ದೆಹಲಿಯ ಈ ಜಾಗಗಳಿಗೆ ನೀವು ಹೋಗಿದ್ದೀರಾ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ವರ್ಷದ ಅಷ್ಟೂ ದಿನವು ದೆಹಲಿಯ ಪ್ರವಾಸಿ ಸ್ಥಳಗಳಲ್ಲಿ ಜನರು ಕಿಕ್ಕಿರಿದು ಸೇರುತ್ತಾರೆ.
ದೆಹಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದಿಡೀ ವಾರ ಸುತ್ತಬಹುದಾದ ತಾಣಗಳು ರಾಷ್ಟ್ರ ರಾಜಧಾನಿಯಲ್ಲಿದೆ. ಆದರೆ ಬಹಳ ಪ್ರಮುಖವಾಗಿ ಪ್ರವಾಸಿಗರು ತಪ್ಪದೇ ನೋಡಲೇಬೇಕಾದ ದೆಹಲಿಯ ಆರು ಪ್ರವಾಸಿ ತಾಣಗಳ ಕುರಿತು ಇಲ್ಲಿ ಮಾಹಿತಿಯನ್ನು ನೀಡಿದ್ದೇವೆ. ದೆಹಲಿ ಪ್ರವಾಸ ಕೈಗೊಳ್ಳುವವರು ಒಮ್ಮೆಯಾದರೂ ಈ ಜಾಗಗಳಿಗೆ ಹೋಗಿ ಬರಬೇಕು.
ಲ್ಯಾನ್ಸ್‌ಡೌನ್
ರಾಜಧಾನಿ ದೆಹಲಿಯಿಂದ ಸರಿ ಸುಮಾರು 260 ಕಿ.ಮೀ ದೂರದಲ್ಲಿ ಲ್ಯಾನ್ಸ್‌ಡೌನ್ ಎಂಬ ಸುಂದರವಾದ ಸ್ಥಳವಿದೆ. ಲ್ಯಾನ್ಸ್‌ಡೌನ್ ಅತ್ಯದ್ಭುತವಾದ ಗಿರಿಧಾಮವಾಗಿದೆ. ದೆಹಲಿಯ ನಗರ ದಟ್ಟಣೆಯನ್ನು ಇಷ್ಟಪಡದ ಮಂದಿ ಈ ಗಿರಿಧಾಮದಲ್ಲಿ ತಂಪಾದ ಗಾಳಿಯೊಂದಿಗೆ ಮೈಕೈ ಅರಳಿಸಿಕೊಳ್ಳಬಹುದು. ಇಲ್ಲಿ ನೋಡಬಹುದಾದ ಅನೇಕ ಆಕರ್ಷಕ ತಾಣಗಳಿವೆ. ಜೀವನ ಸಂಗಾತಿ ಆಥವಾ ಗೆಳೆಯರೊಂದಿಗೆ ವೀಕೆಂಡ್‌ನಲ್ಲಿ ಈ ಜಾಗಕ್ಕೆ ಹೋಗಬಹುದು.

ಜಿಮ್ ಕಾರ್ಬೆಟ್
ದೆಹಲಿಯಿಂದ 250 ಕಿ.ಮೀ ದೂರದಲ್ಲಿ ಜಿಮ್ ಕಾರ್ಬೆಟ್ ಇದೆ. ವನ್ಯಜೀವಿ ಪ್ರೇಮಿಗಳಾಗಿದ್ದರೆ ಬಹುಶಃ ಜಿಮ್ ಕಾರ್ಬೆಟ್ ನೆಚ್ಚಿನ ತಾಣವಾಗಬಹುದು. ಇಲ್ಲಿ ಹುಲಿಗಳು ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿವೆ. ಗೆಳೆಯರ ಜೊತೆಗೆ ಥ್ರಿಲ್ಲಿಂಗ್ ಸಫಾರಿಯನ್ನು ಕೈಗೊಳ್ಳಬಹುದು. ನದಿಯ ತಟದಲ್ಲಿ ರೆಸಾರ್ಟ್ ಇದ್ದು, ಅಲ್ಲಿ ವಾಸ್ತವ್ಯ ಹೂಡಿ ಮಜಾ ಮಾಡಲು ಅವಕಾಶವಿದೆ.

ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನ
ಜಿಮ್ ಕಾರ್ಬೆಟ್ ಹೊರತಾಗಿಯೂ ಪ್ರವಾಸಿಗರು ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನಕ್ಕೂ ಕೂಡ ದೆಹಲಿಯಿಂದ ಭೇಟಿ ನೀಡಬಹುದು. ಇದು ವೈವಿಧ್ಯಮಯ ಪ್ರಾಣಿ ಸಂಕುಲಗಳನ್ನು ಹೊಂದಿರುವ ಬಹಳ ಸೊಗಸಾದ ಉದ್ಯಾನವಾಗಿದೆ. ಇದು ದೆಹಲಿಯಿಂದ ಸರಿ ಸುಮಾರು 220 ಕಿ.ಮೀ ದೂರದಲ್ಲಿರುವ ಭರತ್‌ಪುರದಲ್ಲಿದೆ. ೀ ತಾಣವು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿಕೊಂಡಿದ್ದು ಪಕ್ಷಿವೀಕ್ಷಣೆಗೆ ಸ್ವರ್ಗಸೀಮೆಯಾಗಿದೆ. ವನ್ಯ ಜೀವಿಗಳ ಪ್ರೇಮಿಗಳು ತಪ್ಪದೇ ಇಲ್ಲಿಗೆ ಭೇಟಿ ನೀಡಬಹುದು.

ಹರಿದ್ವಾರ
ದೆಹಲಿಯಿಂದ ಸುಮಾರು 240 ಕಿ.ಮೀ ದೂರದಲ್ಲಿರುವ ಹರಿದ್ವಾರವು ಬಹಳ ಪ್ರಖ್ಯಾತ ಹಿಂದೂ ಧಾರ್ಮಿಕ ಸ್ಥಳವಾಗಿದೆ. ಹರಿದ್ವಾರದ ಸ್ಥಳಗಳನ್ನು ನೋಡಲು ಬಯಸಿದರೆ ದೆಹಲಿಯಿಂದ ಸುಲಭವಾಗಿ ತೆರಳಬಹುದು. ಹರಿದ್ವಾರದ ರಾಷ್ಟ್ರೀಯ ಉದ್ಯಾನವನದಲ್ಲಿ ಜೀಪ್ ಸಫಾರಿಯನ್ನು ಪ್ರವಾಸಿಗರು ಆನಂದಿಸಬಹುದು.

ರಿಷಿಕೇಶ
ಸಾಹಸ ಮತ್ತು ಯೋಗಕ್ಕೆ ಎಂಬ ಹೆಸರಿನಿಂದ ಕರೆಯಲ್ಪಡುವ ರಿಷಿಕೇಶವು ಹಿಂದೂಗಳ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳವಾಗಿದೆ. ಇದು ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 240 ಕಿ.ಮೀ ದೂರದಲ್ಲಿದೆ. ಸಾಹಸ ಚಟುವಟಿಕೆ ಇಷ್ಟಪಡುವ ಮತ್ತು ಪ್ರಶಾಂತವಾದ ವಾತಾವರಣ ಬಯಸುವ ಮಂದಿ ತಪ್ಪದೇ ರಿಷಿಕೇಶಕ್ಕೆ ಹೋಗಬೇಕು. ಇಲ್ಲಿ ಭೇಟಿ ನೀಡಲು ಸಾಕಷ್ಟು ಸುಂದರವಾದ ಸ್ಥಳಗಳಿವೆ. ಅಷ್ಟೇ ಅಲ್ಲದೆ ಬಂಗೀ ಜಂಪಿಂಗ್, ರಿವರ್ ರಾಪ್ಟಿಂಗ್, ರಾಕ್ ಕ್ಲೈಂಬಿಂಗ್, ಪ್ಯಾರಾಗ್ಲೈಡಿಂಗ್ ಸೇರಿದಂತೆ ಅನೇಕ ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.
