Tuesday, November 3, 2026
Tuesday, November 3, 2026

ಕ್ಯಾನ್ಸರ್‌ ಚಿಕಿತ್ಸೆಗಾಗಿ ಮಕ್ಕಳಿಗೆ ದೂರದ ಪ್ರಯಾಣದ ಸಂಕಷ್ಟ

ಕ್ಯಾನ್ಸರ್‌ ಪೀಡಿತ ಮಕ್ಕಳು ವಿಶೇಷ ಚಿಕಿತ್ಸಾ ಕೇಂದ್ರಗಳನ್ನು ತಲುಪಲು ಗಂಟೆಗಟ್ಟಲೆ ಪ್ರಯಾಣಿಸಬೇಕಾದ ಅನಿವಾರ್ಯತೆ ಭಾರತದಲ್ಲಿ ಇದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಮಕ್ಕಳ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳ ಅಸಮರ್ಪಕ ಹಂಚಿಕೆಯಿಂದಾಗಿ ಕುಟುಂಬಗಳು ದೂರದ ನಗರಗಳಿಗೆ ತೆರಳಬೇಕಾಗಿದೆ.

‘ಜರ್ನಲ್‌ ಆಫ್‌ ಕ್ಯಾನ್ಸರ್‌ ಪಾಲಿಸಿ’ಯಲ್ಲಿ ಪ್ರಕಟವಾದ ಈ ಅಧ್ಯಯನವು 2005ರಿಂದ 2019ರವರೆಗೆ ದೆಹಲಿ ಮತ್ತು ಚೆನ್ನೈನ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ 22,328 ಮಕ್ಕಳ ಮಾಹಿತಿಯನ್ನು ವಿಶ್ಲೇಷಿಸಿದೆ. ಅಧ್ಯಯನದ ಪ್ರಕಾರ, ಶೇ.60ರಷ್ಟು ಕುಟುಂಬಗಳು ಚಿಕಿತ್ಸಾ ಕೇಂದ್ರ ತಲುಪಲು ಎರಡು ಗಂಟೆಗೂ ಹೆಚ್ಚು ಪ್ರಯಾಣಿಸುತ್ತವೆ. ಸರಾಸರಿ ಪ್ರಯಾಣದ ಅವಧಿ ಒಂದು ದಿಕ್ಕಿಗೆ ಎರಡು ಗಂಟೆ 40 ನಿಮಿಷಗಳಷ್ಟಿದೆ.

ಬಿಹಾರದ ಪಾಟ್ನಾದ 15 ವರ್ಷದ ಶಿವಂ ಕುಮಾರ್‌ ಕ್ಯಾನ್ಸರ್‌ ಮರುಕಳಿಸಿದ ಬಳಿಕ ದೆಹಲಿಯ ಏಮ್ಸ್‌ಗೆ ಚಿಕಿತ್ಸೆಗಾಗಿ ತಿಂಗಳಿಗೆ ಎರಡು ಬಾರಿ 1,000 ಕಿಮೀ.ಗೂ ಹೆಚ್ಚು ದೂರ ಪ್ರಯಾಣಿಸುತ್ತಿದ್ದಾನೆ. ಇಂಥ ಪ್ರಯಾಣವು ಕುಟುಂಬಗಳ ಆರ್ಥಿಕ ಮತ್ತು ಮಾನಸಿಕ ಸಂಕಷ್ಟವನ್ನು ಹೆಚ್ಚಿಸುತ್ತದೆ ಎಂದು ವರದಿ ಹೇಳಿದೆ.

ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಮಕ್ಕಳ ಕ್ಯಾನ್ಸರ್‌ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸುವುದು, ಪ್ರಾದೇಶಿಕ ಚಿಕಿತ್ಸಾ ಜಾಲ ಮತ್ತು ರೆಫರಲ್‌ ವ್ಯವಸ್ಥೆ ಬಲಪಡಿಸುವುದು ಅಗತ್ಯ ಎಂದು ಅಧ್ಯಯನ ಶಿಫಾರಸು ಮಾಡಿದೆ. 2028ರ ವೇಳೆಗೆ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ-ಕೇರ್‌ ಕ್ಯಾನ್ಸರ್‌ ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನೂ ಸರಕಾರ ಹೊಂದಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!