Thursday, January 15, 2026
Thursday, January 15, 2026

ಸಿಸ್ಸು ಕಣಿವೆ ಪ್ರವಾಸಕ್ಕೆ 40 ದಿನಗಳ ನಿಷೇಧ

ಹಿಮಾಚಲ ಪ್ರದೇಶದ ಬುಡಕಟ್ಟು ಲಾಹೌಲ್-ಸ್ಪಿಟಿ ಜಿಲ್ಲೆಯ ಸಿಸ್ಸು ಕಣಿವೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಜನವರಿ 20 ರಿಂದ ಫೆಬ್ರವರಿ 28 ರವರೆಗೆ 40 ದಿನಗಳವರೆಗೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಸ್ಥಳೀಯ ಸಾಂಪ್ರದಾಯಿಕ ಮತ್ತು ಧಾರ್ಮಿಕ ಆಚರಣೆಗಳು ಮತ್ತು ಪುರಾತನ ಪದ್ಧತಿಗಳನ್ನು ರಕ್ಷಿಸಲು ಸಿಸ್ಸು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಮುದಾಯಗಳು ಈ ನಿರ್ಧಾರ ತೆಗೆದುಕೊಂಡಿವೆ.

ಚಂದ್ರ ಕಣಿವೆಯಲ್ಲಿ ಈ ಸಿಸ್ಸು ಇದ್ದು, ಹಿಮದಿಂದಾಗಿ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಸಾಹಸ ಚಟುವಟಿಕೆಗಳಿಗೆ ಬರುತ್ತಾರೆ. ಆದರೆ ಚಳಿಗಾಲದಲ್ಲೂ ಈ ಚಟುವಟಿಕೆಗಳು ಮುಂದುವರೆದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಲೇ ಇವೆ. ಪ್ರವಾಸಿಗರ ಸಂಖ್ಯೆಯೂ ಹೆಚ್ಚಳ ಕಾಣುತ್ತಿದೆ. ಪ್ರವಾಸಿಗರ ದಟ್ಟಣೆಯಿಂದ ಈ ಅವಧಿಯಲ್ಲಿ ನಿಗದಿಪಡಿಸಲಾದ ಧಾರ್ಮಿಕ ಆಚರಣೆಗಳಿಗೆ ತೊಂದರೆಯಾಗಬಹುದು ಎಂದು ಸ್ಥಳೀಯ ಸಂಸ್ಥೆಗಳು ಜನವರಿ 20ರಿಂದ ಫೆಬ್ರವರಿ 28ರವರೆಗೆ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಸ್ಥಳೀಯರು ಪ್ರಕಾರ ಈ ನಿರ್ಧಾರ ಹೊಸದಲ್ಲ ಮತ್ತು ಸೂಕ್ಷ್ಮ ಧಾರ್ಮಿಕ ಚಟುವಟಿಕೆಗಳ ಅವಧಿಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ಸಾಮಾನ್ಯವಾಗಿ ಜಾರಿಗೊಳಿಸಲಾಗುತ್ತದೆ. ಈ ಕ್ರಮಕ್ಕೆ ರಾಜಾ ಘೇಪನ್ ಸಮಿತಿ, ದೇವಿ ಭೋಟಿ ಸಮಿತಿ, ಲಬರಾಂಗ್ ಗೊಂಪಾ ಸಮಿತಿ, ಜತೆಗೆ ಪಂಚಾಯತ್‌ನ ಮಹಿಳಾ ಮತ್ತು ಯುವಕ ಮಂಡಲಗಳು ಸರ್ವಾನುಮತದ ಬೆಂಬಲವನ್ನು ನೀಡಿವೆ.

sissu1

40 ದಿನಗಳ ಅವಧಿಯಲ್ಲಿ ಏನು ನಿಷೇಧಿಸಲಾಗಿದೆ

ಹೆಲಿಪ್ಯಾಡ್ ಸುತ್ತಮುತ್ತಲಿನ ಪ್ರದೇಶಗಳು ಸೇರಿ ಸಿಸ್ಸು ಪಂಚಾಯತ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳು ಪ್ರವಾಸಿಗರಿಗೆ ಮುಚ್ಚಲ್ಪಟ್ಟಿರುತ್ತವೆ. ಪಾಗಲ್ ನುಲ್ಲಾದಿಂದ ರೋಪ್ಸಾಂಗ್‌ವರೆಗಿನ ಸಂಪೂರ್ಣ ಪ್ರದೇಶ ನಿಷೇಧಕ್ಕೆ ಒಳಪಟ್ಟಿರುತ್ತದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದಿಲ್ಲ. ಆಲ್-ಟೆರೈನ್ ವೆಹಿಕಲ್ (ಎಟಿವಿ) ಸವಾರಿ, ಹಾಟ್ ಏರ್ ಬಲೂನಿಂಗ್, ಜಿಪ್-ಲೈನಿಂಗ್, ಸ್ಕೀಯಿಂಗ್, ಬಂಜಿ ಜಂಪಿಂಗ್ ಮತ್ತು ಟ್ಯೂಬ್ ಸ್ಲೈಡಿಂಗ್‌ನಂಥ ಚಟುವಟಿಕೆಗಳನ್ನು ಈ ಅವಧಿಯಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

sissu

ಈ ಕ್ರಮದ ಹಿಂದೆ ಹಬ್ಬಗಳು ಮತ್ತು 'ಡೆವಲಪ್‌ಮೆಂಟ್ ನಿರ್ಬಂಧಗಳು' ಇವೆ. ಈ ನಿರ್ಬಂಧಗಳು ಹಲ್ಡಾದಂಥ ಪ್ರಮುಖ ಸ್ಥಳೀಯ ಹಬ್ಬಗಳಿಗೆ ಸಂಬಂಧಿಸಿವೆ. ಈ ಹಬ್ಬಗಳು ಶಾಂತಿ, ಶಿಸ್ತು ಮತ್ತು ಆಧ್ಯಾತ್ಮಿಕ ಗಮನವನ್ನು ಬಯಸುತ್ತವೆ. ಈ ಸಮಯದಲ್ಲಿ ಪ್ರವಾಸಿಗರ ಚಲನೆ ಮತ್ತು ಮನರಂಜನಾ ಚಟುವಟಿಕೆಗಳು ಇದಕ್ಕೆ ಅಡ್ಡಿಯಾಗಬಹುದು ಎಂದು ಪಂಚಾಯತ್ ಭಾವಿಸಿದೆ. ಈ ಕುರಿತು ಪಂಚಾಯತ್‌, ಜಿಲ್ಲಾಡಳಿತಕ್ಕೆ ಔಪಚಾರಿಕವಾಗಿ ಮಾಹಿತಿ ನೀಡಿ, ಬೆಂಬಲವನ್ನು ಕೋರಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ