Thursday, April 16, 2026
Thursday, April 16, 2026

ಭಾರತೀಯ ರೈಲ್ವೆಯಿಂದ ಡಿಸ್ಕೌಂಟ್ ಘೋಷಣೆ

ಭಾರತೀಯ ರೈಲ್ವೆಯ ಈ ನಿರ್ಧಾರವು ಪ್ರಯಾಣವನ್ನು ಹೆಚ್ಚು ಸುಗಮ ಮತ್ತು ಆರ್ಥಿಕವಾಗಿ ಮಾಡಲು ಸಹಕಾರಿಯಾಗಿದ್ದು, ಡಿಜಿಟಲ್ ಸಾರಿಗೆ ವ್ಯವಸ್ಥೆಯತ್ತ ಭಾರತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.

ಭಾರತ ರೈಲ್ವೆ ದೇಶಾದ್ಯಂತ ಇರುವ ಲಕ್ಷಾಂತರ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಮತ್ತು ಟಿಕೆಟ್ ಕೌಂಟರ್‌ಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ, ರೈಲ್ ಒನ್ ಆಪ್ ಮೂಲಕ ಬುಕ್ ಮಾಡಲಾಗುವ ಅನ್ ರಿಸರ್ವ್ಡ್ ಟಿಕೆಟ್‌ಗಳ ಮೇಲೆ ಶೇಕಡಾ 3 ರಷ್ಟು ರಿಯಾಯಿತಿಯನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ಭಾರತದ ರೈಲ್ವೆಯಲ್ಲಿ 1.53 ಲಕ್ಷ ಕೋಟಿ ಹೂಡಿಕೆ

ಈ ನೂತನ ರಿಯಾಯಿತಿ ಯೋಜನೆಯು 2026ರ ಜುಲೈವರೆಗೆ ಜಾರಿಯಲ್ಲಿರಲಿದೆ. ಸಾಮಾನ್ಯವಾಗಿ ಅನ್ ರಿಸರ್ವ್ಡ್ ಟಿಕೆಟ್‌ಗಳಿಗಾಗಿ ರೈಲ್ವೆ ನಿಲ್ದಾಣದ ಕೌಂಟರ್‌ಗಳ ಮುಂದೆ ಪ್ರಯಾಣಿಕರು ದೀರ್ಘ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ರೈಲ್ ಒನ್ ಆ್ಯಪ್ ಬಳಸುವುದರಿಂದ ಪ್ರಯಾಣಿಕರು ಈ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಇದು ದಿನನಿತ್ಯ ರೈಲಿನಲ್ಲಿ ಪ್ರಯಾಣಿಸುವ ನೌಕರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಪ್ರಯೋಜನ ನೀಡಲಿದೆ.

ದೇಶದ ಯಾವುದೇ ಭಾಗದಲ್ಲಿ ರೈಲ್ ಒನ್ ಆ್ಯಪ್ ಮೂಲಕ ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸುವಾಗ ಈ ರಿಯಾಯಿತಿ ಸ್ವಯಂಚಾಲಿತವಾಗಿ ಅನ್ವಯವಾಗುತ್ತದೆ. ಡಿಜಿಟಲ್ ವ್ಯಾಲೆಟ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡುವಾಗ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!