ಯುಎಇಯಲ್ಲಿ ಭಾರತದ ಪಾಸ್‌ಪೋರ್ಟ್ ಸಂಸ್ಥೆ ಬದಲಾವಣೆ
ಪ್ರಸ್ತುತ ಈ ಸೇವೆಗಳನ್ನು ಒದಗಿಸುತ್ತಿರುವ ಬಿಎಲ್‌ಎಸ್ ಇಂಟರ್ನ್ಯಾಷನಲ್ (BLS International Services Ltd) ಮತ್ತು ಎಸ್‌ಜಿಐವಿಎಸ್ ಗ್ಲೋಬಲ್ ಸಂಸ್ಥೆಗಳ ಬದಲಿಗೆ, ಇನ್ನು ಮುಂದೆ 'ಅಲ್ ಹಿಂದ್ ಟೂರ್ಸ್ ಆಂಡ್ ಟ್ರಾವೆಲ್ಸ್' ಸಂಸ್ಥೆಯು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಾಸಿಸುತ್ತಿರುವ ಭಾರತೀಯ ವಲಸಿಗರು ಮತ್ತು ವೀಸಾ ಆಕಾಂಕ್ಷಿಗಳಿಗೆ ಭಾರತೀಯ ರಾಯಭಾರ ಕಚೇರಿಯು ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಯುಎಇಯಾದ್ಯಂತ ಭಾರತೀಯ ಪಾಸ್‌ಪೋರ್ಟ್, ವೀಸಾ ಮತ್ತು ಕಾನ್ಸುಲರ್ ಸೇವೆಗಳನ್ನು ನಿರ್ವಹಿಸುವ ಹೊರಗುತ್ತಿಗೆ ಸೇವಾ ಸಂಸ್ಥೆಯನ್ನು ಬದಲಾಯಿಸಲಾಗುತ್ತಿದ್ದು, ಜುಲೈ 1, 2026 ರಿಂದ ಈ ಹೊಸ ಬದಲಾವಣೆ ಜಾರಿಗೆ ಬರಲಿದೆ.
ಪ್ರಸ್ತುತ ಈ ಸೇವೆಗಳನ್ನು ಒದಗಿಸುತ್ತಿರುವ ಬಿಎಲ್‌ಎಸ್ ಇಂಟರ್ನ್ಯಾಷನಲ್ (BLS International Services Ltd) ಮತ್ತು ಎಸ್‌ಜಿಐವಿಎಸ್ ಗ್ಲೋಬಲ್ ಸಂಸ್ಥೆಗಳ ಬದಲಿಗೆ, ಇನ್ನು ಮುಂದೆ 'ಅಲ್ ಹಿಂದ್ ಟೂರ್ಸ್ ಆಂಡ್ ಟ್ರಾವೆಲ್ಸ್' ಸಂಸ್ಥೆಯು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ಇದನ್ನೂ ಓದಿ: ಅಮನಗಢ್ ವಿಸಿಟರ್ಸ್‌ಗೆ ಗುಡ್ ನ್ಯೂಸ್
ಪ್ರಸ್ತುತ ಸೇವಾ ಪೂರೈಕೆದಾರರಾದ ಬಿಎಲ್‌ಎಸ್ ಇಂಟರ್ನ್ಯಾಷನಲ್ ಮತ್ತು ಎಸ್‌ಜಿಐವಿಎಸ್ ಗ್ಲೋಬಲ್ ಸಂಸ್ಥೆಗಳು ಜೂನ್ 30 ರವರೆಗೆ ಎಂದಿನಂತೆ ಅರ್ಜಿಗಳನ್ನು ಸ್ವೀಕರಿಸಲು ಮತ್ತು ಪ್ರಕ್ರಿಯೆಗೊಳಿಸಲು ಮುಂದುವರಿಯುತ್ತವೆ. ಅಲ್ಲಿಯವರೆಗೆ ಪ್ರಯಾಣಿಕರು ಮತ್ತು ವಲಸಿಗರು ಹಳೆಯ ಕೇಂದ್ರಗಳನ್ನೇ ಬಳಸಬಹುದು.
ಜುಲೈ 1 ಅಥವಾ ಅದಾದ ನಂತರ ಸಲ್ಲಿಕೆಯಾಗುವ ಎಲ್ಲಾ ಹೊಸ ಪಾಸ್‌ಪೋರ್ಟ್, ವೀಸಾ ಮತ್ತು ಕಾನ್ಸುಲರ್ ಸೇವಾ ಅರ್ಜಿಗಳನ್ನು ಸಂಪೂರ್ಣವಾಗಿ 'ಅಲ್ ಹಿಂದ್ ಟೂರ್ಸ್ ಆಂಡ್ ಟ್ರಾವೆಲ್ಸ್' ಸಂಸ್ಥೆಯ ನೇತೃತ್ವದ ನೂತನ ಕೇಂದ್ರಗಳ ಮೂಲಕವೇ ನಿರ್ವಹಿಸಲಾಗುತ್ತದೆ.
ಯುಎಇಯಲ್ಲಿರುವ ಭಾರತೀಯ ಮಿಷನ್ ನಡೆಸಿದ ಅಧಿಕೃತ ಟೆಂಡರ್ ಮತ್ತು ಆಯ್ಕೆ ಪ್ರಕ್ರಿಯೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ವ್ಯಾಪ್ತಿಗೆ ಬರುವ ಎಲ್ಲಾ ಏಳು ಎಮಿರೇಟ್‌ಗಳ ಒಟ್ಟು 16 ಕೇಂದ್ರಗಳಲ್ಲಿ 'ಅಲ್ ಹಿಂದ್' ತನ್ನ ಸೇವೆಗಳನ್ನು ಆರಂಭಿಸಲಿದೆ.