ವಿದೇಶಿ ಟ್ರಾವೆಲರ್ ಮುಂಬೈ-ಗೋವಾ ರೈಲು ಪಯಣದ ವಿಡಿಯೋ ವೈರಲ್
ಮುಂಬೈನಿಂದ ಗೋವಾಕ್ಕೆ ತೆರಳುವ ಸಂದರ್ಭದಲ್ಲಿ ಅವರು ಆರಿಸಿಕೊಂಡಿದ್ದ ಪ್ರಥಮ ದರ್ಜೆ ಸ್ಲೀಪರ್ ಕೋಚ್ ಹಾಗೂ ಅದರ ಖಾಸಗಿ ಕ್ಯಾಬಿನ್ ಸೌಕರ್ಯಗಳನ್ನು ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದಾರೆ.
ಪ್ರಸಿದ್ಧ ವಿದೇಶಿ ಪ್ರಯಾಣ ಕಂಟೆಂಟ್ ಕ್ರಿಯೇಟರ್ ಕರ ವ್ಹೈಲ್ಬರ್ (Kara Wildbur) ಭಾರತದಲ್ಲಿ ರೈಲು ಪ್ರಯಾಣ ಮಾಡಿದ ಅನುಭವವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂಬೈನಿಂದ ಗೋವಾಕ್ಕೆ ತಮ್ಮ 12 ಗಂಟೆಗಳ ಮೊದಲ ದರ್ಜೆಯ ಸ್ಲೀಪರ್ ರೈಲು ಪ್ರಯಾಣದ (First-Class Sleeper Train Journey) ಒಳನೋಟಗಳು ಹಾಗೂ ಅಲ್ಲಿನ ಸೌಲಭ್ಯಗಳನ್ನು ಅವರು ವಿಡಿಯೋ ಮೂಲಕ ಪರಿಚಯಿಸಿದ್ದು, ಈ ವಿಡಿಯೋಗೆ ನೆಟ್ಟಿಗರಿಂದ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ಭಾರತದಲ್ಲಿ ನದಿ ಕ್ರೂಸ್ ಪ್ರವಾಸ: STIC ಟ್ರಾವೆಲ್ ಗ್ರೂಪ್
ಮುಂಬೈನಿಂದ ಗೋವಾಕ್ಕೆ ತೆರಳುವ ಸಂದರ್ಭದಲ್ಲಿ ಅವರು ಆರಿಸಿಕೊಂಡಿದ್ದ ಪ್ರಥಮ ದರ್ಜೆ ಸ್ಲೀಪರ್ ಕೋಚ್ ಹಾಗೂ ಅದರ ಖಾಸಗಿ ಕ್ಯಾಬಿನ್ ಸೌಕರ್ಯಗಳನ್ನು ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದಾರೆ. ಸುದೀರ್ಘ 12 ಗಂಟೆಗಳ ಈ ರೈಲು ಹಾದಿಯಲ್ಲಿ ಪ್ರಯಾಣಿಸಿದ ಅನುಭವ ಹಾಗೂ ಭಾರತೀಯ ರೈಲ್ವೆಯ ವಿಭಿನ್ನ ಪ್ರಯಾಣ ಶೈಲಿಯನ್ನು ಅವರು ಜಾಗತಿಕ ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಡಿಯೋವನ್ನು ವೀಕ್ಷಿಸಿದ ಅನೇಕ ಭಾರತೀಯ ನೆಟ್ಟಿಗರು, ʼಸಾಂಪ್ರದಾಯಿಕ ರೈಲುಗಳ ಜತೆಗೆ ಭಾರತದ ಅತ್ಯಾಧುನಿಕ ಹಾಗೂ ಹೈ-ಸ್ಪೀಡ್ ರೈಲಾದ 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿನಲ್ಲೂ ಒಮ್ಮೆ ಪ್ರಯಾಣಿಸಿ ಅನುಭವ ಪಡೆಯಿರಿʼ ಎಂದು ಸಲಹೆ ನೀಡಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಆಗುತ್ತಿರುವ ಆಧುನಿಕ ಬದಲಾವಣೆಗಳು ಹಾಗೂ ಸೌಲಭ್ಯಗಳ ಕುರಿತು ಕಾಮೆಂಟ್‌ಗಳಲ್ಲಿ ಸಕಾರಾತ್ಮಕ ಚರ್ಚೆಗಳು ನಡೆದಿವೆ.
ವಿದೇಶಿ ಪ್ರವಾಸಿಗರು ಭಾರತೀಯ ರೈಲು ಪ್ರಯಾಣದ ವೈವಿಧ್ಯವನ್ನು ಅನ್ವೇಷಿಸುತ್ತಿರುವುದು ಮತ್ತು ಅದನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುತ್ತಿರುವುದು ಪ್ರವಾಸೋದ್ಯಮದ ದೃಷ್ಟಿಯಿಂದ ಮತ್ತಷ್ಟು ಕುತೂಹಲ ಮೂಡಿಸಿದೆ.