Friday, July 10, 2026
Friday, July 10, 2026

ಮೇಕ್ ಮೈ ಟ್ರಿಪ್‌ನಿಂದ 'ಒನ್ ಸರ್ಕಲ್' ಗ್ಲೋಬಲ್ ರಿವಾರ್ಡ್ಸ್

'ಒನ್ ಸರ್ಕಲ್' ನೆಟ್‌ವರ್ಕ್ ಅಡಿ ಬರುವ ಯಾವುದೇ ಹೊಟೇಲ್ ಅಥವಾ ಹೋಮ್‌ಸ್ಟೇ ಅನ್ನು ಗ್ರಾಹಕರು ಬುಕ್ ಮಾಡಿದರೆ, ತಾವು ಪಾವತಿಸಿದ ಒಟ್ಟು ಮೊತ್ತದಲ್ಲಿ ಕನಿಷ್ಠ ಶೇ. 10ರಷ್ಟು ಹಣವನ್ನು 'ರಿವಾರ್ಡ್ ಪಾಯಿಂಟ್ಸ್' ರೂಪದಲ್ಲಿ ಮರಳಿ ಪಡೆಯಲಿದ್ದಾರೆ. ವಿಶೇಷವೆಂದರೆ, ಈ ರಿವಾರ್ಡ್ ಪಾಯಿಂಟ್ಸ್‌ಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಇದೇ ನೆಟ್‌ವರ್ಕ್‌ನ ಹೊಟೇಲ್‌ಗಳಲ್ಲಿ ತಮ್ಮ 'ಮುಂದಿನ ಪ್ರವಾಸದ ಬುಕಿಂಗ್' ವೇಳೆ ರಿಯಾಯಿತಿಯಾಗಿ ಬಳಸಿಕೊಳ್ಳಬಹುದು.

ದೇಶದ ಅತಿದೊಡ್ಡ ಆನ್‌ಲೈನ್ ಟ್ರಾವೆಲ್ ಪ್ಲಾಟ್‌ಫಾರ್ಮ್ 'ಮೇಕ್ ಮೈ ಟ್ರಿಪ್' ಪ್ರವಾಸಿಗರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಭಾರತೀಯ ಪ್ರವಾಸಿಗರನ್ನೇ ಕೇಂದ್ರವಾಗಿಟ್ಟುಕೊಂಡು ವಿನ್ಯಾಸಗೊಳಿಸಲಾದ 'ಒನ್ ಸರ್ಕಲ್' ಎಂಬ ಬೃಹತ್ ಜಾಗತಿಕ ರಿವಾರ್ಡ್ಸ್ ಕಾರ್ಯಕ್ರಮಕ್ಕೆ ಸಂಸ್ಥೆ ಚಾಲನೆ ನೀಡಿದೆ. ವಿಶ್ವದಾದ್ಯಂತ 1,002 ನಗರಗಳಲ್ಲಿರುವ ಬರೋಬ್ಬರಿ 13,376 ವಸತಿ ಪ್ರಾಪರ್ಟಿಗಳನ್ನು ಒಂದೇ ವೇದಿಕೆಯಡಿ ತಂದಿರುವುದು ಈ ಯೋಜನೆಯ ಅತಿದೊಡ್ಡ ಮೈಲಿಗಲ್ಲಾಗಿದೆ.

'ಒನ್ ಸರ್ಕಲ್' ನೆಟ್‌ವರ್ಕ್ ಅಡಿ ಬರುವ ಯಾವುದೇ ಹೊಟೇಲ್ ಅಥವಾ ಹೋಮ್‌ಸ್ಟೇ ಅನ್ನು ಗ್ರಾಹಕರು ಬುಕ್ ಮಾಡಿದರೆ, ತಾವು ಪಾವತಿಸಿದ ಒಟ್ಟು ಮೊತ್ತದಲ್ಲಿ ಕನಿಷ್ಠ ಶೇ. 10ರಷ್ಟು ಹಣವನ್ನು 'ರಿವಾರ್ಡ್ ಪಾಯಿಂಟ್ಸ್' ರೂಪದಲ್ಲಿ ಮರಳಿ ಪಡೆಯಲಿದ್ದಾರೆ. ವಿಶೇಷವೆಂದರೆ, ಈ ರಿವಾರ್ಡ್ ಪಾಯಿಂಟ್ಸ್‌ಗಳನ್ನು ವಿಶ್ವದ ಯಾವುದೇ ಮೂಲೆಯಲ್ಲಿರುವ ಇದೇ ನೆಟ್‌ವರ್ಕ್‌ನ ಹೊಟೇಲ್‌ಗಳಲ್ಲಿ ತಮ್ಮ 'ಮುಂದಿನ ಪ್ರವಾಸದ ಬುಕಿಂಗ್' ವೇಳೆ ರಿಯಾಯಿತಿಯಾಗಿ ಬಳಸಿಕೊಳ್ಳಬಹುದು. ಬಜೆಟ್ ಹೋಟೆಲ್‌ಗಳಿಂದ ಹಿಡಿದು ಐಷಾರಾಮಿ ರೆಸಾರ್ಟ್‌ಗಳವರೆಗೆ ಎಲ್ಲಾ ವರ್ಗದ ವಸತಿಗಳಿಗೂ ಇದು ಅನ್ವಯವಾಗುತ್ತದೆ.

ಇದನ್ನೂ ಓದಿ: ಕನ್ನಡಿಗರಿಗೆ ಗುಡ್ ನ್ಯೂಸ್ ನೀಡಿದ 'ಅಕಾಸಾ ಏರ್'

ಬೆಂಗಳೂರು, ಟಿಯರ್‌-2 ನಗರಗಳದ್ದೇ ಪಾರುಪತ್ಯ

ದೇಶೀಯ ಪ್ರವಾಸೋದ್ಯಮದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2ನೇ ಮತ್ತು 3ನೇ ಹಂತದ ನಗರಗಳಿಗೆ ಈ ಯೋಜನೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಈ ನೆಟ್‌ವರ್ಕ್‌ನಲ್ಲಿರುವ ನಾಲ್ಕರಲ್ಲಿ ಮೂರು ಅಂದರೆ ಶೇ. 75ರಷ್ಟು ಹೋಟೆಲ್‌ಗಳು ಈ ಸಣ್ಣ ನಗರಗಳಲ್ಲೇ ಇವೆ.

ಅತಿ ಹೆಚ್ಚು ಪ್ರಾಪರ್ಟಿಗಳನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಗುರುಗ್ರಾಮ, ಬೆಂಗಳೂರು ಮತ್ತು ಜೈಪುರ ಟಾಪ್ 3 ಸ್ಥಾನದಲ್ಲಿವೆ. ಹಾಗೆಯೇ, ರಾಜ್ಯಗಳ ಪೈಕಿ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಕೇರಳ ರಾಜ್ಯಗಳು ಅತಿ ಹೆಚ್ಚು ಹೋಟೆಲ್‌ಗಳನ್ನು ಈ ಯೋಜನೆಗೆ ಒದಗಿಸಿವೆ. ಐಟಿ ಹಬ್‌ಗಳಿಂದ ಹಿಡಿದು ಗಿರಿಧಾಮಗಳು, ಕಡಲತೀರಗಳು ಹಾಗೂ ಆಧ್ಯಾತ್ಮಿಕ ಕೇಂದ್ರಗಳವರೆಗಿನ ಪ್ರವಾಸಿ ತಾಣಗಳನ್ನು ಇದು ಒಳಗೊಂಡಿದೆ.

Untitled design (48)

ವಿದೇಶಿ ಪ್ರವಾಸಕ್ಕೂ ಸೈ

ದೇಶದಲ್ಲಿ ಮಾತ್ರವಲ್ಲದೆ, ಭಾರತೀಯರು ಅತಿ ಹೆಚ್ಚು ಭೇಟಿ ನೀಡುವ 39 ದೇಶಗಳ 134 ಪ್ರವಾಸಿ ತಾಣಗಳಲ್ಲಿನ 1,046 ಪ್ರಾಪರ್ಟಿಗಳನ್ನು ಸಹ ಈ ರಿವಾರ್ಡ್ಸ್ ಕಾರ್ಯಕ್ರಮದಡಿ ಸೇರಿಸಲಾಗಿದೆ. ಗ್ರಾಹಕರ ರೇಟಿಂಗ್ಸ್ ಹಾಗೂ ಮೇಕ್ ಮೈ ಟ್ರಿಪ್ ತಂಡದ ನೇರ ಪರಿಶೀಲನೆಯ ನಂತರವೇ ಅತ್ಯುತ್ತಮ ಹೋಟೆಲ್‌ಗಳನ್ನು ಈ ನೆಟ್‌ವರ್ಕ್‌ಗೆ ಸೇರ್ಪಡೆಗೊಳಿಸಲಾಗಿದೆ.

ಈ ಹೊಸ ಯೋಜನೆಯ ಕುರಿತು ಮತ್ತಷ್ಟು ವಿವರಗಳನ್ನು ಹಂಚಿಕೊಂಡಿರುವ ಮೇಕ್ ಮೈ ಟ್ರಿಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಗ್ರೂಪ್ ಸಿಇಒ ರಾಜೇಶ್ ಮಾಗೋವ್, "ಪ್ರವಾಸಿಗರು ಕೈಗೊಳ್ಳುವ ಪ್ರತಿಯೊಂದು ಪ್ರವಾಸವೂ ಅವರಿಗೆ ಲಾಭದಾಯಕವಾಗಿರಬೇಕು. ಜೊತೆಗೆ ನಮ್ಮ ಪಾಲುದಾರ ಹೋಟೆಲ್‌ಗಳಿಗೆ ನಿರಂತರವಾಗಿ ಲಾಭ ಒದಗಿಸಬೇಕು ಎಂಬ ಸರಳ ಉದ್ದೇಶದಿಂದ 'ಒನ್ ಸರ್ಕಲ್' ಅನ್ನು ಹುಟ್ಟುಹಾಕಲಾಗಿದೆ. ಇದು ಗ್ರಾಹಕರಿಗೆ ಭರ್ಜರಿ ಉಳಿತಾಯ ಮಾಡುವುದರ ಜೊತೆಗೆ, ಹೋಟೆಲ್ ಮಾಲೀಕರಿಗೆ ಹೊಸ ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತದ ಪ್ರವಾಸೋದ್ಯಮ ವಲಯದಲ್ಲಿ ಕ್ರಾಂತಿ ಮಾಡಿರುವ ಮೇಕ್ ಮೈ ಟ್ರಿಪ್, ಕೃತಕ ಬುದ್ಧಿಮತ್ತೆ ಆಧಾರಿತ ಟ್ರಾವೆಲ್ ಪ್ಲಾಟ್‌ಫಾರ್ಮ್ ಆಗಿದೆ. MakeMyTrip, Goibibo ಮತ್ತು redBus ಬ್ರ್ಯಾಂಡ್‌ಗಳ ಮೂಲಕ ವಿಮಾನ, ಹೋಟೆಲ್ ಮತ್ತು ಬಸ್ ಬುಕಿಂಗ್ ಸೇವೆಗಳನ್ನು ಅತ್ಯಂತ ಸುಲಭವಾಗಿ ಒದಗಿಸುತ್ತಾ ಗ್ರಾಹಕರ ವಿಶ್ವಾಸ ಗಳಿಸಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ