Tuesday, April 7, 2026
Tuesday, April 7, 2026

ಗೂಗಲ್‌ನಿಂದ ಹೊಸ 'ಆಸ್ಕ್ ಮ್ಯಾಪ್ಸ್'

ಗೂಗಲ್ ಮ್ಯಾಪ್ಸ್ ಈಗ ಜೆಮಿನಿ ಎಐ ಮೂಲಕ ಹೆಚ್ಚು ಸ್ಮಾರ್ಟ್ ಆಗಿದೆ. ಬಳಕೆದಾರರು ಈಗ ಮ್ಯಾಪ್ ಜತೆ ಮಾತನಾಡುವ ಮೂಲಕ ತಮ್ಮ ಪ್ರಯಾಣದ ಯೋಜನೆಗಳನ್ನು ರೂಪಿಸಬಹುದು.

ಗೂಗಲ್ ಮ್ಯಾಪ್ಸ್ ಭಾರತ ಮತ್ತು ಅಮೆರಿಕದ ಬಳಕೆದಾರರಿಗಾಗಿ 'ಆಸ್ಕ್ ಮ್ಯಾಪ್ಸ್' ಎಂಬ ಹೊಸ ಎಐ-ಚಾಲಿತ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ವಿಶೇಷತೆ ಏನೆಂದರೆ ಬಳಕೆದಾರರು ಮ್ಯಾಪ್ ಜತೆಗೆ ಸಂಭಾಷಣೆ ನಡೆಸುವ ಮೂಲಕ ಮಾಹಿತಿ ಪಡೆಯಬಹುದು.

ಈವರೆಗೆ ಬಳಕೆದಾರರು ಮ್ಯಾಪ್‌ನಲ್ಲಿ ಕೇವಲ ಸ್ಥಳದ ಹೆಸರು ಅಥವಾ ಕೀವರ್ಡ್‌ಗಳನ್ನು ಟೈಪ್ ಮಾಡುತ್ತಿದ್ದರು. ಆದರೆ 'ಆಸ್ಕ್ ಮ್ಯಾಪ್ಸ್' ಮೂಲಕ ಗೆಳೆಯರೊಡನೆ ಮಾತನಾಡುವಂತೆ ಮಾತನಾಡಬಹುದು. ಉದಾಹರಣೆಗೆ, "ನನ್ನ ಫೋನ್ ಚಾರ್ಜ್ ಮುಗಿಯುತ್ತಿದೆ, ಹತ್ತಿರದಲ್ಲಿ ಎಲ್ಲಿ ಹೆಚ್ಚು ಹೊತ್ತು ಕಾಯದೆಯೇ ಫೋನ್ ಚಾರ್ಜ್ ಮಾಡಬಹುದು?" ಅಥವಾ "ಹಿರಿಯ ನಾಗರಿಕರಿಗೆ ಸುಲಭವಾಗುವಂಥ ಹತ್ತಿರದ ಪ್ರವಾಸಿ ತಾಣ ಯಾವುದು?" ಎಂದು ಕೇಳಿದರೆ ಅದು ತಕ್ಷಣವೇ ಸೂಕ್ತ ಉತ್ತರ ನೀಡುತ್ತದೆ.

ಇದನ್ನೂ ಓದಿ: ಗೂಗಲ್ ಮ್ಯಾಪ್‌ಗೆ ಸಿಗದ ರಹಸ್ಯ ತಾಣಗಳು: ಇತಿಹಾಸದ ಮೌನ ಸಾಕ್ಷಿಗಳು

ಇದರ ಮೂಲಕ ಪ್ರವಾಸ ಯೋಜನೆಯನ್ನು ರೂಪಿಸುವುದು ಈಗ ಸೆಕೆಂಡುಗಳ ಕೆಲಸ. ಯಾವುದೇ ಸ್ಥಳದ ಬಗ್ಗೆ ಜನರು ಏನು ಹೇಳುತ್ತಿದ್ದಾರೆ, ಅಲ್ಲಿನ ವಿಶೇಷ ಖಾದ್ಯ ಯಾವುದು ಮತ್ತು ಅಲ್ಲಿಗೆ ಹೋಗಲು ಸುಸಮಯ ಯಾವುದು ಎಂಬುದರ ಸಾರಾಂಶವನ್ನು 'ಆಸ್ಕ್ ಮ್ಯಾಪ್ಸ್' ಒಂದೇ ನಿಮಿಷದಲ್ಲಿ ನೀಡುತ್ತದೆ. ಪ್ರಸ್ತುತ ಈ ವೈಶಿಷ್ಟ್ಯವು ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಹಿಂದಿ ಮತ್ತು ಇತರ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲೂ ಇದು ಲಭ್ಯವಾಗಲಿದೆ ಎಂದು ಗೂಗಲ್ ತಿಳಿಸಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ