ಬನ್ನೇರುಘಟ್ಟ ಉದ್ಯಾನವನ ರಾಜ್ಯಕ್ಕೆ ನಂಬರ್ ಒನ್
ಬೆಂಗಳೂರಿನ ಜನರಲ್ಲಿ ಪ್ರಾಣಿಪ್ರೇಮ ಹೆಚ್ಚಿದ್ದು, ಬನ್ನೇರುಘಟ್ಟ ಉದ್ಯಾನವನದ ಪ್ರಾಣಿ ದತ್ತು ಸ್ವೀಕಾರ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಇದರಿಂದಾಗಿ 80 ಲಕ್ಷ ದೇಣಿಗೆ ಸಂಗ್ರಹವಾಗಿದ್ದು, ದತ್ತು ಸ್ವೀಕಾರ ದೇಣಿಗೆಯಲ್ಲಿ ರಾಜ್ಯ ಮೃಗಾಲಯಗಳ ಪೈಕಿ, ಬನ್ನೇರುಘಟ್ಟ ಪ್ರಥಮ ಸ್ಥಾನದಲ್ಲಿದೆ ಎಂದು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹೊಸ ಮೈಲಿಗಲ್ಲನ್ನು ಸಾಧಿಸಿದೆ. 2024-26ನೇ ಸಾಲಿನಲ್ಲಿ 84 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದು, 64 ಕೋಟಿ ರು. ಆದಾಯ ಉದ್ಯಾನವನದ ಬೊಕ್ಕಸ ಸೇರಿದೆ. ಬೆಂಗಳೂರಿನ ಜನರಲ್ಲಿ ಪ್ರಾಣಿಪ್ರೇಮ ಹೆಚ್ಚಿದ್ದು, ಬನ್ನೇರುಘಟ್ಟ ಉದ್ಯಾನವನದ ಪ್ರಾಣಿ ದತ್ತು ಸ್ವೀಕಾರ ಕಾರ್ಯಕ್ರಮ ಬಹಳ ಯಶಸ್ವಿಯಾಗಿದೆ. ಇದರಿಂದಾಗಿ 80 ಲಕ್ಷ ದೇಣಿಗೆ ಸಂಗ್ರಹವಾಗಿದ್ದು, ದತ್ತು ಸ್ವೀಕಾರ ದೇಣಿಗೆಯಲ್ಲಿ ರಾಜ್ಯ ಮೃಗಾಲಯಗಳ ಪೈಕಿ, ಬನ್ನೇರುಘಟ್ಟ ಪ್ರಥಮ ಸ್ಥಾನದಲ್ಲಿದೆ ಎಂದು ಮೃಗಾಲಯದ ಆಡಳಿತ ಮಂಡಳಿ ತಿಳಿಸಿದೆ.
‘ಚಿಣ್ಣರ ಮೃಗಾಲಯ ದರ್ಶನ’ ಕಾರ್ಯಕ್ರಮದ ಅಡಿಯಲ್ಲಿ, ಸುಮಾರು 4000 ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಮೃಗಾಲಯ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.