Tuesday, August 19, 2025
Tuesday, August 19, 2025

ಪ್ರವಾಸಿಗರನ್ನು ಬಾ ಎನ್ನುವ ʼಬಾಬಾʼ ಫಾಲ್ಸ್!

ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಫಾಲ್ಸ್​​ ಸದಾ ಜೀವ ಕಳೆಯಿಂದ ಇರುತ್ತದೆ.ಸಾವಿರಾರು ಪ್ರವಾಸಿಗರು ಫಾಲ್ಸ್​ ಕಣ್ತುಂಬಿಕೊಂಡು ವಿಕೇಂಡ್​ಗಳಲ್ಲಿ ಮಜಾ ಮಾಡುತ್ತಾರೆ.

ಮಳೆಗಾಲ ಬಂದರೆ ಸಾಕು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಶುರುವಾಗುತ್ತದೆ. ದಟ್ಟ ಕಾಡಿನ ನಡುವೆ ಸದಾ ಹಾಲ್ನೊರೆಯಂತೆ ಉಕ್ಕುವ ಜಲಪಾತಗಳನ್ನ ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಫಾಲ್ಸ್​ ಸದಾ ಜೀವ ಕಳೆಯಿಂದ ಕೂಡಿರುತ್ತದೆ. ಮೂರು ರಾಜ್ಯದಿಂದ ಸಾವಿರಾರು ಜನರು ಫಾಲ್ಸ್​ ಕಣ್ತುಂಬಿಕೊಂಡು ವಿಕೇಂಡ್​ಗಳಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಅಷ್ಟಕ್ಕೂ ಬಾಬಾ ಫಾಲ್ಸ್​ ಇರೋದೆಲ್ಲಿ?ಅಲ್ಲಿಗೆ ಹೇಗೆ ಹೋಗಬೇಕು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅತೀ ಹೆಚ್ಚು ಮಳೆಯಾಗುತ್ತದೆ. ಇದೇ ಕಾರಣಕ್ಕೆ ಗುಡ್ಡದ ಮೇಲಿಂದ ಅಲ್ಲಲ್ಲಿ ನೀರು ಝರಿಗಳಾಗಿ ಉಕ್ಕುತ್ತದೆ. ಅದರಲ್ಲೂ ಬೃಹತ್ ಬಂಡೆಗಲ್ಲಿನ ಮೇಲಿಂದ ಸಾವಿರ ಅಡಿಗಳ ಮೇಲಿಂದ ನೀರು ಧುಮಿಕ್ಕುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ಮಹಾರಾಷ್ಟ್ರದ ಸಾವಂತವಾಡಿಯ ಚೌಕುಲಾ ಎಂಬ ಗ್ರಾಮದ ಹೊರ ವಲಯದಲ್ಲಿ ಈ ಫಾಲ್ಸ್​​ ಇದ್ದು ಒಂದೇ ಕಡೆ ಒಂದು ಕಿಮೀ ಅಂತರದಲ್ಲಿ ನಾಲ್ಕೈದು ಫಾಲ್ಸ್​​ಗಳು ಪ್ರವಾಸಿಗರಿಗೆ ಸಿಗುತ್ತದೆ

ಬಾಬಾ ಫಾಲ್ಸ್ ಹೆಚ್ಚು ಪ್ರಸಿದ್ಧವಾಗಿದೆ. ಈ ಮೊದಲು ಫಾಲ್ಸ್​​ನಿಂದ ಇಪ್ಪತ್ತು ಕಿ.ಮೀ ದೂರದಲ್ಲಿರುವ ಅಂಬೋಲಿ ಫಾಲ್ಸ್​​ಗೆ ಸಾಕಷ್ಟು ಪ್ರವಾಸಿಗರು ಬರುತ್ತಿದ್ದರು. ಆದರೆ ಈಗ ಅಲ್ಲಿಗಿಂತ ಬಾಬಾಫಾಲ್ಸ್​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಬೆಳಗಾವಿಯಿಂದ 50ಕಿಮೀ ದೂರದಲ್ಲಿರುವ ಈ ಫಾಲ್ಸ್​​​ಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ಹೋಗಬಹುದಾಗಿದೆ.

ಚೌಕುಲಾ ಎಂಬ ಗ್ರಾಮದಿಂದ ಎರಡು ಕಿ.ಮೀ ಕಾಲ್ನಡಿಗೆಯಲ್ಲಿ ಹೋದರೆ ಈ ಫಾಲ್ಸ್​ ಸಿಗುತ್ತೆ. ಆರಂಭದಲ್ಲಿ ಸಣ್ಣ ಝರಿಗಳಾಗಿ ಜಲಪಾತಗಳು ಸಿಗುತ್ತವೆ. ಮುಂದೆ ಹೋದಂತೆ ನಾಲ್ಕು ಬಂಡೆಗಲ್ಲಿನ ಮೇಲೆ ಉಕ್ಕುವ ಜಲಪಾತಗಳು ಕಾಣಬಹುದು. ಬಂಡೆಗಲ್ಲಿನ ಮಧ್ಯೆ ಹೋಗಿ ಮೇಲಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಸಖತ್ ಎಂಜಾಯ್ ಮಾಡಬಹುದು. ಈ ಸೊಗಸಾದ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ದೂರದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜನ ಹಾಗೂ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಪ್ರವಾಸಿಗರು ಬಂದು ಇಲ್ಲಿಗೆ ಬರುತ್ತಾರೆ.

Deekshith Nair

Deekshith Nair

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!