Sunday, March 29, 2026
Sunday, March 29, 2026

ಮುಂಬಯಿನಲ್ಲಿ ಭಾರತದ ಮೊದಲ ಮ್ಯೂಸಿಕಲ್ ರಸ್ತೆಗೆ ಚಾಲನೆ

ವಿಶ್ವದ ಐದನೇ ಮ್ಯೂಸಿಕಲ್ ರಸ್ತೆ ಹಾಗೂ ಭಾರತದಲ್ಲಿ ನಿರ್ಮಿಸಲಾಗಿರುವ ಮೊದಲ ಮ್ಯೂಸಿಕಲ್ ರಸ್ತೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉದ್ಘಾಟನೆ ಮಾಡಿದ್ದಾರೆ. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ ಹೋಗುವ ಲೇನ್‌ನಲ್ಲಿ ಈ ವಿಶೇಷ ರಸ್ತೆಯನ್ನು ನಿರ್ಮಿಸಲಾಗಿದೆ.

ದೇಶದ ಮೊಟ್ಟ ಮೊದಲ ಮ್ಯೂಸಿಕ್ ರೋಡ್​ ಮುಂಬೈನಲ್ಲಿ ಆರಂಭವಾಗಿದೆ. ಛತ್ರಪತಿ ಶಿವಾಜಿ ಮಹರಾಜ್ ಕೋಸ್ಟಲ್ ರೋಡ್ ನಲ್ಲಿ ನಾರಿಮನ್ ಪಾಯಿಂಟ್ ನಿಂದ ವರ್ಲಿ ವರೆಗೂ 500 ಮೀಟರ್ ದೂರ ಪ್ರಯೋಗತ್ಮಾಕ ಮ್ಯೂಸಿಕ್ ರೋಡ್ ಅನ್ನು ಅಭಿವೃದ್ಧಿ ಮಾಡಲಾಗಿದೆ. ಹೆದ್ದಾರಿಯಲ್ಲಿ ವಾಹನಗಳು ಸಾಗುತ್ತಿರುವ ಸಂದರ್ಭದಲ್ಲಿ ಪ್ರಮುಖ ಸಂಗೀತ ನಿರ್ದೇಶಕ ಎಆರ್ ರಹಮಾನ್ ಸಂಹೋಯಜನೆ ಮಾಡಿದ್ದ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ‘ಜೈ ಹೋ’ ಹಾಡು ವಾಹನ ಒಳಗೆ ಪ್ರಯಾಣಿಸುತ್ತಿರುವ ಜನರಿಗೆ ಕೇಳಿಸುತ್ತದೆ.

musical road  1

ವಿಶೇಷವಾಗಿ ವಿನ್ಯಾಸಗೊಳಿಸಲಾದ ರಂಬಲ್ ಸ್ಟ್ರಿಪ್‌ಗಳಿಂದ ಮೇಲೇರಿ ಬೀಳುವ ಈ ರಸ್ತೆಯಲ್ಲಿ ವಾಹನಗಳು ಗಂಟೆಗೆ 60 ರಿಂದ 80 ಕಿ.ಮೀ ವೇಗದಲ್ಲಿ ಚಲಿಸುವಾಗ, ಟೈರ್‌ಗಳು ಮತ್ತು ರಸ್ತೆ ಮೇಲ್ಮೈ ನಡುವಿನ ಪರಸ್ಪರ ಕ್ರಿಯೆಯಿಂದ ಶಬ್ದ ಉಂಟಾಗುತ್ತದೆ. ಈ ಕಂಪನಗಳಿಂದ ಹೊರಹೊಮ್ಮುವ ಧ್ವನಿ ತರಂಗಗಳು 'ಜೈ ಹೋ' ಹಾಡಿನ ರಾಗವನ್ನು ಪುನರುತ್ಪಾದಿಸುತ್ತವೆ. ಬೃಹತ್ ಮುಂಬೈ ಪಾಲಿಕೆ ಈ ಹೆದ್ದಾರಿಯನ್ನ ನಿರ್ಮಾಣ ಮಾಡಿದ್ದು, ಈ ಯೋಜನೆಗೆ ಸುಮಾರು 6.21 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ಡಿಸಿಎಂ ಸಿಎಂ ಏಕನಾಥ್ ಶಿಂಧೆ ಅವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ಮ್ಯೂಸಿಕ್ ಹೆದ್ದಾರಿ ಹೊಂದಿರುವ ಜಪಾನ್, ಹಂಗೇರಿ, ದಕ್ಷಿಣ ಕೊರಿಯಾ, ಯುಎ ಸಾಲಿಗೆ ಭಾರತ ಸೇರ್ಪಡೆಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Next

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!