ಮಾಲ್ಡೀವ್ಸ್ ಪ್ರವಾಸೋದ್ಯಮದಲ್ಲಿ ಭಾರತಕ್ಕೆ 6ನೆಯ ಸ್ಥಾನ
ಪ್ರಸಕ್ತ ಸಾಲಿನಲ್ಲಿ ಮಾಲ್ಡೀವ್ಸ್‌ಗೆ ಜಾಗತಿಕವಾಗಿ ಒಟ್ಟು 12.9 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಒಟ್ಟು ಆಗಮನದಲ್ಲಿ ಭಾರತೀಯ ಪ್ರವಾಸಿಗರ ಪಾಲು ಶೇ. 5.8ರಷ್ಟಿದ್ದು, ಸುಮಾರು 75,000 ಕ್ಕೂ ಹೆಚ್ಚು ಭಾರತೀಯರು ಮಾಲ್ಡೀವ್ಸ್‌ನ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿರುವ ನೂತನ ಪ್ರವಾಸೋದ್ಯಮ ಅಂಕಿಅಂಶಗಳ ಪ್ರಕಾರ, ಮಾಲ್ಡೀವ್ಸ್‌ಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರವಾಸಿಗರ ಸಂಖ್ಯೆಯಲ್ಲಿ ಭಾರತವು 6ನೆಯ ಅತಿ ದೊಡ್ಡ ಮೂಲ ಮಾರುಕಟ್ಟೆ ಸ್ಥಾನವನ್ನು ಕಾಯ್ದುಕೊಂಡಿದೆ.
ಇದನ್ನೂ ಓದಿ: ಚೆಸ್ ಪ್ರವಾಸ: ಚದುರಂಗ ಬಲದಲಿ ಪ್ರವಾಸದ ರಂಗು
ಪ್ರಸಕ್ತ ಸಾಲಿನಲ್ಲಿ ಮಾಲ್ಡೀವ್ಸ್‌ಗೆ ಜಾಗತಿಕವಾಗಿ ಒಟ್ಟು 12.9 ಲಕ್ಷ ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ. ಒಟ್ಟು ಆಗಮನದಲ್ಲಿ ಭಾರತೀಯ ಪ್ರವಾಸಿಗರ ಪಾಲು ಶೇ. 5.8ರಷ್ಟಿದ್ದು, ಸುಮಾರು 75,000 ಕ್ಕೂ ಹೆಚ್ಚು ಭಾರತೀಯರು ಮಾಲ್ಡೀವ್ಸ್‌ನ ದ್ವೀಪಗಳಿಗೆ ಭೇಟಿ ನೀಡಿದ್ದಾರೆ.
ಮಾಲ್ಡೀವ್ಸ್‌ಗೆ ಅತಿ ಹೆಚ್ಚು ಪ್ರವಾಸಿಗರನ್ನು ಕಳುಹಿಸುತ್ತಿರುವ ಪ್ರಮುಖ ದೇಶಗಳು:
- ಚೀನಾ
- ರಷ್ಯಾ
- ಯುನೈಟೆಡ್ ಕಿಂಗ್‌ಡಮ್
- ಇಟಲಿ
- ಜರ್ಮನಿ
- ಭಾರತ
ಹಿಂದಿನ ವರ್ಷಗಳಲ್ಲಿ ಭಾರತವು ಮಾಲ್ಡೀವ್ಸ್‌ನ ಶ್ರೇಷ್ಠ ಪ್ರವಾಸಿ ಮಾರುಕಟ್ಟೆಯಾಗಿ ಮೊದಲ ಸ್ಥಾನದಲ್ಲಿತ್ತು. ಆದರೆ, ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳು ಮತ್ತು ಪ್ರವಾಸಿಗರ ಆದ್ಯತೆಗಳ ಬದಲಾವಣೆಯಿಂದಾಗಿ ಭಾರತದ ಶ್ರೇಣಿ 6ನೆಯ ಸ್ಥಾನಕ್ಕೆ ಇಳಿದಿದ್ದರೂ, ಭಾರತೀಯರಿಂದ ಮಾಲ್ಡೀವ್ಸ್‌ಗೆ ಹರಿಯುವ ಪ್ರವಾಸಿಗರ ಸಂಖ್ಯೆ ಚೇತರಿಸಿಕೊಳ್ಳುತ್ತಿದೆ.