Thursday, March 19, 2026
Thursday, March 19, 2026

ದೆಹಲಿ ಸರಕಾರದಿಂದ ಪ್ರವಾಸೋದ್ಯಮ ಮಂಡಳಿ ಸ್ಥಾಪನೆ ಸಾಧ್ಯತೆ

ದೆಹಲಿ ಸರಕಾರ ಪ್ರವಾಸೋದ್ಯಮ ಮಂಡಳಿ ಸ್ಥಾಪಿಸುವ ಯೋಚನೆ ಹೊಂದಿದ್ದು, 2026-27ರ ಬಜೆಟ್ನಲ್ಲಿ ಈ ಕುರಿತು ಅಧಿಕೃತ ಘೋಷಣೆ ಮತ್ತು ಹಣಕಾಸು ಹಂಚಿಕೆಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.

ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲು ದೆಹಲಿ ಸರಕಾರವು ದೊಡ್ಡ ಹೆಜ್ಜೆಗೆ ಸಿದ್ಧತೆ ನಡೆಸುತ್ತಿದೆ. ಮುಂಬರುವ 2026-27ರ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಮೀಸಲಾದ 'ಪ್ರವಾಸೋದ್ಯಮ ಮಂಡಳಿ'ಯನ್ನು ರಚಿಸುವ ಪ್ರಸ್ತಾವನೆಯನ್ನು ಸರಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗಿದೆ.

ಪ್ರಸ್ತುತ ದೆಹಲಿಯ ಪ್ರವಾಸೋದ್ಯಮ ಚಟುವಟಿಕೆಗಳನ್ನು ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ನಿರ್ವಹಿಸುತ್ತಿದೆ. ಆದರೆ, ಪ್ರವಾಸೋದ್ಯಮ ಮಂಡಳಿಯು ಕೇವಲ ಮೂಲಸೌಕರ್ಯಕ್ಕೆ ಸೀಮಿತವಾಗದೆ, ದೆಹಲಿಯನ್ನು ಜಾಗತಿಕ ಪ್ರವಾಸಿ ತಾಣವಾಗಿ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಮಾಡುವತ್ತ ಹೆಚ್ಚಿನ ಗಮನ ಹರಿಸಲಿದೆ.

ಇದನ್ನೂ ಓದಿ: ವಿಶೇಷ ಚೇತನರಿಗೆ ಆಂಧ್ರಪ್ರದೇಶ ಸರಕಾರದಿಂದ ಉಚಿತ ಪ್ರಯಾಣ ಸೌಲಭ್ಯ

ಬಜೆಟ್‌ನಲ್ಲಿನ ಆದ್ಯತೆಗಳು

2026-27ರ ಬಜೆಟ್‌ನಲ್ಲಿ ಈ ಮಂಡಳಿಗೆ ವಿಶೇಷ ಅನುದಾನವನ್ನು ಮೀಸಲಿಡುವ ಸಾಧ್ಯತೆಯಿದೆ. ದೆಹಲಿಯ ಪ್ರಸಿದ್ಧ ಮತ್ತು ಕಡಿಮೆ ಪರಿಚಿತ ಸ್ಮಾರಕಗಳನ್ನು ಪ್ರವಾಸಿ ಸ್ನೇಹಿಯಾಗಿಸುವುದು, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಶೂಟಿಂಗ್‌ಗಳಿಗೆ ಅನುಮತಿ ನೀಡಲು ಸುಲಭ ಪ್ರಕ್ರಿಯೆ ರೂಪಿಸುವುದು, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಖಾಸಗಿ ಸಂಸ್ಥೆಗಳೊಂದಿಗೆ ಕೈಜೋಡಿಸುವುದು ಇದರ ಮುಖ್ಯ ಉದ್ದೇಶಗಳು. ಪ್ರವಾಸಿಗರು ದೆಹಲಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಲು ನೈಟ್ ಲೈಫ್, ಹೆರಿಟೇಜ್ ವಾಕ್‌ಗಳು ಮತ್ತು ಸಾಂಸ್ಕೃತಿಕ ಉತ್ಸವಗಳನ್ನು ಉತ್ತೇಜಿಸುವುದು ಸರಕಾರದ ಯೋಜನೆ.

ಮೂಲಗಳ ಪ್ರಕಾರ, ಪ್ರವಾಸೋದ್ಯಮ ಮಂಡಳಿಯು ವೃತ್ತಿಪರರು ಮತ್ತು ತಜ್ಞರನ್ನೊಳಗೊಂಡ ಸಂಸ್ಥೆಯಾಗಿ ಕಾರ್ಯನಿರ್ವಹಿಸಬಹುದು. ಇದು ದೆಹಲಿಯನ್ನು "ಸಿಟಿ ಆಫ್ ಮ್ಯೂಸಿಯಂಸ್" ಮತ್ತು "ಫುಡ್ ಕ್ಯಾಪಿಟಲ್" ಎಂದು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಿದೆ ಎನ್ನಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!