Sunday, March 29, 2026
Sunday, March 29, 2026

ವಿವಾಹ ಪ್ರವಾಸಕ್ಕೆ ಸಜ್ಜಾಗುತ್ತಿದೆ ಕೇರಳ ಟೂರಿಸಂ

ಕೇರಳ ಪ್ರವಾಸೋದ್ಯಮದಿಂದ ಸೆಪ್ಟೆಂಬರ್‌ನಲ್ಲಿ ಕೇರಳ ಟ್ರಾವೆಲ್ ಮಾರ್ಟ್ (ಕೆಟಿಎಂ) ಆಯೋಜನೆಯಾಗಲಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಬಿ2ಬಿ ಸಭೆ ಇದಾಗಿದ್ದು, ಈ ಬಾರಿಯ ಕೆಟಿಎಂ ಸೆಪ್ಟೆಂಬರ್ 24 ರಿಂದ 27ರವರೆಗೆ ಕೊಚ್ಚಿಯ ವಿಲ್ಲಿಂಗ್ಡನ್ ದ್ವೀಪದಲ್ಲಿ ನಡೆಯಲಿದೆ. 400ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲು ಯೋಜನೆ ಸಿದ್ಧವಾಗಿದೆ.

ವಿವಾಹ ಪ್ರವಾಸೋದ್ಯಮ ತಾಣವಾಗಿ ಕೇರಳವನ್ನು ರೂಪಿಸಬೇಕು ಎಂದು ಕೇರಳ ಪ್ರವಾಸೋದ್ಯಮ ಸಚಿವ ಪಿಎ ಮೊಹಮ್ಮದ್ ರಿಯಾಸ್ ಹೇಳಿದ್ದಾರೆ.

ಕೇರಳದ ಕೊಚ್ಚಿಯಲ್ಲಿ ಸೆಪ್ಟೆಂಬರ್‌ನಲ್ಲಿ ಕೇರಳ ಟ್ರಾವೆಲ್ ಮಾರ್ಟ್ (ಕೆಟಿಎಂ) ಆಯೋಜನೆಯಾಗಲಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಬಿ2ಬಿ ಸಭೆ ಇದಾಗಿದ್ದು, ಈ ಬಾರಿಯ ಕೆಟಿಎಂ ಸೆಪ್ಟೆಂಬರ್ 24 ರಿಂದ 27ರವರೆಗೆ ಕೊಚ್ಚಿಯ ವಿಲ್ಲಿಂಗ್ಡನ್ ದ್ವೀಪದಲ್ಲಿ ನಡೆಯಲಿದೆ. 400 ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲು ಯೋಜಿಸಲಾಗಿದೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮೊಹಮ್ಮದ್, ಈ ಬಾರಿಯ ಕೇರಳ ಟ್ರಾವೆಲ್‌ ಮಾರ್ಟ್‌ ಅನ್ನು ಕ್ಷೇಮ, ಮದುವೆ, ಅನುಭವ ಮತ್ತು MICE ಪ್ರವಾಸೋದ್ಯಮ ತಾಣವಾಗಿ ಪ್ರಚಾರ ನೀಡಲು ಬಳಸಲಾಗುವುದು ಎಂದು ಹೇಳಿದ್ದಾರೆ.

ಕೇರಳ, ವಿವಾಹ ಪ್ರವಾಸಕ್ಕೆ ಸಾಕಷ್ಟು ಜನರ ಆಯ್ಕೆಯಾಗುತ್ತಿದೆ. ಸಾಕಷ್ಟು ಜನರು ಹೊರ ರಾಜ್ಯಗಳಿಂದ ಕೇರಳಕ್ಕೆ ಇದೇ ಕಾರಣಕ್ಕೆ ಬರುತ್ತಿದ್ದಾರೆ. ಇಲ್ಲಿನ ಸೆಕ್ಯುಲರ್‌ ಜನ-ಮನ ಮತ್ತು ಸುಂದರ ವಾತಾವರಣ ಜನರಿಗೆ ಇಷ್ಟವಾಗಿದೆ. ಹಾಗಾಗಿ ಕೇರಳವನ್ನು ವಿವಾಹ ಪ್ರವಾಸದ ತಾಣವಾಗಿಸಬೇಕಿದೆ. ಇದನ್ನು MICE (ಮೀಟಿಂಗ್‌, ಇನ್‌ಸೆಂಟಿವ್‌, ಸಮಾರಂಭ ಮತ್ತು ಪ್ರದರ್ಶನಗಳು)ಗೂ ವಿಸ್ತರಿಸಲಾಗುವುದು. ಪ್ರವಾಸೋದ್ಯಮಕ್ಕೂ ಕೈಗಾರಿಕೆ ಸ್ಥಾನಮಾನ ನೀಡಲು ಈಗಾಗಲೇ ರಾಜ್ಯ ಸರಕಾರ ಅನುಮೋದನೆ ನೀಡಿದೆ. ಕೈಗಾರಿಕಾ ಇಲಾಖೆಯೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಸಚಿವ ಮೊಹಮ್ಮದ್ ಮಾಹಿತಿ ಹಂಚಿಕೊಂಡಿದ್ದಾರೆ.

ಕೆಟಿಎಂ ಅಧ್ಯಕ್ಷ ಜೋಸ್‌ ಪ್ರದೀಪ್‌ ಮಾತನಾಡಿ, ಮಾರ್ಟ್‌ನಲ್ಲಿ ಹೂಡಿಕೆದಾರರಿಗೆ ಇರುವ ಸೌಕರ್ಯಗಳು ಮತ್ತು ಒಟ್ಟು ಕೆಟಿಎಂ ಮಾಹಿತಿಯನ್ನು ಹಂಚಿಕೊಂಡರು. ಇದೇ ವೇಳೆ ನೂತನ ಪ್ರವಾಸೋದ್ಯಮದ ಅನುಕೂಲಕ್ಕಾಗಿ ಮದ್ಯನೀತಿಯಲ್ಲಿ ಉದಾರತೆ ತೋರುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ