ಎಕ್ಸೆಲ್‌ ಪಿಯು ಕಾಲೇಜ್‌ ಹೆಸರಿಗೆ ತಕ್ಕಂತೆ ಶಿಕ್ಷಣ ಕ್ಷೇತ್ರದಲ್ಲಿ ಎಕ್ಸೆಲ್‌ ಆಗಿರುವ ಸಂಸ್ಥೆ ಗುರುವಾಯನಕೆರೆಯಲ್ಲಿರುವ ಎಕ್ಸೆಲ್‌ ಪಿಯು ಕಾಲೇಜ್‌. ಈ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲು ಇದರ ಮುಖ್ಯಸ್ಥರಾದ ಸುಮಂತ್‌ ಕುಮಾರ್‌ ಜೈನ್‌ ಅವರ ಕನಸು ಹಾಗೂ ದಕ್ಷತೆ ಕಾರಣ. ಅವರು ನಡೆದು ಬಂದ ಹಾದಿ ಹಾಗೂ ಸಂಸ್ಥೆಯ ವಿಕಾಸದ ಬಗ್ಗೆ ಸುಮಂತ್‌ ಕುಮಾರ್‌ ಪ್ರವಾಸಿ ಪ್ರಪಂಚದ ಜತೆಗೆ ಮಾತನಾಡಿದ್ದಾರೆ.

ಎಕ್ಸೆಲ್ ಶಿಕ್ಷಣ ಸಂಸ್ಥೆ ಶುರುವಾಗಿದ್ದು ಹೇಗೆ?

-ನಾನು ಕೂಡ ಒಬ್ಬ ಅಧ್ಯಾಪಕ. ಕೆಮಿಸ್ಟ್ರಿ ವಿಷಯದಲ್ಲಿ ನೀಟ್‌ ಮತ್ತು ಜಿಇಇಒ ಟ್ರೇನರ್‌ ಆಗಿದ್ದವನು. ಕರ್ನಾಟಕದಾದ್ಯಂತ ಕೋಚಿಂಗ್‌ ನೀಡುತ್ತಿದ್ದೆ. ಬಳಿಕ ಮೂಡುಬಿದಿರೆಯಲ್ಲಿ ನಾಲ್ಕು ವಿದ್ಯಾರ್ಥಿಗಳಿಂದ ಕೋಚಿಂಗ್‌ ಸೆಂಟರ್‌ ಶುರುಮಾಡಲಾಯಿತು. ನಾಲ್ಕು ವಿದ್ಯಾರ್ಥಿಗಳಿಂದ ಶುರುವಾದ ಕೋಚಿಂಗ್‌ ಸೆಂಟರ್‌ 400ಕ್ಕೆ ಏರಿತು. ಬಳಿಕ 2019ರಲ್ಲಿ ಪಿಯು ಕಾಲೇಜ್‌ ಶುರು ಮಾಡಬೇಕು ಎಂದು ನಿರ್ಧಾರ ಮಾಡಲಾಯಿತು. ಆಗ 250 ವಿದ್ಯಾರ್ಥಿಗಳಿಂದ ಶುರುವಾದ ವಿದ್ಯಾಸಂಸ್ಥೆ ಈಗ 5000ಕ್ಕೂ ಹೆಚ್ಚಿನ ಮಕ್ಕಳಿಗೆ ಶೀಕ್ಷಣ ನೀಡುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಈ ಕಾಲೇಜು ಶುರು ಮಾಡಿದ್ದೇವೆ. ಅದೇ ರೀತಿ ಈಗ ಮಕ್ಕಳು ಕೂಡ ದೊಡ್ಡ ಸಾಧನೆ ಮಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 590ಕ್ಕೂ ಹೆಚ್ಚು ಅಂಕ ಪಡೆದ ಅತಿ ಹೆಚ್ಚು ಮಕ್ಕಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಒಟ್ಟು 52 ಮಕ್ಕಳು 590ಕ್ಕೂ ಅಧಿಕ ಅಂಕ ಪಡೆದ ಐತಿಹಾಸಕ ದಾಖಲೆ ಬರೆದಿದ್ದಾರೆ.‌

ಇದನ್ನೂ ಓದಿ: ವಿದ್ಯಾರ್ಥಿಗಳ ಭವಿಷ್ಯ ಬಂಗಾರವಾಗಿಸುತ್ತಿರುವ ವಿದ್ಯಾಸಂಸ್ಥೆ!

ಇಂಥ ಗ್ರಾಮೀಣ ಪ್ರದೇಶದಲ್ಲಿ ಹೀಗೊಂದು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡಬೇಕು ಅನಿಸಿದ್ದೇಕೆ? ಶಿಕ್ಷಣದ ಬಗ್ಗೆ ನಿಮ್ಮ ದೃಷ್ಟಿಕೋನ ಏನು?

-ನಾನು ಕೂಡ ಇದೇ ಬೆಳ್ತಂಗಡಿ ಗ್ರಾಮದವನು. ನಮ್ಮದು ಗ್ರಾಮೀಣ ಪ್ರದೇಶ. ಇಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಉತ್ತಮ ತರಬೇತಿಯ ಅಗತ್ಯವಿದೆ. ಬೋರ್ಡ್‌ ಎಕ್ಸಾಂಗಳಿಗೆ ಶಿಕ್ಷಣ ನೀಡುವ ಸಂಸ್ಥೆಗಳು ಸಾಕಷ್ಟು ಸಿಗುತ್ತವೆ. ಆದರೆ, ಬೋರ್ಡ್‌ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಮಕ್ಕಳನ್ನು ತರಬೇತಿ ನೀಡುವ ಉತ್ತಮ ಸಂಸ್ಥೆಯ ಅಗತ್ಯವಿತ್ತು. ಪೋಷಕರು ಕೂಡ ಒತ್ತಾಯ ಮಾಡಲು ಶುರು ಮಾಡಿದ ಕಾರಣಕ್ಕೆ ಕಾಲೇಜು ಶುರು ಮಾಡಿದೆವು. ಶಿಕ್ಷಣ ಎಂದರೆ ಕೇವಲ ಪಾಠ ಮಾಡುವುದಷ್ಟೇ ಅಲ್ಲ. ಶಿಕ್ಷಣ ಎಂದರೆ ಮಕ್ಕಳಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದು. ಒಬ್ಬ ಡಾಕ್ಟರ್‌ ಅಥವಾ ಎಂಜಿನಿಯರ್‌ ಆದರೆ ಮಾತ್ರ ಸಾಲುವುದಿಲ್ಲ. ಜೀವನಕ್ಕೆ ಬೇಕಾದ ವಿಷಯಗಳನ್ನು ಈ ಎರಡು ವರ್ಷಗಳ ಶಿಕ್ಷಣದಲ್ಲಿ ಕಲಿಯಬೇಕಾಗುತ್ತದೆ. ನನ್ನ ಅಜ್ಜನ ಕಾಲದಲ್ಲಿ ಶ್ರೀಮಂತ ಯಾರು ಎಂದು ಕೇಳಿದರೆ ಅತಿ ಹೆಚ್ಚು ಜಾಗ ಹೊಂದಿರುವವರು ಎನ್ನುತ್ತಿದ್ದರು. ನನ್ನ ಅಪ್ಪನ ಕಾಲದಲ್ಲಿ ಯಾರು ಶ್ರೀಮಂತ ಎಂದರೆ ಅತಿ ಹೆಚ್ಚು ಹಣ ಇರುವವರು ಎನ್ನುತ್ತಿದ್ದರು. ಆದರೆ, ನಾನು ಕಂಡುಕೊಂಡ ಸತ್ಯ ಏನೆಂದರೆ ಈಗ ಯಾರು ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವ, ಯಾವುದೇ ದುರಭ್ಯಾಸಗಳಿರದ ಮಕ್ಕಳನ್ನು ಹೊಂದಿರುತ್ತಾರೋ ಆ ಪೋಷಕರು ನಿಜವಾದ ಶ್ರೀಮಂತರು. ಅದಕ್ಕಾಗಿ ಎಕ್ಸೆಲ್‌ ಸಂಸ್ಥೆ ಮಕ್ಕಳಿಗೆ ಪಾಠ ಮಾಡುವ ಜತೆಗೆ ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ಮಕ್ಕಳು ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಪೋಷಕರಿಗೆ ದೊಡ್ಡ ಆಸ್ತಿಯಾಗಬೇಕು ಎನ್ನುವುದು ನಮ್ಮ ಶಿಕ್ಷಣದ ಉದ್ದೇಶ.

Untitled design - 2026-04-24T194256.087

ಎಕ್ಸೆಲ್‌ ಶಿಕ್ಷಣ ಸಂಸ್ಥೆ ಇತರ ಪಿಯು ಕಾಲೇಜುಗಳಿಂದ ವಿಭಿನ್ನ ಹೇಗೆ? ನಿಮ್ಮ ಕಾಲೇಜಿನ ಶಿಕ್ಷಣ ಶೈಲಿ ಮತ್ತು ವ್ಯವಸ್ಥೆ ಬಗ್ಗೆ ಹೇಳುವಿರಾ?

- ಈ ಕಾಲೇಜನ್ನು ಮಧ್ಯಮವರ್ಗ ಹಾಗೂ ಬಡ ಕುಟುಂಬದವರನ್ನು ಗಮನದಲ್ಲಿಟ್ಟುಕೊಂಡು ಶುರು ಮಾಡಿದ್ದು. ನಮ್ಮ ಸಂಸ್ಥೆ ಪ್ರತಿಭಾನ್ವಿತ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತೇವೆ. ವರ್ಷಕ್ಕೆ ಸುಮಾರು 500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತೇವೆ. ಬೇರೆ ಕಾಲೇಜಿಗೆ ಹೋಲಿಸಿದರೆ ನಮ್ಮಲ್ಲಿ ಒಂದು ಉತ್ತಮ ಸಿಸ್ಟಮ್‌ ಇದೆ. ಬಹಳ ಅಚ್ಚುಕಟ್ಟಾದ, ಶಿಸ್ತುಬದ್ಧವಾದ ವ್ಯವಸ್ಥೆ ಇದು. ಎಲ್ಲರೂ ತಮ್ಮ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಉತ್ತಮ ಶಿಕ್ಷಕರ ಜತೆಗೆ ಸಿಸ್ಟಮ್‌ ಕೂಡ ಮುಖ್ಯವಾಗುತ್ತದೆ. ಮಕ್ಕಳ ದಿನಚರಿ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11:30ರವರೆಗೂ ಈ ಶಿಸ್ತುಬದ್ಧ ವ್ಯವಸ್ಥೆಯೊಳಗೆ ವಿದ್ಯಾಭ್ಯಾಸ ಮಾಡಿಸಲಾಗುತ್ತದೆ. ಬೆಳಗ್ಗೆ ಬೇಗ ಎದ್ದು ಫ್ರೆಶ್‌ ಮೈಂಡ್‌ ಅಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿದಾಗ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಂಜೆ ತರಗತಿಗಳು ಮುಗಿದ ಮೇಲೆ ಇಲ್ಲಿನ ಶಿಕ್ಷಕರು ರಾತ್ರಿ 8:30 ಗಂಟೆವರೆಗೆ ಮಕ್ಕಳ ಜತೆಗೆ ಸಮಯ ಕಳೆಯುತ್ತಾರೆ. ಈ ಸಮಯದಲ್ಲಿ ಮಕ್ಕಳಿಗೆ ಯಾವ ವಿಷಯದಲ್ಲಿ ಏನೇ ಗೊಂದಲಗಳಿದ್ದರೂ ಅದನ್ನು ಬಗೆಹರಿಸುತ್ತಾರೆ. ಪ್ರತಿ ಭಾನುವಾರ ಪರೀಕ್ಷೆ ಮಾಡಲಾಗುತ್ತದೆ. ಸಿಲಬಸ್‌ ಕೂಡ ಬೇಗ ಮುಗಿಸಿ ಎರಡು ಬಾರಿ ಪುನರಾವರ್ತನಗೆ ಅವಕಾಶ ಇಡಲಾಗಿದೆ. ಇಲ್ಲಿ ದಿನಕ್ಕೆ ನಾಲ್ಕು ಬಾರಿ ಪೌಷ್ಟಿಕ ಆಹಾರಗಳನ್ನು ನೀಡಲಾಗುತ್ತದೆ. ಲ್ಯಾಬ್‌ ಹಾಗೂ ಕ್ಲಾಸ್‌ಗಳಲ್ಲಿ ಸುಸಜ್ಜಿತ ವ್ಯವಸ್ಥೆಗಳಿವೆ. ತಂತ್ರಜ್ಞಾನದ ಬಳಕೆ ಕೂಡ ಇಲ್ಲಿ ಸಮರ್ಪಕವಾಗಿ ಮಾಡಲಾಗುತ್ತದೆ.

ಶಿಕ್ಷಣ ಪದ್ಧತಿ ಕಾಲಕಾಲಕ್ಕೆ ಬದಲಾಗುತ್ತಿದೆ. ಈ ನಿಟ್ಟಿನಲ್ಲಿ ಎಕ್ಸೆಲ್‌ ಹೇಗೆ ಅಪ್ಡೇಟ್‌ ಆಗುತ್ತಿದೆ?

-ಎಕ್ಸೆಲ್‌ ಎಂದರೆ ಉತ್ಕೃಷ್ಟ ಎಂದರ್ಥ. ಉನ್ನತವಾದದ್ದನ್ನು ನೀಡುವುದೆ ನಮ್ಮ ಉದ್ದೇಶ. ಅದಕ್ಕಾಗಿ ನಿತ್ಯವೂ ಅಪ್ಡೇಟ್‌ ಆಗುತ್ತಲೇ ಇರಬೇಕಾಗುತ್ತದೆ. ಈಗ ಹೇಗೆ ಡಿಜಿಟಲ್‌ ವ್ಯವಸ್ಥೆ ಮೂಲಕ ಶಿಕ್ಷಣ ನೀಡಲಾಗುತ್ತಿದೆಯೋ ಹಾಗೇ ಮುಂದೆಯೂ ಹೊಸ ತಂತ್ರಜ್ಞಾನ ಬಂದರೆ ಅದನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಎಐ ಎನ್ನುವಂಥದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಅದನ್ನು ಸರಿಯಾಗಿ ಬಳಸುವುದು ಕೂಡ ಈಗ ಸ್ಕಿಲ್. ಅದಕ್ಕಾಗಿ ಇಲ್ಲಿನ ಮಕ್ಕಳಿಗೆ ಅದಕ್ಕೆ ಬೇಕಾದ ತರಬೇತಿ ಕೂಡ ನೀಡಲಾಗುತ್ತಿದೆ. ಪ್ರತ್ಯೇಕ ತರಗತಿಯನ್ನೇ ಮೀಸಲಿಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕಂಪ್ಯೂಟರ್‌ ಆಧಾರಿತ ಪರೀಕ್ಷೆಗಳಾಗುತ್ತವೆ. ಅದಕ್ಕಾಗಿ ಈಗಲೇ ಮಕ್ಕಳಿಗೆ ಟ್ಯಾಬ್‌ ಕೊಟ್ಟು, ಅದರ ಮೂಲಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇವೆ. ಯಾವುದೇ ಶಿಕ್ಷಣ ಸಂಸ್ಥೆಗಾದರೂ ಸತತವಾಗಿ ಉತ್ತಮ ಫಲಿತಾಂಶ ನೀಡುವುದು ಸವಾಲಿನ ಕೆಲಸ. ಕಾಲಕಾಲಕ್ಕೆ ಹೊಸ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ ಯಾವತ್ತೂ ನಿಂತ ನೀರಾಗಬಾರದು. ಹೊಸ ರೋಗ ಬಂದಾಗ ಹೊಸ ಔಷಧ ಕಂಡುಹಿಡಿಯುವುದು ವೈದ್ಯರ ಕೆಲಸ. ಹಾಗೆಯೇ ಶಿಕ್ಷಣದಲ್ಲೂ ಅಷ್ಟೇ, ಕಾಲಕ್ಕೆ ತಕ್ಕಂತೆ ಹೊಸತನ್ನು ನೀಡಬೇಕು. ಈಗಿನ ಮಕ್ಕಳು ಮೊಬೈಲ್‌ ನೋಡಿಕೊಂಡೆ ಬೆಳೆದವರು, ಅವರು ಹೆಚ್ಚು ಬುದ್ಧಿವಂತರೂ ಆಗಿರುತ್ತಾರೆ. ಅವರಿಗೆ ಪಾಠ ಮಾಡುವ ಬೋಧಕರು ಕೂಡ ಅಪ್ಡೇಟ್‌ ಆಗಿರಬೇಕು.

ಎಕ್ಸೆಲ್‌ ಸತತವಾಗಿ ಉತ್ತಮ ರಿಸಲ್ಟ್‌ ನೀಡುತ್ತಿದೆ. ಇದರ ಹಿಂದಿನ ಸೀಕ್ರೇಟ್‌ ಏನು?

- 2019ರಿಂದ ಕೂಡ ಎಕ್ಸೆಲ್‌ ಅತ್ಯುತ್ತಮ ರಿಸಲ್ಟ್‌ ನೀಡಿದೆ. ಕಳೆದ ವರ್ಷ 10-12 ವಿದ್ಯಾರ್ಥಿಗಳು ಐಐಟಿ ಮತ್ತು ಐಐಎಂಗೆ ಅವಕಾಶ ಪಡೆದಿದ್ದಾರೆ. 5 ವಿದ್ಯಾರ್ಥಿಗಳೂ ಏಮ್ಸ್‌ ಕ್ಲಿಯರ್‌ ಮಾಡಿದ್ದಾರೆ. 400ರಲ್ಲಿ 250 ವಿದ್ಯಾರ್ಥಿಗಳಿಗೆ ಸರಕಾರಿ ಸೀಟ್‌ ಸಿಕ್ಕಿದೆ. ಟಾಪ್‌ ಟೆನ್‌ ರ್ಯಾಂಕಿಂಗ್‌ ಅಲ್ಲಿ 50 ಜನ ನಮ್ಮ ವಿದ್ಯಾರ್ಥಿಗಳಿದ್ದಾರೆ. ಇಂಥ ಸಾಧನೆಗೆ ನಮ್ಮ ಪ್ರಾಧ್ಯಾಪಕರ ಜತೆಗೆ ನಮ್ಮಲ್ಲಿರುವ ವ್ಯವಸ್ಥೆ ಕೂಡ ಕಾರಣ. ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ವಾರ್ಡನ್‌ ಇರುತ್ತಾರೆ. ಯಾವುದೇ ರೀತಿಯ ಸಮಸ್ಯೆ ಆದರೂ ಅದನ್ನು ಬಗೆಹರಿಸುತ್ತಾರೆ. ಮಕ್ಕಳಿಗೆ ಅನಾರೋಗ್ಯ ಕಾಡಿದರೆ ಕೂಡಲೇ ವೈದ್ಯರು ಬರುತ್ತಾರೆ. ಪೂರ್ತಿ ಗುಣವಾಗುವವರೆಗೂ ಅವರ ಆರೈಕೆ ಮಾಡಲಾಗುತ್ತದೆ. ಹಾಗೆಯೇ ಇಲ್ಲಿಯ ಮಕ್ಕಳನ್ನು ಕ್ಯಾಂಪಸ್‌ ಇಂದ ಹೊರಗೆ ಕಳುಹಿಸುವುದಿಲ್ಲ. ಪೋಷಕರು ಬಂದರೆ ಮಾತ್ರ ಬೆಳಗ್ಗೆಯಿಂದ ಸಂಜೆಯವರೆಗೆ ಔಟಿಂಗ್‌ ಅಂತ ಹೋಗಿಬರಬಹುದು. ವರ್ಷದಲ್ಲಿ ಎರಡು ಬಾರಿ ವೆಕೇಶನ್‌ ನೀಡಲಾಗುತ್ತದೆ. ಇಲ್ಲಿ ಯಾರಿಗೂ ಫೋನ್‌ ನೀಡುವುದಿಲ್ಲ ಆದರೂ ಯಾರಿಗೂ ಒಂಟಿತನ ಕಾಡದಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ತಿಂಗಳಿಗೊಮ್ಮೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ, ಕ್ರೀಡೆಗಳಿರುತ್ತವೆ.

ಎಕ್ಸೆಲ್‌ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಹೇಳಬಹುದೆ?

-ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಖಂಡಿತವಾಗಿಯೂ ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಎಕ್ಸೆಲ್ ದೊಡ್ಡ ಹೆಜ್ಜೆ ಗುರುತನ್ನು ಉಳಿಸಲಿದೆ. ಈಗಾಗಲೇ ಕರ್ನಾಟಕದಲ್ಲಿ ಅತಿ ಹೆಚ್ಚು ರ್ಯಾಂಕ್‌ ಪಡೆದ ಹೆಗ್ಗಳಿಕೆ ನಮ್ಮ ಸಂಸ್ಥೆಯದ್ದು. ವೈದ್ಯಕೀಯಕ್ಕೆ ಹೋದ ವಿದ್ಯಾರ್ಥಿಗಳ ಸಂಖ್ಯೆ ತೆಗೆದು ನೋಡಿದರೆ ನಮ್ಮ ಸಂಸ್ಥೆಯಿಂದ ಹೆಚ್ಚು ಜನ ಹೋಗಿದ್ದಾರೆ. ಎಕ್ಸೆಲ್‌ ಟೆಕ್ನೋ ಸ್ಕೂಲ್‌ ಎನ್ನುವಂಥದ್ದನ್ನು ಶುರು ಮಾಡಿದ್ದೇವೆ. ಇದರಲ್ಲಿ ಒಬ್ಬ ವಿದ್ಯಾರ್ಥಿಗೆ ಆರನೇ ತರಗತಿಯಿಂದಲೇ ಜಿಇಇ, ನೀಟ್‌ ಫೌಂಡೇಷನ್‌ ನೀಡುವ ಕೆಲಸ ಮಾಡುತ್ತಿದ್ದೇವೆ. ಇದರ ಜತೆಗೆ ಕರಾಟೆ, ಯಕ್ಷಗಾನ, ಕ್ರೀಡೆ ಹೀಗೆ ಸರ್ವಾಂಗೀನ ಅಂದರೆ 360 ಡಿಗ್ರಿ ತರಬೇತಿಯನ್ನು ನೀಡಲಿದ್ದೇವೆ.

Untitled design - 2026-04-24T204744.493

ನೀವು ನಡೆದ ಬಂದ ಹೇಗಿತ್ತು?

-ಬಡ ಕುಟುಂಬದಿಂದ ಬಂದವನು. ಅಜ್ಜನ ಕಾಲದಲ್ಲಿ ಜಾಗಗಳಿತ್ತು. ಅದರೆ, ಕ್ರಮೇಣ ಎಲ್ಲವನ್ನೂ ಕಳೆದುಕೊಂಡೆವು. ನಾನು ಹುಟ್ಟುವಾಗ ಗುಡಿಸಲಿನಲ್ಲಿದ್ದೆವು. ಎಂಟನೆಯ ತರಗತಿಯಿಂದ ಪಿಯುಸಿಯವರೆಗೆ ಪೂಜ್ಯ ಖಾವಂದರ ರತ್ನಮಾನಸ ಮತ್ತು ಸಿದ್ಧವನ ಗುರುಕಲದಲ್ಲಿ ಓದಿದವನು. ಅಲ್ಲಿ ಕೊಟ್ಟಿಗೆ ಕೆಲಸ ಮಾಡಿ, ತೋಟದ ಕೆಲಸ ಮಾಡಿ ಗಂಜಿ ತಿಂದು ವಿದ್ಯಾಭ್ಯಾಸ ಪಡೆದವನು. ಅದು ನನ್ನ ಜೀವನವನ್ನು ಈ ಹಂತಕ್ಕೆ ತಂದಿದೆ. ಆ ಕ್ಷಣಕ್ಕೆ ಅದು ಕಷ್ಟ ಅಂತ ಅನಿಸುತ್ತಿತ್ತು. ಯಾವಾಗ ಇದು ಮುಗಿಯುತ್ತದೆ ಅನಿಸುತ್ತಿತ್ತು. ಆದರೆ ಈಗ ಅರಿವಾದ ಸತ್ಯ ಏನೆಂದರೆ ವಿದ್ಯಾಭ್ಯಾಸಕ್ಕಾಗಿ ಪಟ್ಟ ಕಷ್ಟ ಏನೇ ಇದ್ದರೂ ಅದು ಸಿಹಿಯಾದ ಫಲವನ್ನೇ ನೀಡುತ್ತದೆ. ಓದುವ ಸಂದರ್ಭದಲ್ಲಿ ಕಷ್ಟ ಪಟ್ಟಿದ್ದಕ್ಕೆ ಈಗ ಇಲ್ಲಿಯವರೆಗೆ ಬಂದಿದ್ದೇನೆ. ಬಳಿಕ ಮೋಹನ್‌ ಆಳ್ವ ಅವರ ಆಶೀರ್ವಾದದಿಂದ ಆಳ್ವಾಸ್‌ ಅಲ್ಲಿ ಲೆಕ್ಚರರ್‌ ಆಗಿ ಸೇರಿದೆ. ಅಲ್ಲಿಂದ ಶುರುವಾದ ಪಯಣ ಈಗ ಈ ಮಟ್ಟಕ್ಕೆ ಬಂದಿದೆ.

ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಏನು ಸಂದೇಶ ನೀಡುತ್ತೀರಿ?

-ಓದುವ ಸಂದರ್ಭದಲ್ಲಿ ಕಷ್ಟವಾದರೂ ಸರಿ, ಓದಬೇಕು. ಓದುವುದೇ ಕಷ್ಟದ ಕೆಲಸ ಎಂದಾಗಬಾರದು. ಪೋಷಕರು ಕೂಡ ಮಕ್ಕಳಿಗೆ ಅದನ್ನು ಅರ್ಥಮಾಡಿಸಬೇಕು. ಈಗಿನ ಕಾಲದಲ್ಲಿ ಅದರಲ್ಲೂ ಪಿಯುಸಿ ಸಮಯದಲ್ಲಿ ವಿದ್ಯಾರ್ಥಿಗಳ ಗಮನ ಆಚೀಚೆ ಹೋಗದಂತೆ ನೋಡಿಕೊಳ್ಳಬೇಕು. ಇನ್ನು, ಎಂಜಿನಿಯರಿಂಗ್‌ ಅಥವಾ ಮೆಡಿಕಲ್‌ ಅಲ್ಲಿ ಸರಕಾರಿ ಸೀಟ್‌ ಸಿಗಬೇಕು ಎಂದುಕೊಂಡವರಿಗೆ ಎಕ್ಸೆಲ್‌ ಬೆಸ್ಟ್‌ ಆಯ್ಕೆ. ಏಕೆಂದರೆ ಇಲ್ಲಿರುವ ಪ್ರತಿ ವಿದ್ಯಾರ್ಥಿ ಮೇಲೆ ಗಮನ ನೀಡುವ ವ್ಯವಸ್ಥೆ ಎಲ್ಲೂ ಸಿಗುವುದಿಲ್ಲ. ಎರಡು ವರ್ಷ ತಪಸ್ಸಿನಂತೆ ಇರುತ್ತದೆ.

ಹತ್ತನೆಯ ತರಗತಿಯಲ್ಲಿ 94% ಅಂಕ ಗಳಿಸಿದ್ದೆ. ಆದರೆ, ಪಿಯುಸಿ ಫಸ್ಟ್‌ ಇಯರ್‌ ಅಲ್ಲಿ 98% ಗಳಿಸಿದ್ದೇನೆ. ಕಾಲೇಜಿನ ಎಲ್ಲ ಟೀಚರ್ಸ್‌ ಹಾಗೂ ವಾರ್ಡನ್‌ ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ಯಾವುದೇ ರೀತಿಯ ನೋಟ್ಸ್‌ ಅಥವಾ ರೆಫರೆನ್ಸ್‌ ಪುಸ್ತಕ ಕೇಳಿದರೂ ಕೂಡಲೇ ವ್ಯವಸ್ಥೆ ಮಾಡಲಾಗುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಗಟ್ಟಿಯಾಗಲು ಹಾಸ್ಟೇಲ್‌ ಟೀಚರ್ಸ್‌ ಸಹಾಯ ಮಾಡುತ್ತಾರೆ. ವಾರದ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ ಯಾಕೆ ಕಡಿಮೆ ಬಂತೆಂದು ಕಾಳಜಿ ವಹಿಸಿ ಮತ್ತೆ ಮಾರ್ಗದರ್ಶನ ಮಾಡುತ್ತಾರೆ. ಇಲ್ಲಿರುವ ಎಲ್ಲ ವ್ಯವಸ್ಥೆಯೂ ಶಿಸ್ತುಬದ್ಧವಾಗಿದೆ.

- ತನಯ್‌ ಜೋಶಿ, ವಿದ್ಯಾರ್ಥಿ