Thursday, August 27, 2026
Thursday, August 27, 2026

ಗಯಾದಿಂದ ಬ್ಯಾಂಕಾಕ್‌ಗೆ ನೇರ ವಿಮಾನ ಸೇವೆ ಶುರು!

ಬೋಧಗಯಾ ಜಾಗತಿಕ ಮಟ್ಟದಲ್ಲಿ ಬೌದ್ಧ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರವಾಗಿರುವುದರಿಂದ, ಥೈಲ್ಯಾಂಡ್, ವಿಯೆಟ್ನಾಮ್, ಮ್ಯಾನ್ಮಾರ್ ಹಾಗೂ ಇತರ ಆಗ್ನೇಯ ಏಷ್ಯಾದ ದೇಶಗಳಿಂದ ಬರುವ ಬೌದ್ಧ ಯಾತ್ರಿಕರಿಗೆ ನೇರ ಮತ್ತು ಸುಲಭ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಂಭಿಸಲಾಗಿದೆ.

ಭಾರತದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್‌ಲೈನ್ಸ್ ಪ್ರವಾಸಿಗರಿಗೆ ಮತ್ತು ಧಾರ್ಮಿಕ ಯಾತ್ರಿಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಿಹಾರದ ಐತಿಹಾಸಿಕ ಹಾಗೂ ಪವಿತ್ರ ನಗರವಾದ ಗಯಾದಿಂದ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ ಹೊಸ ನೇರ ವಿಮಾನ ಸೇವೆಯನ್ನು ಆರಂಭಿಸುವುದಾಗಿ ಇಂಡಿಗೋ ಅಧಿಕೃತವಾಗಿ ಘೋಷಿಸಿದೆ. ಈ ನೂತನ ವಿಮಾನಯಾನ ಸೇವೆಯು ಪ್ರಸಕ್ತ ವರ್ಷದ ಅಕ್ಟೋಬರ್ 26ರಿಂದ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಲಿದೆ.

ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣ: 15 ವಿಮಾನಗಳ ಮಾರ್ಗ ಬದಲಾವಣೆ

ಬೋಧಗಯಾ ಜಾಗತಿಕ ಮಟ್ಟದಲ್ಲಿ ಬೌದ್ಧ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರವಾಗಿರುವುದರಿಂದ, ಥೈಲ್ಯಾಂಡ್, ವಿಯೆಟ್ನಾಮ್, ಮ್ಯಾನ್ಮಾರ್ ಹಾಗೂ ಇತರ ಆಗ್ನೇಯ ಏಷ್ಯಾದ ದೇಶಗಳಿಂದ ಬರುವ ಬೌದ್ಧ ಯಾತ್ರಿಕರಿಗೆ ನೇರ ಮತ್ತು ಸುಲಭ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಂಭಿಸಲಾಗಿದೆ.

ಕೇವಲ ಧಾರ್ಮಿಕ ಯಾತ್ರಿಕರು ಮಾತ್ರವಲ್ಲದೆ, ಬಿಹಾರ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಪ್ರವಾಸಿಗರು ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಥೈಲ್ಯಾಂಡ್‌ಗೆ ರಜಾದಿನಗಳ ಪ್ರವಾಸ ಕೈಗೊಳ್ಳಲು ಇದು ಅತ್ಯಂತ ಅನುಕೂಲಕರವಾಗಲಿದೆ.

ಇಂಡಿಗೋ ಸಂಸ್ಥೆಯು ತನ್ನ ಅತ್ಯಾಧುನಿಕ ನ್ಯಾರೋ-ಬಾಡಿ ವಿಮಾನಗಳನ್ನು ಈ ಮಾರ್ಗದಲ್ಲಿ ಬಳಸಿಕೊಳ್ಳಲಿದ್ದು, ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್‌ಗಳನ್ನು ಒದಗಿಸಲು ಯೋಜನೆ ರೂಪಿಸಿದೆ. ಅಕ್ಟೋಬರ್ 26 ರಿಂದ ನಿಗದಿತ ದಿನಗಳಲ್ಲಿ ಈ ನೇರ ವಿಮಾನಗಳು ಹಾರಾಟ ನಡೆಸಲಿದ್ದು, ಬುಕಿಂಗ್ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.

ಈ ಹೊಸ ನೇರ ವಿಮಾನಯಾನ ಸೇವೆಯು ಭಾರತ ಮತ್ತು ಥೈಲ್ಯಾಂಡ್‌ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಗಟ್ಟಿಗೊಳಿಸುವುದರ ಜತೆಗೆ ಬಿಹಾರದ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಜೀವ ತುಂಬಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ