ರಷ್ಯಾ ಪ್ರವಾಸದ ವೇಳೆ ಎಚ್ಚರಿಕೆ: ಭಾರತೀಯರಿಗೆ ಸೂಚನೆ
ರಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊಸ ಸಲಹೆ ಹೊರಡಿಸಿದ್ದು, ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರುವ ಉದ್ಯೋಗ ಆಮಿಷಗಳಿಗೆ ಒಳಗಾಗದಂತೆ ಎಚ್ಚರಿಕೆ ನೀಡಿದೆ.
ರಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ನಾಗರಿಕರಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೊಸ ಸಲಹೆ ಹೊರಡಿಸಿದ್ದು, ರಷ್ಯಾದ ಸಶಸ್ತ್ರ ಪಡೆಗಳಿಗೆ ಸೇರುವ ಉದ್ಯೋಗ ಆಮಿಷಗಳಿಗೆ ಒಳಗಾಗದಂತೆ ಎಚ್ಚರಿಕೆ ನೀಡಿದೆ.
ಪರಿಶೀಲಿಸದ ವ್ಯಕ್ತಿಗಳು ಹಾಗೂ ಏಜೆನ್ಸಿಗಳು ನೀಡುವ ಉದ್ಯೋಗದ ಭರವಸೆಗಳ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುವಂತೆ ಸಚಿವಾಲಯ ಸೂಚಿಸಿದೆ.
ಕಳೆದ ಎರಡು ವರ್ಷಗಳಿಂದಲೇ ರಷ್ಯಾ ಸೇನೆಗೆ ಸೇರುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಸರಕಾರ ಭಾರತೀಯರಿಗೆ ಎಚ್ಚರಿಕೆ ನೀಡುತ್ತಾ ಬಂದಿದೆ. ಕೆಲವರು ಆರ್ಥಿಕ ಲಾಭದ ನಿರೀಕ್ಷೆಯಲ್ಲಿ ರಷ್ಯಾ ಸೇನೆಗೆ ಸೇರುವ ಅವಕಾಶಗಳನ್ನು ಸ್ವಯಂ ಹುಡುಕಿಕೊಂಡಿದ್ದು, ನಂತರ ಭಾರತೀಯ ಸರಕಾರದ ನೆರವಿನಿಂದ ತಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಬಹುದು ಎಂದು ಭಾವಿಸಿರುವ ಪ್ರಕರಣಗಳು ವರದಿಯಾಗಿವೆ ಎಂದು MEA ತಿಳಿಸಿದೆ.
ವಿದೇಶಿ ನಾಗರಿಕರನ್ನು ರಷ್ಯಾದ ಸೇನೆಗೆ ನೇಮಕ ಮಾಡಿಕೊಳ್ಳಲು ಕೆಲವು ಸರಕಾರೇತರ ಸಂಸ್ಥೆಗಳು ಮತ್ತು ಸ್ವಯಂಸೇವಾ ಗುಂಪುಗಳು ಕಾರ್ಯನಿರ್ವಹಿಸುತ್ತಿರುವ ಮಾಹಿತಿಯೂ ದೊರೆತಿದೆ. ಹೀಗಾಗಿ ವಿದೇಶದಲ್ಲಿ ಉದ್ಯೋಗ ಸ್ವೀಕರಿಸುವ ಮೊದಲು ನೇಮಕಾತಿ ಏಜೆನ್ಸಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ MEAನಲ್ಲಿ ನೋಂದಾಯಿಸದ ಏಜೆನ್ಸಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.
ಭಾರತ ಸರಕಾರ ರಷ್ಯಾ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಷ್ಯಾ ಸೇನೆಯಲ್ಲಿ ಇರುವ ಭಾರತೀಯರ ಸುರಕ್ಷತೆ, ಕಲ್ಯಾಣ ಮತ್ತು ಶೀಘ್ರ ಬಿಡುಗಡೆಗಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.