Tuesday, August 19, 2025
Tuesday, August 19, 2025

ಕೆಎಸ್‌ಟಿಡಿಸಿ ಸೇವೆಗಳ ಮೇಲೆ 10% ವಿಶೇಷ ರಿಯಾಯಿತಿ

ಕೆಎಸ್‌ಟಿಡಿಸಿ ಮಯೂರ ಹೋಟೆಲ್ ಗಳ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು Online ಮುಖಾಂತರ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಪ್ರತಿ ಬುಕ್ಕಿಂಗ್ ನಲ್ಲಿ ಶೇಕಡ 10ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕಳೆದ 55 ವರ್ಷಗಳಿಂದ ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಕ್ಕೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಆತಿಥ್ಯ ಸೇವೆಯನ್ನು ಒದಗಿಸುತ್ತಲೇ ಬಂದಿದೆ. ಸದ್ಯ 79 ನೇ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಕೆಎಸ್‌ಟಿಡಿಸಿ ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ.

ಕೆಎಸ್‌ಟಿಡಿಸಿ ಮಯೂರ ಹೋಟೆಲ್ ಗಳ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಲಭ್ಯವಾಗುವಂತೆ ಮಾಡಲು ದಿನಾಂಕ: 15.08.2025 ರಿಂದ 22.08.2025 ರವರೆಗೆ ಅಂದರೆ ಒಂದು ವಾರದ ಅವಧಿಯಲ್ಲಿ Online ಮುಖಾಂತರ ಬುಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಪ್ರತಿ ಬುಕ್ಕಿಂಗ್ ನಲ್ಲಿ ಶೇಕಡ 10ರಷ್ಟು ವಿಶೇಷ ರಿಯಾಯಿತಿ ನೀಡುತ್ತಿದೆ. ನಿಗಮದ ಹೋಟೆಲ್ ಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ನಿಗಮದ ಅಧಿಕೃತ ಜಾಲತಾಣ www.kstdc.co ರಲ್ಲಿ Promo Code "Independence79@KSTDC" ಅನ್ನು ಬಳಸುವ ಮೂಲಕ 10% ವಿಶೇಷ ರಿಯಾಯಿತಿಯನ್ನು ಪಡೆಯಬಹುದು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ