Monday, January 12, 2026
Monday, January 12, 2026

ವಿಶಾಖ ಪಟ್ಟಣಂನಲ್ಲಿ ಲೈಟ್‌ ಹೌಸ್‌ ಉತ್ಸವ

ವಿಶಾಖ ಪಟ್ಟಣಂ ಎಂಜಿಎಂ ಪಾರ್ಕ್‌ನಲ್ಲಿ ಮೂರನೇ ಆವೃತ್ತಿಯ ಭಾರತೀಯ ಲೈಟ್‌ಹೌಸ್‌ ಉತ್ಸವ ನಡೆಯಿತು.

ಲೈಟ್‌ಹೌಸ್‌ಗಳನ್ನು ಪ್ರವಾಸೋದ್ಯಮ ಮತ್ತು ಉತ್ಸವ ಕೇಂದ್ರಗಳನ್ನಾಗಿ ಅಭಿವೃಪಡಿಸುತ್ತಿರುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತಿವೆ ಎಂದು ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ.

light house

ವಿಶಾಖ ಪಟ್ಟಣಂ ಎಂಜಿಎಂ ಪಾರ್ಕ್‌ನಲ್ಲಿ ಮೂರನೇ ಆವೃತ್ತಿಯ ಭಾರತೀಯ ಲೈಟ್‌ಹೌಸ್‌ ಉತ್ಸವ ನಡೆಯಿತು. ಈ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇಂದ್ರ ಸರಕಾರವು ಲೈಟ್‌ಹೌಸ್‌ ಪ್ರವಾಸೋದ್ಯಮವನ್ನು ಆರಂಭಿಸಿ, ಉತ್ಸವಗಳನ್ನು ಏರ್ಪಡಿಸುತ್ತಿರುವ ಮೂಲಕ ಸಂಸ್ಕೃತಿ ಮತ್ತು ಸ್ಥಳೀಯ ಉದ್ಯಮಗಳ ಕೇಂದ್ರಗಳಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಕರಾವಳಿ ಸಮುದಾಯಗಳ ಅಭಿವೃದ್ಧಿ ಮತ್ತು ನಿರ್ವಹಣೆಯಾಗಲಿದೆ ಎಂದಿದ್ದಾರೆ.

ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಉದ್ಘಾಟನೆ

ಈ ಭಾರತೀಯ ಲೈಟ್‌ಹೌಸ್‌ ಉತ್ಸವವನ್ನು ಉದ್ಘಾಟಿಸಿದ ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ʻಈ ಉತ್ಸವವು ಲೈಟ್‌ಹೌಸ್‌ ಪ್ರವಾಸೋದ್ಯಮಕ್ಕೆ ಒಂದು ಉತ್ತಮ ಅವಕಾಶವನ್ನು ಒದಗಿಸುತ್ತಿದೆ. ಪ್ರವಾಸೋದ್ಯಮದ ಎಲ್ಲಾ ಪಾಲುದಾರರೊಂದಿಗೆ ಸಹಯೋಗ ನೀಡಿ ಪಾಲುದಾರಿಕೆಯನ್ನು ಬಲಪಡಿಸುತ್ತದೆ. ಈ ಉತ್ಸವವು ಸ್ಥಳೀಯ ಸಾಂಸ್ಕೃತಿಕ ಪ್ರದರ್ಶನಗಳು, ಕಲೆ ಮತ್ತು ಕರಕುಶಲ ಮಾರುಕಟ್ಟೆಗಳು ಮತ್ತು ಲೈಟ್‌ಹೌಸ್‌ಗಳ ರಾತ್ರಿ ಬೆಳಕು ಎಲ್ಲವನ್ನೂ ಒಟ್ಟು ಮಾಡಿಕೊಂಡ ಹಬ್ಬ ಎನ್ನಲು ನನಗೆ ಸಂತೋಷವಾಗಿದೆ. ಸ್ಥಳೀಯ ಕರಾವಳಿ ಸಂಸ್ಕೃತಿ ಮತ್ತು ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ಹೇಳಿದರುʼ.

ಜನವರಿ 9ರಿಂದ ಆರಂಭವಾದ ಎರಡು ದಿನಗಳ ಈ ಉತ್ಸವದಲ್ಲಿ ಲೈಟ್‌ಹೌಸ್‌ಗಳ ಬೆಳಕು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು, ಸ್ಥಳೀಯ ಕರಕುಶಲ ಮಾರುಕಟ್ಟೆಗಳು ಇದ್ದವು. ಉತ್ಸವದ ಮೊದಲ ದಿನ ರಾತ್ರಿ ನಡೆದ ಕೂಚಿಪುಡಿ ನಾಟ್ಯವು ಹೃದಯ ಸ್ಪರ್ಶಿಯಾಗಿತ್ತು. 150 ವರ್ಷಗಳನ್ನು ಪೂರೈಸಿದ ವಂದೇ ಮಾತರಂಗೆ ಗೌರವ ಸಲ್ಲಿಸಲಾಯಿತು. ಮೊದಲ ದಿನವೇ ಒಟ್ಟು 3500 ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!