Tuesday, March 17, 2026
Tuesday, March 17, 2026

ಶ್ರೀಶೈಲಂ ಜಾತ್ರೆಗೆ ಕಲಬುರಗಿಯಿಂದ ವಿಶೇಷ ಬಸ್‌ ಸಂಚಾರ

ಆಂದ್ರ ಪ್ರದೇಶದ ಶ್ರೀಶೈಲಂನಲ್ಲಿ ಯುಗಾದಿ ಸಮಯದಲ್ಲಿ ನಡೆಯುವ ಮಲ್ಲಿಕಾರ್ಜುನ ರಥೋತ್ಸವಕ್ಕೆ ಸಾಕಷ್ಟು ಜನ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರ ಸಂಚಾರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರ್ಗಿ ವಿಭಾಗ -2ರಿಂದ ಜಾತ್ರಾ ವಿಶೇಷ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.

ಆಂದ್ರ ಪ್ರದೇಶದ ಶ್ರೀಶೈಲಂನಲ್ಲಿ ಯುಗಾದಿ ಸಮಯದಲ್ಲಿ ನಡೆಯುವ ಮಲ್ಲಿಕಾರ್ಜುನ ರಥೋತ್ಸವಕ್ಕೆ ಸಾಕಷ್ಟು ಜನ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರ ಸಂಚಾರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಾರಿಗೆ ನಿಗಮ, ಕಲಬುರ್ಗಿ ವಿಭಾಗ -2ರಿಂದ ಜಾತ್ರಾ ವಿಶೇಷ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.

ಮಾರ್ಚ್‌ 20ರವರೆಗೂ ಜಾತ್ರಾ ವಿಶೇಷ ಬಸ್‌ಗಳ ಸಂಚಾರ

ಈ ಕುರಿತು ನಿಗಮದ ಅಧಿಕಾರಿಗಳು ಪ್ರಕಟನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಶೈಲಂ ಜಾತ್ರಾ ವಿಶೇಷ ಬಸ್‌ಗಳ ಸಂಚಾರವು ಮಾರ್ಚ್‌ 20ರವರೆಗೂ ಮುಂದುವರೆಯಲಿದೆ. ಕಲಬುರಗಿ ವಿಭಾಗ -2 ಸೇರಿ ಕೇಂದ್ರ ಬಸ್‌ ನಿಲ್ದಾಣ, ಆಳಂದ, ಜೇವರ್ಗಿಯಿಂದಲೂ ಬಸ್‌ ಸಂಚಾರ ವ್ಯವಸ್ಥೆ ಇರಲಿದೆ. ಭಕ್ತರ ಶ್ರೀಶೈಲಂ ಸಂಚಾರದ ಅನುಕೂಲಕ್ಕಾಗಿ ನಿಗಮ ವಿಶೇಷ ಬಸ್‌ ಸಂಚಾರವನ್ನು ಆರಂಭಿಸಿದೆ.

ಗಮನಿಸಿ

ಶ್ರೀಶೈಲಂಗೆ ಹೊರಡುವ 40-45 ಜನರ ಗುಂಪು ಒಂದು ಗ್ರಾಮದಲ್ಲಿದ್ದರೆ ಅಲ್ಲಿಂದಲೇ ನಿಗಮ ಬಸ್‌ ಸಂಚಾರ ಸೌಲಭ್ಯವನ್ನು ಒದಗಿಸುವುದಾಗಿ ನಿಗಮ ಮಾಹಿತಿ ನೀಡಿದೆ.

ದುಬೈ ಪ್ರಯಾಣ ಮುಂದೂಡಿ: ಏರ್‌ ಇಂಡಿಯಾ

ಬುಕಿಂಗ್‌ ಮತ್ತು ಹೆಚ್ಚಿನ ಮಾಹಿತಿಗಾಗಿ

ನಿಮ್ಮ ಶ್ರೀಶೈಲಂ ಯಾತ್ರೆಗೆ ಮುಂಗಡ ಬುಕಿಂಗ್‌ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಶಾರದಾದೇವಿ, ವಿಭಾಗೀಯ ಸಂಚಾರ ಅಧಿಕಾರಿ : 7760984086

ಮಲ್ಲಿಕಾರ್ಜುನ, ಕಲಬುರಗಿ ಕೇಂದ್ರ ಬಸ್‌ನಿಲ್ದಾಣದ ಅಧಿಕಾರಿ : 8147905972

ಯೋಗಿನಾಥ ಸರಸಂಬಿ, ಆಳಂದ ಘಟಕ : 7760992116

ಕೃಷ್ಣ ಪವಾರ್‌, ಜೇವರ್ಗಿ ಘಟಕ : 7760992118

ಅಮೀನಪ್ಪ ಭೋವಿ, ಅಫಜಲಪುರ ಘಟಕ : 7760992121

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..