Monday, August 31, 2026
Monday, August 31, 2026

ವಿದೇಶಿ ಪ್ರವಾಸಿಗರಿಗೆ ಲಡಾಖ್‌ ಪ್ರವಾಸ ಸುಲಭ

ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಹಾಗೂ ಗಡಿ ಭಾಗಗಳ ಭದ್ರತಾ ಅವಶ್ಯಕತೆಗಳನ್ನು ಸಮತೋಲನದಲ್ಲಿಡುವುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ಲಡಾಖ್‌ಗೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ಪ್ರಕ್ರಿಯೆಗಳನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಆಡಳಿತವು ಮಹತ್ವದ ಹೆಜ್ಜೆಯಿಟ್ಟಿದೆ. ಲಡಾಕ್‌ನಾದ್ಯಂತ ಸಂಚರಿಸಲು ಪ್ರತ್ಯೇಕ ಅನುಮತಿಗಳ ಬದಲು 'ಸಿಂಗಲ್‌ ಪ್ರೊಟೆಕ್ಟೆಡ್‌ ಏರಿಯಾ ಪರ್ಮಿಟ್‌ (PAP) ವ್ಯವಸ್ಥೆಯನ್ನು ಜಾರಿಗೆ ತರಲು ಮತ್ತು ವಿಮಾನ ನಿಲ್ದಾಣದಲ್ಲೇ ವಿಶೇಷ ಪರಿಶೀಲನಾ ಡೆಸ್ಕ್ ಸ್ಥಾಪಿಸಲು ಲಡಾಖ್‌ ಆಡಳಿತವು ಗಂಭೀರ ಚಿಂತನೆ ನಡೆಸಿದೆ.

ಇದನ್ನೂ ಓದಿ: ಡಾರ್ಜಿಲಿಂಗ್‌ ಹಿಮಾಲಯನ್ ರೈಲ್ವೇಯ ವಿಶೇಷ ಜಾಯ್‌ರೈಡ್

ಪ್ರಸ್ತುತ ವಿದೇಶಿ ಪ್ರವಾಸಿಗರು ಲಡಾಖ್‌ನ ವಿವಿಧ ಭಾಗಗಳಿಗೆ ತೆರಳಲು ಪ್ರತ್ಯೇಕ ಅನುಮತಿಗಳನ್ನು ಪಡೆಯಬೇಕಾಗುತ್ತದೆ. ಆದರೆ ಇನ್ನುಮುಂದೆ ಅತ್ಯಂತ ನಿರ್ಬಂಧಿತ ಪ್ರದೇಶಗಳನ್ನು ಹೊರತುಪಡಿಸಿ, ಇಡೀ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯವಾಗುವಂತೆ ಒಂದೇ ಒಂದು ಏಕೈಕ ಪರ್ಮಿಟ್ ನೀಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಹಾಗೂ ಗಡಿ ಭಾಗಗಳ ಭದ್ರತಾ ಅವಶ್ಯಕತೆಗಳನ್ನು ಸಮತೋಲನದಲ್ಲಿಡುವುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಲಡಾಖ್‌ಗೆ ಬಂದಿಳಿಯುವ ವಿದೇಶಿ ಪ್ರವಾಸಿಗರಿಗಾಗಿ ಲೇಹ್ ವಿಮಾನ ನಿಲ್ದಾಣದಲ್ಲೇ ಪ್ರತ್ಯೇಕ ನೋಂದಣಿ ಹಾಗೂ ಪರಿಶೀಲನಾ ಡೆಸ್ಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಮಾರ್ಗಮಧ್ಯೆ ಅನಗತ್ಯ ಚೆಕ್‌ಪೋಸ್ಟ್‌ಗಳಿಂದ ಪ್ರವಾಸಿಗರಿಗೆ ಉಂಟಾಗುವ ವಿಳಂಬವನ್ನು ತಪ್ಪಿಸಲು ಮತ್ತು ಪ್ರಯಾಣದ ದಾಖಲೆಗಳನ್ನು ವಿಮಾನ ನಿಲ್ದಾಣದಲ್ಲೇ ಪರಿಶೀಲಿಸಲು ಹೊಸ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಸಿದ್ಧಪಡಿಸಲಾಗುತ್ತಿದೆ.

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನು ಹೆಚ್ಚು ಚುರುಕುಗೊಳಿಸಲು ಮುಖ ಗುರುತಿಸುವಿಕೆ ತಂತ್ರಜ್ಞಾನ ಹಾಗೂ ಸ್ವಯಂ-ನೋಂದಣಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಚಿಂತಿಸಲಾಗಿದೆ. ಅಲ್ಲದೆ, ವಿದೇಶಿ ಪ್ರವಾಸಿಗರಿಗೆ ಆತಿಥ್ಯ ನೀಡುವ ಎಲ್ಲಾ ಹೊಟೇಲ್‌ಗಳು ಮತ್ತು ಹೋಂ-ಸ್ಟೇಗಳು ಕಡ್ಡಾಯವಾಗಿ 'ಫಾರ್ಮ್ III' ದಾಖಲೆಗಳನ್ನು ನಿರ್ವಹಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ನೂತನ ನಿಯಮಗಳು ಜಾರಿಗೆ ಬಂದರೆ, ವಿದೇಶಿ ಪ್ರವಾಸಿಗರಿಗೆ ಲಡಾಕ್ ಪ್ರವಾಸವು ಹೆಚ್ಚು ಸುಲಭ, ಸುರಕ್ಷಿತ ಹಾಗೂ ಆರಾಮದಾಯಕವಾಗಲಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ