Wednesday, July 15, 2026
Wednesday, July 15, 2026

ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವವರಿಗೆ ಹೊಸ ನಿಯಮಗಳು

ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು, ವಿದೇಶಿ ನಾಗರಿಕರು ಹಾಗೂ ಒಸಿಐ (OCI) ಕಾರ್ಡ್ ಹೊಂದಿರುವವರು ಕೂಡ ಸ್ವಯಂ ಘೋಷಣಾ ಅರ್ಜಿಯನ್ನು 24 ಗಂಟೆಗಳೊಳಗೆ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು ಎಂಬ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಯುಎಇಯಿಂದ ಭಾರತಕ್ಕೆ ಪ್ರಯಾಣಿಸುವ ಭಾರತೀಯರು ಹಾಗೂ ವಿದೇಶಿ ಪ್ರಯಾಣಿಕರು ಇನ್ನು ಮುಂದೆ ಹೊಸ ಡಿಜಿಟಲ್ ಪ್ರಯಾಣ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಭಾರತ ಸರಕಾರ ಏರ್ ಸುವಿಧಾ 2.0, ಇ-ಅರೈವಲ್ ಕಾರ್ಡ್ ಮತ್ತು ಚಿನ್ನ ಸಾಗಣೆಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದೆ. ಇದರಿಂದ ವಿಮಾನ ಪ್ರಯಾಣಕ್ಕೂ ಮುನ್ನವೇ ಅಗತ್ಯ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸುವುದು ಅನಿವಾರ್ಯವಾಗಿದೆ.

ಹೊಸ ನಿಯಮಗಳ ಪ್ರಕಾರ, ಭಾರತಕ್ಕೆ ಆಗಮಿಸುವ ಎಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರು ಏರ್ ಸುವಿಧಾ 2.0 ಆರೋಗ್ಯ ಸ್ವಯಂ ಘೋಷಣಾ (Self Declaration Form) ಅರ್ಜಿಯನ್ನು ಭಾರತಕ್ಕೆ ಆಗಮಿಸುವ 24 ಗಂಟೆಗಳೊಳಗೆ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಈ ಕ್ರಮವನ್ನು ಆಫ್ರಿಕದ ಕೆಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಎಬೋಲಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ. ಭಾರತಕ್ಕೆ ಬಂದ ಬಳಿಕ ಡಿಜಿಟಲ್ ಪ್ರತಿಯನ್ನು ತೋರಿಸಿದರೆ ಸಾಕಾಗಿದ್ದು, ಕಾಗದದ ಅರ್ಜಿಯ ಅಗತ್ಯ ಇರುವುದಿಲ್ಲ.

ಇದನ್ನೂ ಓದಿ: ಯುಎಇಯಲ್ಲಿ ಭಾರತದ ಪಾಸ್‌ಪೋರ್ಟ್ ಸಂಸ್ಥೆ ಬದಲಾವಣೆ

ಇದರ ಜತೆಗೆ, ವಿದೇಶಿ ನಾಗರಿಕರು ಹಾಗೂ ಒಸಿಐ (OCI) ಕಾರ್ಡ್ ಹೊಂದಿರುವವರು ಭಾರತಕ್ಕೆ ಆಗಮಿಸುವ 72 ಗಂಟೆಗಳೊಳಗೆ ಇ-ಅರೈವಲ್ ಕಾರ್ಡ್ ಅನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿಮಾನದಲ್ಲಿ ನೀಡಲಾಗುತ್ತಿದ್ದ ಕಾಗದದ ಆಗಮನ ಅರ್ಜಿಯನ್ನು ಈಗ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಅಲ್ಲದೆ, ಒಸಿಐ ಕಾರ್ಡ್ ಹೊಂದಿರುವವರಿಗೆ ಡಿಜಿಟಲ್ ಇ-ಒಸಿಐ (e-OCI) ಕಾರ್ಡ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದ್ದು, ಇದರಿಂದ ವಿಮಾನ ನಿಲ್ದಾಣದಲ್ಲಿ ದಾಖಲೆಗಳ ಪರಿಶೀಲನೆ ಇನ್ನಷ್ಟು ಸುಲಭವಾಗಲಿದೆ.

ಚಿನ್ನ ಸಾಗಣೆ ನಿಯಮಗಳಲ್ಲಿಯೂ ಕೇಂದ್ರ ಸರಕಾರ ಬದಲಾವಣೆ ಮಾಡಿದೆ. ಹೊಸ ನಿಯಮದಂತೆ, ಒಂದು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರಯಾಣಿಕರಿಗೆ ಮಹಿಳೆಯರು 40 ಗ್ರಾಂ ಹಾಗೂ ಪುರುಷರು 20 ಗ್ರಾಂ ಚಿನ್ನಾಭರಣವನ್ನು ಮೌಲ್ಯ ಮಿತಿಯಿಲ್ಲದೆ ಸುಂಕಮುಕ್ತವಾಗಿ ತರಲು ಅವಕಾಶ ನೀಡಲಾಗಿದೆ. ಆದರೆ, ಈ ತೂಕ ಮೀರಿದರೆ ಕಸ್ಟಮ್ಸ್ ಸುಂಕ ಪಾವತಿಸಬೇಕಾಗುತ್ತದೆ ಮತ್ತು ಖರೀದಿ ರಸೀದಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...