Friday, June 26, 2026
Friday, June 26, 2026

ವಿಶ್ವದ 3ನೆಯ ಅತ್ಯಂತ ಕುಟುಂಬ ಸ್ನೇಹಿ ಏರ್‌ಪೋರ್ಟ್!

ಬೆಂಗಳೂರು ಏರ್‌ಪೋರ್ಟ್‌ ಕುಟುಂಬ ಸಹಿತ ಪ್ರಯಾಣಿಸುವವರಿಗೆ ಹೇಳಿ ಮಾಡಿಸಿದಂಥ ವಿಮಾನ ನಿಲ್ದಾಣ ಎಂದು ಗುರುತಿಸಲ್ಪಟ್ಟಿದ್ದು, ಇಲ್ಲಿನ ಶಿಶುಪಾಲನಾ ಸೌಲಭ್ಯಗಳು, ಮಕ್ಕಳಿಗಾಗಿ ವಿಶೇಷ ಪ್ಲೇಜೋನ್‌ಗಳು, ವಿಶಾಲ ಟರ್ಮಿನಲ್‌ಗಳು ಸೇರಿದಂತೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯಂತ ಕುಟುಂಬ ಸ್ನೇಹಿ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 3ನೆಯ ಸ್ಥಾನ ಪಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ಇದು ನಾಡಿನ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.

ಬೆಂಗಳೂರು ಏರ್‌ಪೋರ್ಟ್‌ ಕುಟುಂಬ ಸಹಿತ ಪ್ರಯಾಣಿಸುವವರಿಗೆ ಹೇಳಿ ಮಾಡಿಸಿದಂಥ ವಿಮಾನ ನಿಲ್ದಾಣ ಎಂದು ಗುರುತಿಸಲ್ಪಟ್ಟಿದ್ದು, ಇಲ್ಲಿನ ಶಿಶುಪಾಲನಾ ಸೌಲಭ್ಯಗಳು, ಮಕ್ಕಳಿಗಾಗಿ ವಿಶೇಷ ಪ್ಲೇಜೋನ್‌ಗಳು, ವಿಶಾಲ ಟರ್ಮಿನಲ್‌ಗಳು ಸೇರಿದಂತೆ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ‌ ಪ್ರವಾಸೋದ್ಯಮದಲ್ಲಿ ‘ನಮ್ಮ ಗೈಡ್’

ಮಕ್ಕಳಿಗಾಗಿ ವಿಶೇಷ ಪ್ಲೇಜೋನ್ ಗಳು, ಕುಟುಂಬ ವಿಹಾರಗಳು ಮತ್ತು ವಿಶ್ರಾಂತಿ ತಾಣಗಳು, ಪರಿಚರ್ಯೆ ಮತ್ತು ಶಿಶು ಆರೈಕೆ ಕೊಠಡಿಗಳು, ಹಸಿರುಮಯ ಮತ್ತು ವಿಶಾಲ ಪ್ರದೇಶಗಳನ್ನೊಳಗೊಂಡ ಟರ್ಮಿನಲ್ ಗಳು, ಅತಿ ಹೆಚ್ಚು ಗ್ರಾಹಕರಿಂದ ತೃಪ್ತಿಕರ ರೇಟಿಂಗ್ಸ್ ಸಿಕ್ಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಿಮಾನ ಪ್ರಯಾಣಿಕರಿಗೆ ಸುಸಜ್ಜಿತ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಾಗೂ ಉಲ್ಲಾಸಭರಿತ ಪ್ರಯಾಣದ ಅನುಭವ ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ