Wednesday, November 4, 2026
Wednesday, November 4, 2026

11 ರು.ಗೆ ವಿಯೆಟ್ನಾಂ ವಿಮಾನ ಟಿಕೆಟ್

ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ ಪ್ರಯಾಣಿಸಲು ಅವಕಾಶವಿದ್ದು, ಕೆಲವು ನಿರ್ದಿಷ್ಟ ದಿನಗಳಲ್ಲಿ ಈ ಕೊಡುಗೆ ಅನ್ವಯಿಸುವುದಿಲ್ಲ. ಪ್ರಯಾಣಿಕರು ನವೆಂಬರ್ 1ರ ರಾತ್ರಿ 9.30ರೊಳಗೆ ವಿಯೆಟ್ಜೆಟ್ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ವಿಯೆಟ್ನಾಂಗೆ ಪ್ರಯಾಣಿಸುವ ಭಾರತೀಯರಿಗೆ ವಿಯೆಟ್ಜೆಟ್ ವಿಮಾನಯಾನ ಸಂಸ್ಥೆ 11 ರು. ರಿಂದ (ತೆರಿಗೆ ಮತ್ತು ಶುಲ್ಕ ಹೊರತುಪಡಿಸಿ) ಆರಂಭವಾಗುವ ವಿಶೇಷ ವಿಮಾನ ಟಿಕೆಟ್ ಕೊಡುಗೆಯನ್ನು ಘೋಷಿಸಿದೆ. ಏಷ್ಯಾದಲ್ಲಿ ತನ್ನ ವಿಮಾನ ಸಂಪರ್ಕ ಜಾಲ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ಪ್ರಕಟಿಸಿದ್ದು, 2027ರ ಅಕ್ಟೋಬರ್ 31ರವರೆಗಿನ ಪ್ರಯಾಣಕ್ಕೆ ಟಿಕೆಟ್ ಕಾಯ್ದಿರಿಸಬಹುದಾಗಿದೆ. ದೆಹಲಿ, ಮುಂಬೈ, ಅಹಮದಾಬಾದ್‌, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಿಂದ ವಿಯೆಟ್ನಾಂನ ಪ್ರಮುಖ ನಗರಗಳಾದ ಹನೋಯ್ ಹಾಗೂ ಹೋ ಚಿ ಮಿನ್ ನಗರಗಳಿಗೆ ತೆರಳುವ ವಿಮಾನಗಳಿಗೆ ಈ ಕೊಡುಗೆ ಅನ್ವಯಿಸಲಿದೆ. ನವೆಂಬರ್ 1ರಿಂದ 2027ರ ಅಕ್ಟೋಬರ್ 31ರವರೆಗೆ ಪ್ರಯಾಣಿಸಲು ಅವಕಾಶವಿದ್ದು, ಕೆಲವು ನಿರ್ದಿಷ್ಟ ದಿನಗಳಲ್ಲಿ ಈ ಕೊಡುಗೆ ಅನ್ವಯಿಸುವುದಿಲ್ಲ. ಪ್ರಯಾಣಿಕರು ನವೆಂಬರ್ 1ರ ರಾತ್ರಿ 9.30ರೊಳಗೆ ವಿಯೆಟ್ಜೆಟ್ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಈ ವಿಶೇಷ ದರ ಸೀಮಿತ ಅವಧಿಗೆ ಲಭ್ಯವಿದ್ದು, ತೆರಿಗೆ ಮತ್ತು ಇತರ ಶುಲ್ಕ ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ