ್ತು ಡಿಕೆ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ ಎಂಬ ಮಾಹಿತಿಯಿದೆ. ಈ ಹೊಸ ಕ್ರಮವು ಬೈನಾನ್ಸ್ ಖಾತೆಗಳನ್ನು ಹೊಂದಿರುವ ಪ್ರಯಾಣಿಕರು ಭೂತಾನ್‌ನಲ್ಲಿ ಪ್ರಯಾಣದ ವೇಳೆ ಬಹುತೇಕ ಪಾವತಿಗಳಿಗೆ ಡಿಜಿಟಲ್ ಕರೆನ್ಸಿಗಳನ್ನು ಬಳಸಬಹುದು. ವಿಮಾನ ಟಿಕೆಟ್ ದರಗಳು, ವೀಸಾ, ವಸತಿ, ಪ್ರವಾಸಿ ತಾಣಗಳಿಗೆ ಎಂಟ್ರಿ, ಟೂರಿಸ್ಟ್‌ ಗೈಡ್ ಮತ್ತು ರಸ್ತೆಬದಿಯ ಅಂಗಡಿಗಳಲ್ಲಿ ಖರೀದಿಸುವ ತಿಂಡಿ-ತಿನಿಸು ಮತ್ತು ಹಣ್ಣುಗಳಿಗೂ ಈ ಮೂಲಕವೇ ಹಣವನ್ನು ಪಾವತಿಸಬಹುದು ಎನ್ನಲಾಗಿದೆ.

ಡಿಕೆ ಬ್ಯಾಂಕ್ ಮತ್ತು ಬೈನಾನ್ಸ್ ಪೇ ಮೂಲಕ ಈಗಾಗಲೇ 100 ಕ್ಕೂ ಹೆಚ್ಚು ಸ್ಥಳೀಯ ವ್ಯಾಪಾರಿಗಳು ಕ್ರಿಪ್ಟೋ ಟೂರಿಸಂ ಪಾವತಿ ವ್ಯವಸ್ಥೆ ಪ್ರಾರಂಭಿಸಿದ್ದಾರೆ. ಪ್ರವಾಸಿಗರು ಈಗ ಅದ್ಭುತ ಪ್ರವಾಸಿ ತಾಣಗಳಲ್ಲಿ ಕ್ಯಾಶ್‌ಲೆಸ್‌ ಪಾವತಿ ಮೂಲಕ ಬೇಕಾದ್ದನ್ನು ಖರೀದಿಸಬಹುದು. ಈ ವ್ಯವಸ್ಥೆಯು ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಏನಿದು ಕ್ರಿಪ್ಟೋ ಪಾವತಿ?
ಭೂತಾನ್‌ ದೇಶ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಆ ದೇಶದಲ್ಲಿ ಏನೇ ಖರೀದಿ ಮಾಡಿದರೂ ಕ್ರಿಪ್ಟೋ ಮೂಲಕ ಹಣ ಪಾವತಿಸಬಹುದು. ಬೈನಾನ್ಸ್ ಅಪ್ಲಿಕೇಶನ್ ಡೈನಾಮಿಕ್ ಅಥವಾ ಸ್ಟ್ಯಾಟಿಕ್ ಕ್ಯೂಆರ್ ಕೋಡ್‌ಗಳನ್ನು ಬಳಸಿಕೊಂಡು ಹಣದ ವಹಿವಾಟನ್ನು ನಡೆಸಬಹುದು. ಇದು ಅತ್ಯಂತ ಸುರಕ್ಷಿತವಾಗಿದೆ ಎಂಬ ಅಭಿಪ್ರಾಯವಿದೆ.

ಈ ವ್ಯವಸ್ಥೆಯು BNB, BTC ಮತ್ತು USDC ಯಂತಹ 100 ಕ್ಕೂ ಹೆಚ್ಚು ಕ್ರಿಪ್ಟೋ ಕರೆನ್ಸಿಗಳನ್ನು ಒಳಗೊಂಡಿದೆ . ಎಲ್ಲಾ ಪಾವತಿಗಳನ್ನು DK ಬ್ಯಾಂಕ್ ಮೂಲಕ ಭೂತಾನ್ ಕರೆನ್ಸಿಯಲ್ಲಿ ಸಿಗುತ್ತದೆ. ಕರೆನ್ಸಿ ಎಕ್ಸ್‌ಚೇಂಜ್ ಸಮಸ್ಯೆಗಳು, ವಹಿವಾಟು ಶುಲ್ಕಗಳು ಮತ್ತು ಕಾರ್ಡ್ ಸ್ವೀಕೃತಿಯ ಅಡೆತಡೆಗಳಿಗೆ ಇದು ಪರಿಹಾರವಾಗಲಿದೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!