ಆಕಾಶದಲ್ಲೇ ಅತಿವೇಗದ ಇಂಟರ್‌ನೆಟ್ ಸೇವೆ
ವಿಯೆನ್ನಾದಿಂದ ನಿರ್ಗಮಿಸಿದ ಈ ವಿಶೇಷ ವಿಮಾನದಲ್ಲಿ ಪ್ರಯಾಣಿಕರು ಯಾವುದೇ ತಡೆಯಿಲ್ಲದೆ ಸ್ಟ್ರೀಮಿಂಗ್ ಮಾಡುವುದು, ಆನ್‌ಲೈನ್ ಗೇಮ್‌ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಬಳಸುವ ಸೌಲಭ್ಯವನ್ನು ಪಡೆದುಕೊಂಡರು.
ಯುರೋಪ್‌ನ ಪ್ರಸಿದ್ಧ ವಿಮಾನಯಾನ ಸಂಸ್ಥೆಯಾದ ಆಸ್ಟ್ರಿಯನ್ ಏರ್‌ಲೈನ್ಸ್, ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ಅತ್ಯಾಧುನಿಕ ಉಪಗ್ರಹ ತಂತ್ರಜ್ಞಾನವನ್ನು ಬಳಸಿ ತನ್ನ ವಿಮಾನಗಳಲ್ಲಿ ಅತಿವೇಗದ ವೈ-ಫೈ (Wi-Fi) ಸೇವೆಯೊಂದಿಗೆ ಮೊದಲ ವಿಮಾನದ ವಾಣಿಜ್ಯ ಹಾರಾಟವನ್ನು ಯಶಸ್ವಿಯಾಗಿ ಆರಂಭಿಸಿದೆ. ಇದರೊಂದಿಗೆ, ಪ್ರಯಾಣಿಕರಿಗೆ ಆಕಾಶದಲ್ಲೇ ಉಚಿತ ಮತ್ತು ಅತಿವೇಗದ ಇಂಟರ್‌ನೆಟ್ ಸಂಪರ್ಕವನ್ನು ಒದಗಿಸುವ ಲುಫ್ಥಾನ್ಸಾ ಸಮೂಹದ ಮೊದಲ ವಿಮಾನಯಾನ ಸಂಸ್ಥೆಯಾಗಿ ಆಸ್ಟ್ರಿಯನ್ ಏರ್‌ಲೈನ್ಸ್ ಹೊರಹೊಮ್ಮಿದೆ.
ಇದನ್ನೂ ಓದಿ: ವಿದೇಶಿ ಟ್ರಾವೆಲರ್ ಮುಂಬೈ-ಗೋವಾ ರೈಲು ಪಯಣದ ವಿಡಿಯೋ ವೈರಲ್
ವಿಯೆನ್ನಾದಿಂದ ನಿರ್ಗಮಿಸಿದ ಈ ವಿಶೇಷ ವಿಮಾನದಲ್ಲಿ ಪ್ರಯಾಣಿಕರು ಯಾವುದೇ ತಡೆಯಿಲ್ಲದೆ ಸ್ಟ್ರೀಮಿಂಗ್ ಮಾಡುವುದು, ಆನ್‌ಲೈನ್ ಗೇಮ್‌ಗಳನ್ನು ಆಡುವುದು ಮತ್ತು ಸಾಮಾಜಿಕ ಜಾಲತಾಣಗಳನ್ನು ಸುಲಭವಾಗಿ ಬಳಸುವ ಸೌಲಭ್ಯವನ್ನು ಪಡೆದುಕೊಂಡರು. ವಿಮಾನದ ಒಳಗೆ ಸಾಮಾನ್ಯ ಬ್ರಾಡ್‌ಬ್ಯಾಂಡ್ ಸಂಪರ್ಕದಂತೆ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಸ್ಮಾರ್ಟ್‌ಫೋನ್‌ಗಳಲ್ಲಿ ಅತಿವೇಗದ ಸಿಗ್ನಲ್ ಲಭ್ಯವಿದ್ದು, ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಲುಫ್ಥಾನ್ಸಾ ಸಮೂಹವು ತನ್ನ ಎಲ್ಲ ವಿಮಾನಗಳಲ್ಲಿ ಇಂಟರ್‌ನೆಟ್ ಸೌಲಭ್ಯವನ್ನು ಮೇಲ್ದರ್ಜೆಗೇರಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಈ ಹೆಜ್ಜೆಯನ್ನು ಇರಿಸಿದೆ. ಮುಂಬರುವ ದಿನಗಳಲ್ಲಿ ಆಸ್ಟ್ರಿಯನ್ ಏರ್‌ಲೈನ್ಸ್‌ನ ಇತರ ವಿಮಾನಗಳಿಗೂ ಸ್ಟಾರ್‌ಲಿಂಕ್ ವೈ-ಫೈ ಸೇವೆಯನ್ನು ವಿಸ್ತರಿಸಲಾಗುತ್ತಿದೆ.