Monday, October 12, 2026
Monday, October 12, 2026

ದೆಹಲಿ ರಸ್ತೆಗಳಲ್ಲಿ ಡಬಲ್‌ ಡೆಕ್ಕರ್‌ ಬಸ್‌ ಸುತ್ತಾಟ ಮತ್ತೆ ಆರಂಭ

ಈ ಹಿಂದೆ ದೆಹಲಿಯನ್ನು ಸುತ್ತಾಡಿದ್ದ ಡಬಲ್‌ ಡೆಕ್ಕರ್‌ ಬಸ್‌ಗಳು ಪ್ರವಾಸಿಗಳನ್ನು ಆಕರ್ಷಿಸಲು ಮತ್ತೆ ದೆಹಲಿಯ ರಸ್ತೆಗಳಲ್ಲಿ ಓಡಾಟ ಆರಂಭಿಸಿವೆ. 65 ಆಸನಗಳ ವ್ಯವಸ್ಥೆಯ ಜತೆಗೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳು ಇವಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಗರ ಸಂಚಾರಕ್ಕೆ ಡಬಲ್‌ ಡೆಕ್ಕರ್‌ ಎಲೆಕ್ಟ್ರಿಕ್‌ ಬಸ್‌ಗಳು ಸಜ್ಜಾಗಿವೆ. ದೆಹಲಿ ಪ್ರವಾಸೋದ್ಯಮಕ್ಕೆ ಇಂಬು ನೀಡುವ ಈ ಬಸ್‌ಗಳ ಓಡಾಟಕ್ಕೆ ಶುಕ್ರವಾರ ಸಿಎಂ ರೇಖಾ ಗುಪ್ತಾ ಚಾಲನೆ ನೀಡಿದರು.

ಈ ಕುರಿತು ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಸಿಎಂ ರೇಖಾ ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ದೆಹಲಿಯನ್ನು ಸುತ್ತಾಡಿದ್ದ ಡಬಲ್‌ ಡೆಕ್ಕರ್‌ ಬಸ್‌ಗಳು ಪ್ರವಾಸಿಗಳನ್ನು ಆಕರ್ಷಿಸಲು ಮತ್ತೆ ದೆಹಲಿಯ ರಸ್ತೆಗಳಲ್ಲಿ ಓಡಾಟ ಆರಂಭಿಸಿವೆ. 65 ಆಸನಗಳ ವ್ಯವಸ್ಥೆಯ ಜತೆಗೆ ಸಂಪೂರ್ಣ ಎಲೆಕ್ಟ್ರಿಕ್‌ ವಾಹನಗಳು ಇವಾಗಿವೆ. ಪರಿಸರ ಕಾಳಜಿಯ ಜತೆಗೆ ಪ್ರವಾಸಿಗರಿಗೂ ಉತ್ತಮ ಅನುಭವ ನೀಡಲಿವೆ ಎಂದಿದ್ದಾರೆ.

ಈ ಬಸ್‌ಗಳ ಸುತ್ತಾಟಕ್ಕೆ ದೆಹಲಿಯ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಪರಂಪರೆಯನ್ನು ಸಾರುವ ತಾಣಗಳನ್ನು ಒಳಗೊಂಡ ಸರ್ಕ್ಯೂಟ್‌ ಸಿದ್ಧವಾಗಿದೆ. ಶಾಹೀದ್‌ ಸ್ಮಾರಕ, ಪ್ರಧಾನಮಂತ್ರಿ ಸಂಗ್ರಹಾಲಯದಂಥ ಸ್ಥಳಗಳೂ ಯೋಜನೆಯಲ್ಲಿವೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!