Friday, February 27, 2026
Friday, February 27, 2026

ಪ್ರವಾಸೋದ್ಯಮ ಇಲಾಖೆಯಿಂದ ಸಿಗ್ತಿದೆ ಭರ್ಜರಿ 5 ಲಕ್ಷ ಸಹಾಯಧನ

ಈ ಯೋಜನೆಯಡಿ ಕೇವಲ ಹಣ ನೀಡುವುದು ಮಾತ್ರವಲ್ಲ, ಬ್ಯುಸಿನೆಸ್ ಮಾಡುವುದು ಹೇಗೆ ಎಂಬ ತರಬೇತಿಯನ್ನೂ ಸರ್ಕಾರವೇ ನೀಡುತ್ತದೆ. ಎಸ್‌ಸಿಎಸ್‌ಪಿ (SCSP) ಮತ್ತು ಟಿಎಸ್‌ಪಿ (TSP) ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಗೆ ಬಳಸಲಾಗುವ 4 ಚಕ್ರದ ವಾಹನ ಖರೀದಿಸಲು ಘಟಕದ ಒಟ್ಟು ವೆಚ್ಚದ 70% ರಷ್ಟು ಅಥವಾ ಗರಿಷ್ಠ ₹5 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ.

‘ಫುಡ್ ಟ್ರಕ್’ಅಥವಾ ಮೊಬೈಲ್ ಕ್ಯಾಂಟೀನ್‌ಗಳ ಕ್ರೇಜ್ ಇಂದಿನ ಯುವಜನತೆಯಲ್ಲಿ ಹೆಚ್ಚುತ್ತಲೇ ಇದೆ. ಈ ಆಲೋಚನೆ ಕೆಲವರ ದಿನನಿತ್ಯದ ದುಡಿಮೆಯ ದಾರಿಯಾದರೆ, ಇನ್ನೂ ಕೆಲವರಿಗೆ ಪಾರ್ಟ್ ಟೈಮ್ ಬ್ಯುಸಿನೆಸ್ ಆಗಿದೆ. ಕಡಿಮೆ ಬಂಡವಾಳದಲ್ಲಿ, ರುಚಿಯಾದ ಆಹಾರವನ್ನು ನೀಡಿ ಉತ್ತಮ ಆದಾಯಗಳಿಸಲು ಇದೊಂದು ಬೆಸ್ಟ್ ಐಡಿಯಾ. ಆದರೆ ವಾಹನ ಖರೀದಿಸಲು ಹಣವಿಲ್ಲದೆ ಒದ್ದಾಡುತ್ತಿರುವ ನಿರುದ್ಯೋಗಿಗಳಿಗೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಹೌದು, ಆರ್ಥಿಕವಾಗಿ ಹಿಂದುಳಿದ ಯುವಕ-ಯುವತಿಯರು ಸ್ವಾವಲಂಬನೆ ಸಾಧಿಸಲು, ‘ಮೊಬೈಲ್ ಕ್ಯಾಂಟೀನ್’ ಆರಂಭಿಸಲು ಸರಕಾರವೇ ಇದೀಗ ಬರೋಬ್ಬರಿ 5 ಲಕ್ಷ ರೂಪಾಯಿಗಳವರೆಗೆ ಸಹಾಯಧನ ನೀಡಲು ಮುಂದಾಗಿದೆ.

ಬಿಡದಿಯ ನೆಲ್ಲಿಗುಡ್ಡದಲ್ಲಿ ವಾಟರ್‌ ಸ್ಪೋರ್ಟ್ಸ್‌

ಸಬ್ಸಿಡಿ ಜತೆಗೆ ಉಚಿತ ತರಬೇತಿ

4 ಚಕ್ರದ ವಾಹನ ಖರೀದಿಸಲು ಒಟ್ಟು ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಠ ₹5,00,000 ವರೆಗೆ ಉಚಿತ ಸಬ್ಸಿಡಿ ಸಿಗಲಿದೆ. ಅಲ್ಲದೆ ಈ ಯೋಜನೆಯಡಿ ಕೇವಲ ಹಣ ನೀಡುವುದು ಮಾತ್ರವಲ್ಲ, ಬ್ಯುಸಿನೆಸ್ ಮಾಡುವುದು ಹೇಗೆ ಎಂಬ ತರಬೇತಿಯನ್ನೂ ಸರ್ಕಾರವೇ ನೀಡುತ್ತದೆ. ಎಸ್‌ಸಿಎಸ್‌ಪಿ (SCSP) ಮತ್ತು ಟಿಎಸ್‌ಪಿ (TSP) ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಗೆ ಬಳಸಲಾಗುವ 4 ಚಕ್ರದ ವಾಹನ ಖರೀದಿಸಲು ಘಟಕದ ಒಟ್ಟು ವೆಚ್ಚದ 70% ರಷ್ಟು ಅಥವಾ ಗರಿಷ್ಠ ₹5 ಲಕ್ಷದವರೆಗೆ ಸಬ್ಸಿಡಿ ಸಿಗಲಿದೆ. ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಉದ್ಯಮವನ್ನು ಯಶಸ್ವಿಯಾಗಿ ನಡೆಸಲು 1 ತಿಂಗಳ ಕಾಲ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಉಚಿತ ತರಬೇತಿಯನ್ನು ನೀಡಲಾಗುತ್ತದೆ.

Untitled design (56)

ಅರ್ಜಿ ಸಲ್ಲಿಸುವ ಮುನ್ನ ಇದನ್ನು ತಿಳಿದುಕೊಳ್ಳಿ:

ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.

ವಯೋಮಿತಿ 20 ರಿಂದ 45 ವರ್ಷದೊಳಗಿರಬೇಕು ಹಾಗೂ ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು.

ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು.

ವಾರ್ಷಿಕ ಆದಾಯ ಮಿತಿ: ನಗರ ಪ್ರದೇಶದವರಾಗಿದ್ದರೆ 2 ಲಕ್ಷ ರು. ಹಾಗೂ ಗ್ರಾಮೀಣ ಪ್ರದೇಶದವರಾಗಿದ್ದರೆ 1.50 ಲಕ್ಷ ರು. ಒಳಗಿರಬೇಕು.

ಕುಟುಂಬದ ಯಾವುದೇ ಸದಸ್ಯರು ಸರಕಾರಿ ನೌಕರಿಯಲ್ಲಿ ಇರಬಾರದು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

ಪ್ರವಾಸೋದ್ಯಮ ಕಚೇರಿಯಲ್ಲಿ ಸಿಗುವ ಅರ್ಜಿಯನ್ನು ಭರ್ತಿ ಮಾಡಿದ ನಂತರ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಜ್ ಫೊಟೋ , ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಮತ್ತು ಡಿಎಲ್ (ಡ್ರೈವಿಂಗ್ ಲೈಸೆನ್ಸ್) ಪ್ರತಿ, ಸರ್ಕಾರಿ ನೌಕರಿಯಲ್ಲಿ ಇಲ್ಲದ ಬಗ್ಗೆ 50 ರು.ನ ಬಾಂಡ್ ಪೇಪರ್, ಯೋಜನಾ ವರದಿಯನ್ನು ಜತೆಗಿರಸಬೇಕು.

ಅರ್ಜಿ ಸಲ್ಲಿಸುವ ವಿಧಾನ :

ಇದು ಆನ್‌ಲೈನ್ ಪ್ರಕ್ರಿಯೆಯಲ್ಲ. ಆಸಕ್ತ ಅಭ್ಯರ್ಥಿಗಳು ತಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು. ನಿಮ್ಮ ಜಿಲ್ಲೆಯ ಅರ್ಜಿ ಆಹ್ವಾನದ ದಿನಾಂಕ ತಿಳಿಯಲು ನಿಮ್ಮ ಜಿಲ್ಲಾ ಪ್ರವಾಸೋದ್ಯಮ ಕಚೇರಿಯನ್ನು ಇಂದೇ ಸಂಪರ್ಕಿಸಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..