Saturday, April 11, 2026
Saturday, April 11, 2026

ಆನೆಗಳ ಸಂರಕ್ಷಣೆಯಲ್ಲಿ ಹೊಸ ಕ್ರಾಂತಿ

ಸಾಂಪ್ರದಾಯಿಕವಾಗಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೀವಂತ ಆನೆಗಳನ್ನು ಬಳಸುವ ಬದಲು ಕೇರಳ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಕೇರಳದ ಕೆಲವು ದೇವಾಲಯಗಳಲ್ಲಿ ಆಚರಣೆಗಳಿಗಾಗಿ ಜೀವಂತ ಆನೆಗಳ ಬದಲಿಗೆ ರೋಬೋಟಿಕ್ ಅಥವಾ ಯಾಂತ್ರಿಕ ಆನೆಗಳನ್ನು ಪರಿಚಯಿಸಿರುವುದು ಈ ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ.

ಪ್ರಾಣಿ ಸಂರಕ್ಷಣೆ ಮತ್ತು ಎಥಿಕಲ್‌ ಪ್ರವಾಸೋದ್ಯಮದಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆಯು, ಪ್ರಾಣಿ ಹಕ್ಕುಗಳ ಸಂಘಟನೆಯಾದ 'ಪೆಟಾ ಇಂಡಿಯಾ' ನೀಡುವ ಪ್ರತಿಷ್ಠಿತ 'ಗೋಲ್ಡನ್ ಎಲಿಫೆಂಟ್' ಪ್ರಶಸ್ತಿಗೆ ಭಾಜನವಾಗಿದೆ.

ಸಾಂಪ್ರದಾಯಿಕವಾಗಿ ಪ್ರವಾಸೋದ್ಯಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೀವಂತ ಆನೆಗಳನ್ನು ಬಳಸುವ ಬದಲು ಕೇರಳ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಕೇರಳದ ಕೆಲವು ದೇವಾಲಯಗಳಲ್ಲಿ ಆಚರಣೆಗಳಿಗಾಗಿ ಜೀವಂತ ಆನೆಗಳ ಬದಲಿಗೆ ರೋಬೋಟಿಕ್ ಅಥವಾ ಯಾಂತ್ರಿಕ ಆನೆಗಳನ್ನು ಪರಿಚಯಿಸಿರುವುದು ಈ ಪ್ರಶಸ್ತಿಗೆ ಪ್ರಮುಖ ಕಾರಣವಾಗಿದೆ. ಇದು ಆನೆಗಳನ್ನು ಸೆರೆಹಿಡಿಯುವುದು ಮತ್ತು ಅವುಗಳ ಮೇಲಿನ ದೌರ್ಜನ್ಯವನ್ನು ತಪ್ಪಿಸಲು ಸಹಕಾರಿಯಾಗಿದೆ.

ಕೋಝಿಕೋಡ್‌ನಲ್ಲಿ ಸಮುದ್ರದ ಅಲೆ, ಕೇರಳದ ಕಲೆ ಇದೆ

"ಕೇರಳದ ಈ ಕ್ರಾಂತಿಕಾರಿ ಬದಲಾವಣೆಯು ಇಡೀ ದೇಶಕ್ಕೆ ಮಾದರಿಯಾಗಿದೆ. ಪ್ರವಾಸಿಗರು ಈಗ ಪ್ರಾಣಿಗಳಿಗೆ ನೋವು ನೀಡದೆಯೇ ಸಂಸ್ಕೃತಿಯನ್ನು ಆನಂದಿಸಬಹುದು. ನೈತಿಕ ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಕೇರಳ ಸರಕಾರ ತೋರಿರುವ ಬದ್ಧತೆ ಸ್ತುತ್ಯಾರ್ಹ," ಎಂದು ಪೆಟಾ ಇಂಡಿಯಾ ತನ್ನ ಪ್ರಶಸ್ತಿ ಪ್ರಕಟಣೆಯಲ್ಲಿ ತಿಳಿಸಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!