Sunday, December 28, 2025
Sunday, December 28, 2025

ರೈಲ್ವೆ ಪ್ರಯಾಣದ ವೇಳೆ ಫ್ರೀ ಒಟಿಟಿಗಳಲ್ಲಿ ಸಿನಿಮಾ ನೋಡಿ

ರೈಲ್ವೆ ಪ್ರಯಾಣಿಕರನ್ನು ಹೆಚ್ಚಿಗೆ ಸೆಳೆಯಲು ಹಾಗೂ ಅವರ ಪ್ರಯಾಣವನ್ನು ಇನ್ನಷ್ಟು ಹಿತಕರವಾಗಿಸಲು ರೈಲ್ವೆ ಇಲಾಖೆ ಉಪಯೋಕರ ಅಪ್ಲಿಕೇಶನ್ ಒಂದನ್ನು ಪರಿಚಯಿಸಿದೆ. ರೈಲ್ ಒನ್ ಹೆಸರಿನಲ್ಲಿ ತರಲಾದ ಈ ಅಪ್ಲಿಕೇಶನ್‌ ನಲ್ಲಿ ಟಿಕೆಟ್ ಬುಕಿಂಗ್, PNR ಸ್ಥಿತಿ, ರೈಲು ಲೈವ್‌ ಸ್ಥಳದಂಥ ಸಾಮಾನ್ಯ ಸೇವೆಗಳ ಜತೆಗೆ, ಉಚಿತವಾಗಿ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶವನ್ನೂ ಒದಗಿಸಿದೆ.

ರೈಲಿನ ಪ್ರಯಾಣದ ವೇಳೆ ಮನರಂಜನೆಗಾಗಿ ಸ್ಮಾರ್ಟ್ರೋನ್‌ ಗಳಲ್ಲಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ವೀಕ್ಷಿಸುವಾಗ ಡೇಟಾ ಪ್ಯಾಕ್‌ ಗಳು ಖಾಲಿಯಾಗುವುದು ಮತ್ತು ನೆಟ್ವರ್ಕ್ ಸಮಸ್ಯೆಗಳನ್ನು ಅನುಭವಿಸುವ ಮಂದಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ರೈಲ್ ಒನ್ ಎಂಬ ಅಪ್ಲಿಕೇಶನ್ನಲ್ಲಿ ಪ್ರಯಾಣಿಕರಿಗೆ ವಿವಿಧ ಭಾಷೆಗಳಲ್ಲಿ ಚಲನಚಿತ್ರಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನೋಡುವ ಅವಕಾಶವಿದೆ. ರೈಲಿನಲ್ಲಿ ಉಚಿತ ವೈಫೈ ಸೌಲಭ್ಯವನ್ನು ಬಳಸಿಕೊಂಡು, ಪ್ರಯಾಣಿಕರು OTT ಯಲ್ಲಿ ಸಿನಿಮಾಗಳನ್ನು ಉಚಿತವಾಗಿ ಸ್ಟ್ರೀಮ್ ಮಾಡಬಹುದು.

rail one app

ರೈಲ್ ಒನ್ ಅಪ್ಲಿಕೇಶನ್ ವ್ಯಾಪಕ ಶ್ರೇಣಿಯ ರೈಲ್ವೆ ಸೇವೆಗಳಿಗೆ ಅನುವುಮಾಡಿಕೊಟ್ಟಿದ್ದು, ಈ ಹಿಂದೆ ಟಿಕೆಟ್ ಬುಕ್ ಮಾಡಲು ಒಂದು ಆ್ಯಪ್, ಕಾಯ್ದಿರಿಸದ ಟಿಕೆಟ್ ಗಳಿಗೆ ಇನ್ನೊಂದು ಮತ್ತು ಆಹಾರವನ್ನು ಆರ್ಡರ್ ಮಾಡಲು ಇನ್ನೊಂದು ಆ್ಯಪ್ ಬಳಸಲಾಗುತ್ತಿತ್ತು. ಆದರೆ ಈಗ, ಈ ಎಲ್ಲಾ ಸೇವೆಗಳನ್ನು ರೈಲ್ ಒನ್ ಆ್ಯಪ್ ಮೂಲಕವೇ ಪಡೆದುಕೊಳ್ಳಬಹುದು. ಈ ಆ್ಯಪ್ ಪ್ರಸ್ತುತ ಗೂಗಲ್ ಪ್ಲೇ ಮತ್ತು ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದೆ. ರೈಲ್ವೆ ಟಿಕೆಟ್ ಬುಕ್ ಮಾಡುವುದರ ಜತೆಗೆ, ಪ್ಲಾಟ್ ಫಾರ್ಮ್ ಟಿಕೆಟ್‌ಗಳು, ರೈಲಿನಲ್ಲಿ ಆಹಾರವನ್ನು ಆರ್ಡರ್ ಮಾಡುವುದು ಮತ್ತು ಸಹಾಯಕ್ಕಾಗಿ ರೈಲ್ ಮದದ್ ಮೂಲಕ ಪಡೆಯಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!