Tuesday, August 11, 2026
Tuesday, August 11, 2026

ವಿಶ್ವಪ್ರಸಿದ್ಧ ಪರ್ವತಾರೋಹಿ ನಿರ್ಮಲ್ ಪುರ್ಜಾ ಹಿಮಪಾತಕ್ಕೆ ಬಲಿ

ಹಿಮಾಲಯ ಮತ್ತು ಕರಾಕೋರಂ ಪರ್ವತ ಶ್ರೇಣಿಯ ಅಪಾಯಕಾರಿ ಬ್ರಾಡ್ ಪೀಕ್ ಶಿಖರದ ಆರೋಹಣ ನಡೆಸುತ್ತಿದ್ದಾಗ ಸಂಭವಿಸಿದ ಬೃಹತ್ ಹಿಮಪಾತದಲ್ಲಿ ನಿರ್ಮಲ್ ಪುರ್ಜಾ ಸೇರಿದಂತೆ ಹಲವು ಪರ್ವತಾರೋಹಿಗಳು ಸಿಲುಕಿಕೊಂಡಿದ್ದರು.

ವಿಶ್ವದ ಅತ್ಯಂತ ಪ್ರಸಿದ್ಧ ಹಾಗೂ ದಾಖಲೆಗಳ ಪರ್ವತಾರೋಹಿ ನಿರ್ಮಲ್ ‘ನಿಮ್ಸ್’ ಪುರ್ಜಾ ಅವರು ಬ್ರಾಡ್ ಪೀಕ್ ಪರ್ವತಾರೋಹಣ ಕೈಗೊಂಡಿದ್ದಾಗ ಸಂಭವಿಸಿದ ಭೀಕರ ಹಿಮಪಾತದಲ್ಲಿ ಸಿಲುಕಿ ದುರಂತ ಅಂತ್ಯ ಕಂಡಿದ್ದಾರೆ. ಈ ಆಘಾತಕಾರಿ ಘಟನೆಗೆ ತುರ್ತು ರಕ್ಷಣೆ ಹಾಗೂ ತುರ್ತು ವೈದ್ಯಕೀಯ ಸೇವಾ ಸಂಸ್ಥೆಯಾದ 'ಗ್ಲೋಬಲ್ ರೆಸ್ಕ್ಯೂ' ಮತ್ತು ಜಾಗತಿಕ ಸಾಹಸ ಕ್ರೀಡಾ ಸಮುದಾಯವು ತೀವ್ರ ಕಂಬನಿ ಮಿಡಿದಿದೆ.

ಇದನ್ನೂ ಓದಿ: ಹಿಮಾಲಯದ ಎದೆಯಲ್ಲಿ ಭಾರತೀಯ ವೀರರ ಅಮರ ತಾಣ

ಹಿಮಾಲಯ ಮತ್ತು ಕರಾಕೋರಂ ಪರ್ವತ ಶ್ರೇಣಿಯ ಅಪಾಯಕಾರಿ ಬ್ರಾಡ್ ಪೀಕ್ ಶಿಖರದ ಆರೋಹಣ ನಡೆಸುತ್ತಿದ್ದಾಗ ಸಂಭವಿಸಿದ ಬೃಹತ್ ಹಿಮಪಾತದಲ್ಲಿ ನಿರ್ಮಲ್ ಪುರ್ಜಾ ಸೇರಿದಂತೆ ಹಲವು ಪರ್ವತಾರೋಹಿಗಳು ಸಿಲುಕಿಕೊಂಡಿದ್ದರು. ಗ್ಲೋಬಲ್ ರೆಸ್ಕ್ಯೂ ಸಂಸ್ಥೆ ಮತ್ತು ಸ್ಥಳೀಯ ರಕ್ಷಣಾ ತಂಡಗಳು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡರೂ, ಪರ್ವತದ ಅತ್ಯಂತ ಹಿಮಾವೃತ ಹಾಗೂ ಭೀಕರ ಹವಾಮಾನದ ಸವಾಲುಗಳಿಂದಾಗಿ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.

ಮಾಜಿ ಬ್ರಿಟಿಷ್ ಗೂರ್ಖಾ ಯೋಧರಾಗಿದ್ದ ನಿರ್ಮಲ್ ಪುರ್ಜಾ ಅವರು ಜಗತ್ತಿನ 8,000 ಮೀಟರ್‌ಗಿಂತ ಹೆಚ್ಚಿನ ಎತ್ತರದ ಎಲ್ಲಾ 14 ಪ್ರಮುಖ ಪರ್ವತ ಶಿಖರಗಳನ್ನು ಕೇವಲ 189 ದಿನಗಳಲ್ಲಿ (6 ತಿಂಗಳು 6 ದಿನ) ಏರಿ ಜಾಗತಿಕ ದಾಖಲೆ ಸೃಷ್ಟಿಸಿದ್ದರು (ಈ ಸಾಧನೆಯನ್ನು ಆಧರಿಸಿ '14 Peaks: Nothing Is Impossible' ಎಂಬ ಪ್ರಸಿದ್ಧ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ).

ಚಳಿಗಾಲದಲ್ಲೇ ಅತ್ಯಂತ ಅಪಾಯಕಾರಿ 'ಕೆ2' (K2) ಶಿಖರವನ್ನು ಏರಿದ ಮೊದಲ ನೇಪಾಳಿ ತಂಡದ ನಾಯಕತ್ವವನ್ನು ಇವರೇ ವಹಿಸಿದ್ದರು. ಪರ್ವತಾರೋಹಣದ ಜತೆಗೆ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಪ್ರಾಣದ ಹದಿನಾಲ್ಕರ ಹಂಗು ತೊರೆದು ಸಿಲುಕಿದ್ದ ಅನೇಕ ಸಹ-ಪರ್ವತಾರೋಹಿಗಳ ಜೀವವನ್ನು ಇವರು ರಕ್ಷಿಸಿದ್ದರು.

ಗ್ಲೋಬಲ್ ರೆಸ್ಕ್ಯೂ ಸಂಸ್ಥೆಯು ತನ್ನ ಅಧಿಕೃತ ಹೇಳಿಕೆಯಲ್ಲಿ, ‘ನಿರ್ಮಲ್ ಪುರ್ಜಾ ಅವರು ಮಾನವ ಶಕ್ತಿ ಮತ್ತು ಅಸಾಧ್ಯವಾದುದನ್ನೂ ಸಾಧಿಸುವ ಆತ್ಮವಿಶ್ವಾಸಕ್ಕೆ ಸಾಟಿಯಿಲ್ಲದ ಉದಾಹರಣೆಯಾಗಿದ್ದರು. ಪರ್ವತಾರೋಹಣ ಕ್ಷೇತ್ರದಲ್ಲಿ ಅವರು ಬಿಟ್ಟುಹೋದ ಸಾಹಸದ ಹೆಜ್ಜೆಗುರುತುಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿರಲಿವೆ’ ಎಂದು ಸಂತಾಪ ಸೂಚಿಸಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ