Wednesday, September 2, 2026
Wednesday, September 2, 2026

ಉತ್ತರ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ 'ಜೆನ್ ಜಿ಼' ಆಹ್ವಾನ

ಉತ್ತರ ಪ್ರದೇಶದ ಸಂಸ್ಕೃತಿ ಇಡೀ ರಾಜ್ಯದ ಜಿಲ್ಲೆಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ಹರಡಿಕೊಂಡಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಶ್ರೀಮಂತ ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಉತ್ತೇಜಿಸಲು ರಾಜ್ಯ ಸರಕಾರವು ʼಜೆನ್‌ ಜಿ಼ʼಗಳನ್ನು ಸಾಂಸ್ಕೃತಿಕ ರಾಯಭಾರಿಗಳನ್ನಾಗಿ ನೇಮಿಸಲು ಮುಂದಾಗಿದೆ. 'ವಿಸಿಟ್ ಮೈ ಸ್ಟೇಟ್ ಉತ್ತರ ಪ್ರದೇಶ' (Visit My State Uttar Pradesh) ಎಂಬ ವಿನೂತನ ಅಭಿಯಾನದ ಭಾಗವಾಗಿ, ರಾಜ್ಯದ ಯುವಕ-ಯುವತಿಯರು ತಮ್ಮ ನಗರಗಳ ವಿಶೇಷತೆಗಳನ್ನು ಕೇವಲ 60 ಸೆಕೆಂಡ್‌ಗಳ ಕಿರು ವಿಡಿಯೋಗಳ ಮೂಲಕ ಪ್ರಚಾರ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: ಉತ್ತರ ದಿನಾಜ್‌ಪುರಕ್ಕೆ ರೈಲ್ವೇ ಮೂಲಸೌಕರ್ಯಕ್ಕೆ ಒತ್ತು

ಭಾಗವಹಿಸುವವರು ತಮ್ಮ ನಗರದ ಅನನ್ಯತೆ ಬಿಂಬಿಸುವ ಸಾಂಸ್ಕೃತಿಕ ಪರಂಪರೆ, ಸ್ಥಳೀಯ ತಿನಿಸುಗಳು, ಸಂಪ್ರದಾಯಗಳು, ಕರಕುಶಲ ವಸ್ತುಗಳು, ಸ್ಥಳೀಯರು, ಗುಪ್ತ ಪ್ರವಾಸಿ ತಾಣಗಳು ಮತ್ತು ಸ್ಥಳೀಯ ಅನುಭವಗಳನ್ನು ಈ ಕಿರು ವಿಡಿಯೋಗಳಲ್ಲಿ ಪ್ರದರ್ಶಿಸಬಹುದಾಗಿದೆ. ಸಾಂಪ್ರದಾಯಿಕ ಪ್ರವಾಸೋದ್ಯಮ ಪ್ರಚಾರದ ಶೈಲಿಯನ್ನು ಮೀರಿ, ಸ್ಥಳೀಯ ನಿವಾಸಿಗಳನ್ನೇ ಗಮ್ಯಸ್ಥಾನದ ಕಥೆ ಹೇಳುವವರನ್ನಾಗಿ ಮಾಡುವ ವಿಶಿಷ್ಟ ಪ್ರಯತ್ನ ಇದಾಗಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಸಂಸ್ಕೃತಿ ಇಡೀ ರಾಜ್ಯದ ಜಿಲ್ಲೆಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ಹರಡಿಕೊಂಡಿದೆ ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜೈವೀರ್ ಸಿಂಗ್ ತಿಳಿಸಿದ್ದಾರೆ. 'ವಿಸಿಟ್ ಮೈ ಸ್ಟೇಟ್' ಅಭಿಯಾನದ ಮೂಲಕ ಜೆನ್ ಜಿ ಹಾಗೂ ಇತರ ಯುವ ನಿವಾಸಿಗಳು ತಮ್ಮ ನಗರಗಳನ್ನು ತಮ್ಮದೇ ಆದ ಮಾತುಗಳಲ್ಲಿ ಸಾಂಸ್ಕೃತಿಕ ರಾಯಭಾರಿಗಳಾಗಿ ಪರಿಚಯಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಯುವಕರ ಈ ಪ್ರಯತ್ನವು ಪ್ರವಾಸಿಗರಿಗೆ ರಾಜ್ಯವನ್ನು ಹೆಚ್ಚು ವೈಯಕ್ತಿಕ ಹಾಗೂ ಆಕರ್ಷಕ ರೀತಿಯಲ್ಲಿ ಅನ್ವೇಷಿಸಲು ಸಹಾಯ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಕಿರು ವೀಡಿಯೊಗಳ ಸ್ವರೂಪದ ಮೂಲಕ 'ಒಂದು ಸ್ಥಳ, ವೈಯಕ್ತಿಕ ಧ್ವನಿ ಮತ್ತು ಸ್ಥಳೀಯ ಅನುಭವ'ವನ್ನು ಈ ಅಭಿಯಾನವು ಒಟ್ಟಿಗೆ ತರಲಿದೆ ಎಂದು ಯುಪಿಎಸ್‌ಟಿಸಿ (UPSTDC) ಅಧ್ಯಕ್ಷರು ಹಾಗೂ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಧಾರ್ಮಿಕ ವ್ಯವಹಾರಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮೃತ್ ಅಭಿಜಾತ್ ತಿಳಿಸಿದ್ದಾರೆ. ಇಂದಿನ ದಿನಗಳಲ್ಲಿ ಕಿರು ವಿಡಿಯೋಗಳ ಹೆಚ್ಚುತ್ತಿರುವ ಪ್ರಭಾವ ಮತ್ತು ಪ್ರವಾಸಿ ಆಯ್ಕೆಗಳ ಮೇಲೆ ಕಂಟೆಂಟ್ ಕ್ರಿಯೇಟರ್‌ಗಳ ಶಿಫಾರಸುಗಳ ಪಾತ್ರ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಅಭಿಯಾನ ರೂಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ