Saturday, July 18, 2026
Saturday, July 18, 2026

ಮಳೆಗಾಲವೇ ಈಗ ಪ್ರವಾಸಿಗರ ನೆಚ್ಚಿನ ಋತು

ಮಳೆಗಾಲವೇ ಈಗ ಪ್ರವಾಸಿಗರ ನೆಚ್ಚಿನ ಋತುವಾಗಿದ್ದು, ಶಿಲ್ಲಾಂಗ್, ವಯನಾಡು ಸೇರಿ ಹಸಿರು ತಾಣಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ.

ಭಾರತದಲ್ಲಿ ಮಳೆಗಾಲವನ್ನು ತಪ್ಪಿಸಿ ಪ್ರವಾಸ ಹೋಗುವ ಪದ್ಧತಿ ನಿಧಾನವಾಗಿ ಬದಲಾಗುತ್ತಿದೆ. ಇತ್ತೀಚಿನ ಪ್ರವಾಸ ಬುಕಿಂಗ್‌ಗಳ ವಿಶ್ಲೇಷಣೆಯ ಪ್ರಕಾರ, ಮಳೆಗಾಲವೇ ಈಗ ಅನೇಕ ಭಾರತೀಯರ ನೆಚ್ಚಿನ ಪ್ರವಾಸ ಋತುವಾಗಿ ಹೊರಹೊಮ್ಮಿದೆ. ಹಸಿರು ಪ್ರಕೃತಿ, ಜಲಪಾತಗಳು, ಮಂಜಿನಿಂದ ಆವರಿಸಿದ ಬೆಟ್ಟಗಳು ಹಾಗೂ ಕಡಿಮೆ ಜನಸಂದಣಿ ಮಳೆಗಾಲದ ಪ್ರವಾಸವನ್ನು ಹೆಚ್ಚು ಆಕರ್ಷಕವಾಗಿಸುತ್ತಿವೆ.

Untitled design - 2026-07-18T172904.956

ಈ ಪ್ರವೃತ್ತಿಯಲ್ಲಿ ಮೇಘಾಲಯದ ಶಿಲ್ಲಾಂಗ್, ಕೇರಳದ ವಯನಾಡು, ಕೂರ್ಗ್, ಮುನ್ನಾರ್, ಕೊಡೈಕೆನಾಲ್ ಹಾಗೂ ಈಶಾನ್ಯ ಭಾರತದ ಹಲವು ತಾಣಗಳಲ್ಲಿ ಬುಕಿಂಗ್‌ಗಳು ಗಮನಾರ್ಹವಾಗಿ ಹೆಚ್ಚಾಗಿವೆ. ಮಳೆಗಾಲದಲ್ಲಿ ಪ್ರಕೃತಿ ತನ್ನ ಸೊಬಗನ್ನು ಸಂಪೂರ್ಣವಾಗಿ ಅನಾವರಣಗೊಳಿಸುವುದರಿಂದ ಕುಟುಂಬಗಳು, ಯುವಕರು ಮತ್ತು ಪ್ರಕೃತಿ ಪ್ರಿಯರು ಈ ತಾಣಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದ ತಜ್ಞರ ಪ್ರಕಾರ, ಹೊಟೇಲ್‌ಗಳು ಮತ್ತು ವಿಮಾನ ದರಗಳಲ್ಲಿ ಆಫ್-ಸೀಸನ್ ರಿಯಾಯಿತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಮಳೆಗಾಲದ ಪ್ರವಾಸದ ಜನಪ್ರಿಯತೆ ಹಾಗೂ ‘ವರ್ಕ್ ಫ್ರಮ್ ಎನಿವೇರ್’ ಸಂಸ್ಕೃತಿಯೂ ಈ ಬದಲಾವಣೆಗೆ ಕಾರಣವಾಗಿದೆ. ವಾರಾಂತ್ಯದ ಚಿಕ್ಕ ಪ್ರವಾಸಗಳಿಗೂ ಮಳೆಗಾಲವನ್ನು ಜನರು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.

Untitled design - 2026-07-18T173002.625

ಆದರೆ, ಮಳೆಗಾಲದಲ್ಲಿ ಪ್ರವಾಸ ಕೈಗೊಳ್ಳುವವರು ಹವಾಮಾನ ಮುನ್ಸೂಚನೆ, ರಸ್ತೆ ಪರಿಸ್ಥಿತಿ ಮತ್ತು ಸ್ಥಳೀಯ ಆಡಳಿತದ ಸೂಚನೆಗಳನ್ನು ಗಮನಿಸಿ ಪ್ರಯಾಣಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸೂಕ್ತ ಮುನ್ನೆಚ್ಚರಿಕೆಗಳನ್ನು ಪಾಲಿಸಿದರೆ ಮಳೆಗಾಲದ ಪ್ರವಾಸವು ವಿಶಿಷ್ಟ ಮತ್ತು ನೆನಪಿನಲ್ಲಿ ಉಳಿಯುವ ಅನುಭವವಾಗಲಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!