Tuesday, July 28, 2026
Tuesday, July 28, 2026

150 ವರ್ಷದ ಹಳೆಯ ವಿಲ್ಲಾ: ಒಂದು ರಾತ್ರಿಗೆ 75 ಸಾವಿರ ರು. ಬಾಡಿಗೆ

ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ತಮ್ಮ 150 ವರ್ಷಗಳಷ್ಟು ಹಳೆಯ ಪೋರ್ಚುಗೀಸ್ ಶೈಲಿಯ ಗೋವಾ ಮನೆಯನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ.

ಬಾಲಿವುಡ್ ನಟ ಅರ್ಷದ್ ವಾರ್ಸಿ ಮತ್ತು ಅವರ ಪತ್ನಿ ಮಾರಿಯಾ ಗೊರೆಟ್ಟಿ ತಮ್ಮ 150 ವರ್ಷಗಳಷ್ಟು ಹಳೆಯ ಪೋರ್ಚುಗೀಸ್ ಶೈಲಿಯ ಗೋವಾ ಮನೆಯನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಮುಂದಾಗಿದ್ದಾರೆ. ಉತ್ತರ ಗೋವಾದ ಸಾಲಿಗಾವ್ ಪ್ರದೇಶದಲ್ಲಿರುವ ಈ ಪರಂಪರೆಯ ವಿಲ್ಲಾಗೆ 'ಕಾಸಾ ಝೆನ್' (Casa Zen) ಎಂದು ಹೆಸರು ಇಡಲಾಗಿದೆ. ಈ ಐದು ಮಲಗುವ ಕೋಣೆಗಳ ವಿಲ್ಲಾದಲ್ಲಿ ತಂಗಲು ಒಂದು ರಾತ್ರಿ 75,000 ರು. (ತೆರಿಗೆ ಪ್ರತ್ಯೇಕ) ಶುಲ್ಕ ನಿಗದಿಪಡಿಸಲಾಗಿದೆ.

Untitled design - 2026-07-28T150803.152

ಸುಮಾರು ಒಂದೂವರೆ ಶತಮಾನದ ಇತಿಹಾಸ ಹೊಂದಿರುವ ಈ ಮನೆಯನ್ನು ಮರುನಿರ್ಮಾಣ ಮಾಡುವಾಗ ಅದರ ಮೂಲ ಪೋರ್ಚುಗೀಸ್ ವಾಸ್ತುಶೈಲಿಯನ್ನು ಉಳಿಸಿಕೊಳ್ಳಲಾಗಿದೆ. ಮನೆಯ ಒಳಾಂಗಣದಲ್ಲಿ ಪಾರಂಪರಿಕ ಪೀಠೋಪಕರಣಗಳು, ಕುಟುಂಬದ ಪರಂಪರೆಯ ವಸ್ತುಗಳು, ಪುರಾತನ ಅಲಮಾರಿಗಳು, ಬಣ್ಣ-ಬಣ್ಣದ ಅಲಂಕಾರ ಹಾಗೂ ಕಲಾಕೃತಿಗಳನ್ನು ಅಂದವಾಗಿ ಸಂಯೋಜಿಸಲಾಗಿದೆ. ಮನೆಯ ವಿನ್ಯಾಸದಲ್ಲಿ ಮರಿಯಾ ಗೊರೆಟ್ಟಿ ಅವರ ವೈಯಕ್ತಿಕ ಸ್ಪರ್ಶವೂ ಕಾಣಿಸುತ್ತದೆ.

ವಿಲ್ಲಾದ ಆವರಣದಲ್ಲಿ ಹಸಿರಿನಿಂದ ಕಂಗೊಳಿಸುವ ತೋಟ, ಹಳೆಯ ಮಾವಿನ ಮರ, ವಿಶಾಲ ವರಾಂಡಾಗಳು ಮತ್ತು ಹೊರಾಂಗಣ ವಿಶ್ರಾಂತಿ ಪ್ರದೇಶಗಳಿವೆ. ಆಧುನಿಕ ಸೌಲಭ್ಯಗಳ ಜೊತೆಗೆ ಪರಿಸರ ಸ್ನೇಹಿ ದೃಷ್ಟಿಯಿಂದ ಸೌರ ಫಲಕಗಳನ್ನೂ ಅಳವಡಿಸಲಾಗಿದೆ. ಪರಂಪರೆ ಮತ್ತು ಆಧುನಿಕ ಸೌಕರ್ಯಗಳ ಸಮತೋಲನವನ್ನು ಒದಗಿಸುವ ಈ ವಿಲ್ಲಾವನ್ನು ಈಗ ಪ್ರವಾಸಿಗರು ಹಾಲಿಡೇ ರೆಂಟಲ್ ರೂಪದಲ್ಲಿ ಬುಕ್ ಮಾಡಿಕೊಂಡು ಗೋವಾದ ವಿಶಿಷ್ಟ ಪರಂಪರೆಯ ಅನುಭವವನ್ನು ಪಡೆಯಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!