Tuesday, October 6, 2026
Tuesday, October 6, 2026

ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿರುವ ಮಾದರಿ ಗ್ರಾಮ!

ದೇಶದ ಹಳ್ಳಿಗಳು ಮತ್ತು ನಗರಗಳು ಕೂಡ ಈ ಒಡಿಶಾದ ಗ್ರಾಮವನ್ನು ಮಾದರಿಯಾಗಿ ಸ್ವೀಕರಿಸಿದರೆ, ಮುಂದಿನ ಪೀಳಿಗೆಗೆ ಹಸಿರು ಮತ್ತು ಸ್ವಚ್ಛ ವಾತಾವರಣವನ್ನು ಕೊಡುಗೆಯಾಗಿ ನೀಡಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೇಶಾದ್ಯಂತ ಪ್ಲಾಸ್ಟಿಕ್ ಮಾಲಿನ್ಯವು ಪ್ರಮುಖ ಪರಿಸರ ಸಮಸ್ಯೆಯಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ, ಒಡಿಶಾದ ಬೊಬೈಜೊಡಾ ಎಂಬ ಗ್ರಾಮವು ಕಳೆದ 15 ವರ್ಷಗಳಿಂದ ಪ್ಲಾಸ್ಟಿಕ್ ಬಳಕೆಯಿಂದ ಸಂಪೂರ್ಣವಾಗಿ ದೂರುಳಿದು ದೇಶಕ್ಕೆ ಮಾದರಿಯಾಗಿದೆ. ಈ ಅಪರೂಪದ ಮತ್ತು ಸ್ಫೂರ್ತಿದಾಯಕ ಗ್ರಾಮದ ಸಾಧನೆಯನ್ನು ಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದ್ದಾರೆ.

ಇದು ಈಶಾನ್ಯ ಭಾರತದ ಅತಿಸ್ವಚ್ಛ ಹಳ್ಳಿ

ಉದ್ಯಮಿ ಹರ್ಷ ಗೋಯೆಂಕಾ, ಎಕ್ಸ್‌ ಖಾತೆಯಲ್ಲಿ ಒಡಿಶಾದ ಈ ಗ್ರಾಮದ ಕುರಿತು ವಿಡಿಯೋ ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದು, ʼನಮ್ಮ ದೇಶದ ಪ್ರತಿಯೊಂದು ಗ್ರಾಮ ಮತ್ತು ನಗರಗಳು ಏಕೆ ಈ ರೀತಿ ಇರಬಾರದು?ʼ ಎಂದು ಪ್ರಶ್ನಿಸುವ ಮೂಲಕ ಇತರರಿಗೂ ಪರಿಸರ ಕಾಳಜಿಯ ಸ್ಫೂರ್ತಿ ತುಂಬಿದ್ದಾರೆ. ಇಲ್ಲಿನ ಗ್ರಾಮಸ್ಥರು ಒಗ್ಗಟ್ಟಿನಿಂದ ಕೈಗೊಂಡ ಕಠಿಣ ನಿರ್ಧಾರವೇ ಈ ಸಾಧನೆಗೆ ಮೂಲಕಾರಣವಾಗಿದೆ.

ಗ್ರಾಮದ ಒಳಗೆ ಯಾವುದೇ ರೀತಿಯ ಪಾಲಿಥಿನ್ ಚೀಲಗಳು, ಪ್ಲಾಸ್ಟಿಕ್ ಲೋಟಗಳು ಅಥವಾ ಇತರೆ ಬಳಕೆ ವಸ್ತುಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಗ್ರಾಮಸ್ಥರು ಶಾಪಿಂಗ್ ಅಥವಾ ದಿನಸಿ ಸಾಮಗ್ರಿಗಳನ್ನು ತರಲು ಬಟ್ಟೆಯ ಚೀಲಗಳು ಹಾಗೂ ನೈಸರ್ಗಿಕವಾಗಿ ತಯಾರಿಸಿದ ಸಾಂಪ್ರದಾಯಿಕ ವಸ್ತುಗಳನ್ನು ಬಳಸುತ್ತಾರೆ.

ಯುವಕರು ಹಾಗೂ ಹಿರಿಯರು ಒಟ್ಟಾಗಿ ಸೇರಿ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ, ಬರುವ ಪ್ರವಾಸಿಗರು ಮತ್ತು ಹೊರಗಿನವರಿಗೂ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸುತ್ತಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ