Monday, August 31, 2026
Monday, August 31, 2026

ಜಪಾನ್ ಪ್ರವೇಶ: 33 ವರ್ಷಗಳ ಬಳಿಕ ಬಂಧನ!

1993ರ ಅವಧಿಯಲ್ಲಿ ಜಪಾನ್‌ಗೆ ಪ್ರಯಾಣಿಸಿದ್ದ ಆ ವ್ಯಕ್ತಿ, ತಮಗೆ ನೀಡಲಾಗಿದ್ದ 15 ದಿನಗಳ ವೀಸಾದ ಅವಧಿ ಮುಗಿದ ಬಳಿಕವೂ ವಾಪಸ್ ಭಾರತಕ್ಕೆ ತೆರಳದೆ ಜಪಾನ್‌ನಲ್ಲೇ ಅಕ್ರಮವಾಗಿ ವಾಸಿಸುತ್ತಿದ್ದರು.

ಜಪಾನ್ ದೇಶದ ವಲಸೆ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೀರ್ಘಕಾಲಿಕ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬರೋಬ್ಬರಿ 33 ವರ್ಷಗಳ ಹಿಂದೆ ಅಂದರೆ 1993ರಲ್ಲಿ ಕೇವಲ 15 ದಿನಗಳ ಪ್ರವಾಸಿ ವೀಸಾದೊಂದಿಗೆ ಜಪಾನ್‌ಗೆ ಪ್ರವೇಶಿಸಿ, ಅಲ್ಲಿಯೇ ಕಾನೂನುಬಾಹಿರವಾಗಿ ತಲೆಮರೆಸಿಕೊಂಡು ನೆಲೆಸಿದ್ದರು. ಪ್ರಸ್ತುತ 72 ವರ್ಷ ವಯಸ್ಸಾಗಿರುವ ಆ ವ್ಯಕ್ತಿಯನ್ನು ಜಪಾನ್ ಪೊಲೀಸರು ಈಗ ಬಂಧಿಸಿದ್ದಾರೆ.

ಇದನ್ನೂ ಓದಿ: ತಲೆಕೆಳಗಾಗಿ ಚಲಿಸುವಂತೆ ಕಾಣುವ ಜಪಾನ್‌ನ ವಿಚಿತ್ರ ರೈಲು!

1993ರ ಅವಧಿಯಲ್ಲಿ ಜಪಾನ್‌ಗೆ ಪ್ರಯಾಣಿಸಿದ್ದ ಆ ವ್ಯಕ್ತಿ, ತಮಗೆ ನೀಡಲಾಗಿದ್ದ 15 ದಿನಗಳ ವೀಸಾದ ಅವಧಿ ಮುಗಿದ ಬಳಿಕವೂ ವಾಪಸ್ ಭಾರತಕ್ಕೆ ತೆರಳದೆ ಜಪಾನ್‌ನಲ್ಲೇ ಅಕ್ರಮವಾಗಿ ವಾಸಿಸುತ್ತಿದ್ದರು.

ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ (33 ವರ್ಷಗಳು) ಯಾವುದೇ ಅಧಿಕೃತ ದಾಖಲೆಗಳು ಅಥವಾ ವೀಸಾ ವಿಸ್ತರಣೆ ಇಲ್ಲದೆ ಅವರು ಜಪಾನ್‌ನ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುತ್ತಾ ಕಾಲ ಕಳೆದಿದ್ದಾರೆ.

ವೃದ್ಧರಾದ ಬಳಿಕ ಸ್ಥಳೀಯ ಆಡಳಿತದ ತನಿಖೆ ಹಾಗೂ ವಲಸೆ ಕಾಯಿದೆಯ ಕಠಿಣ ಪರಿಶೀಲನೆಯ ವೇಳೆ ಈ ಅಕ್ರಮ ವಾಸದ ಮಾಹಿತಿ ಬೆಳಕಿಗೆ ಬಂದಿದ್ದು, ಪೊಲೀಸರು 72 ವರ್ಷದ ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಜಪಾನ್ ದೇಶದ ಕಠಿಣ ವಲಸೆ ಕಾನೂನುಗಳ ಅನ್ವಯ, ಅಕ್ರಮವಾಗಿ ನೆಲೆಸಿರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಅವರನ್ನು ತಾಯ್ನಾಡಿಗೆ ಗಡಿಪಾರು ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ.

ದಶಕಗಳ ಕಾಲ ವಿದೇಶದಲ್ಲಿ ಅಕ್ರಮವಾಗಿ ತಲೆಮರೆಸಿಕೊಂಡಿದ್ದ ಈ ವೃದ್ಧನ ಪ್ರಕರಣವು ಪ್ರಸ್ತುತ ಜಪಾನ್ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ