Tuesday, April 28, 2026
Tuesday, April 28, 2026

ನನ್ನದು ಪವಾಡ ತುಂಬಿದ ಪ್ರವಾಸಿ ಬದುಕು - ಮಮತಾ ರಾಹುತ್

ನನ್ನ ಮದುವೆಗೂ ಮೊದಲು ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ಜತೆ ಮನಾಲಿಗೆ ಹೋಗಿದ್ದೆವು. ಸೈನಸ್‌ ಇರುವಂಥ ಹುಡುಗಿ ನಾನು. ಚಳಿ ತಡೆದುಕೊಳ್ಳೋಕೆ ಆಗಲ್ಲ. ಅದರಲ್ಲೂ ಮನಾಲಿಯ ಪೀಕ್‌ ಗೆ ಹೋಗಿದ್ದು ಮರೆಯಲಾಗದ ಅನುಭವ. ಎಲ್ಲಿ ನೋಡಿದರೂ ಅಲ್ಲಿ ಮಂಜು. ಆದರೆ ಅದನ್ನು ತುಂಬಾ ಎಂಜಾಯ್ ಮಾಡಿದ್ದೇವೆ.

  • ಶಶಿಕರ ಪಾತೂರು

ಮಮತಾ ರಾಹುತ್‌ ನಟಿಯಾಗಿ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾಗಳಲ್ಲೂ ಬಣ್ಣ ಹಚ್ಚಿದವರು. ಪ್ರವಾಸ ಮತ್ತು ತಮ್ಮ ಖಾಸಗಿ ಬದುಕಿಗೆ ಅವಿನಾಭಾವ ಸಂಬಂಧ ಇದೆ ಎಂದು ಇಲ್ಲಿ ಹೇಳಿಕೊಂಡಿದ್ದಾರೆ.

ನಿಮ್ಮ ಬದುಕಿನಲ್ಲಿ ಪ್ರವಾಸದ ಸ್ಥಾನವೇನು?

ತುಂಬಾ ಪ್ರಾಮುಖ್ಯವಾಗಿರುವಂಥದ್ದು ನಮ್ಮ ಅಪ್ಪ ಆಂಧ್ರದಲ್ಲಿದ್ದವರು. ಅಮ್ಮ ಚಿತ್ರದುರ್ಗದಲ್ಲಿದ್ದವರು. ಅವರ ಮದುವೆ ಆಗಿ ಕೆಲವು ವರ್ಷಗಳ ನಂತರ ಬೆಂಗಳೂರಿಗೆ ಬಂದರು. ನನ್ನ ಮುತ್ತಾತ ಮಹಾರಾಷ್ಟ್ರದವರು. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಮದುವೆಯಾಗಿರುವುದು ದಕ್ಷಿಣ ಕನ್ನಡದ ಹುಡುಗನನ್ನು. ಹೀಗೆ ನನ್ನ ಕುಟುಂಬದವರನ್ನು ಭೇಟಿಯಾಗಲು ಹೊರಟರೆ ಅದೇ ಒಂದು ಪ್ರವಾಸವಾದೀತು!

ಇದನ್ನೂ ಓದಿ: ಫಿಲ್ಟರ್‌ ಕಾಫಿ ಸಿಗದೆ ಮಾಲ್ಡೀವ್ಸ್‌ನಲ್ಲಿ ಪರದಾಟ..

ದೇಶ ಸುತ್ತೋದು ಭಾಷೆ ಕಲಿಯೋದು ನಿಮಗೆ ಹುಟ್ಟಿನಿಂದಲೇ ಬಂದ ಹಾಗಿದೆ?

ಹೌದು. ಮರಾಠಿ, ಕನ್ನಡ, ಇಂಗ್ಲೀಷ್‌, ಹಿಂದಿ ಬಲ್ಲೆ. ದಶಕದ ಹಿಂದೆ ತುಳು ಸಿನಿಮಾಗಾಗಿ ತುಳು ಕಲಿತೆ. ಆದರೆ ಆ ಸಿನಿಮಾ ಪ್ರಾಜೆಕ್ಟ್‌ ನಾನು ಮಾಡಿಲ್ಲ. ಆದರೆ ಕಲಿತ ಭಾಷೆ ಗಂಡನ ಮನೆಯಲ್ಲಿ ವ್ಯವಹರಿಸಲು ತುಂಬಾ ಸಹಾಯವಾಯಿತು. ಅದೇ ರೀತಿ ಮಂಗಳೂರಿನ ಖಾದ್ಯ, ಕೋರಿ ರೊಟ್ಟಿ ಎಲ್ಲವೂ ಇಷ್ಟ. ಅದೇ ರೀತಿ ದಕ್ಷಿಣ ಕನ್ನಡದ ದೇವಸ್ಥಾನಗಳು ಕೂಡ ನನಗೆ ಇಷ್ಟ.

ನೀವು ಸಂದರ್ಶಿಸುವ ಪುಣ್ಯ ಕ್ಷೇತ್ರಗಳು ಯಾವುವು?

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಹೊರನಾಡು, ಶೃಂಗೇರಿ.. ಹೀಗೆ ಸಾಕಷ್ಟು ದೇವಾಲಯಗಳಿಗೆ ಹೋಗಿದ್ದೇನೆ. ಮದುವೆಗೆ ಮೊದಲು ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಹೋಗಿದ್ದೇನೆ. ನಮ್ಮ ಹಾಗು ಪಕ್ಕದ ಮನೆಯ ಕುಟುಂಬದವರು ಸೇರಿ ಹೋಗಿದ್ದೆವು. ಆಗ ಎದುರು ಮನೆ ಹುಡುಗ ಸುರೇಶ್ ಸ್ನೇಹಿತರಸ್ಟೇ ಆಗಿದ್ದರು. ಆದರೆ ಅವರ ಜತೆಗೆ ನಿಂತಿದ್ದ ನನಗೆ ಅಲ್ಲಿನ ಅರ್ಚಕರು ದೀರ್ಘಸುಮಂಗಲೀ ಭವ ಅಂತ ಆಶೀರ್ವಾದ ಮಾಡಿದ್ರು! ಇದು ಶಿವನ ಸೂಚನೆ ಅಂತನಿಸಿ ಮನೆಯವರೆಲ್ಲರ ಜತೆ ಮಾತುಕತೆ ನಡೆಸಿ ನಾವು ವಿವಾಹಿತರಾದೆವು.

Untitled design (3)

ಬೇರೆ ಯಾವ ದೇವಾಲಯಗಳಲ್ಲಿ ನಿಮಗೆ ಇಂಥ ಪವಾಡದ ಅನುಭವಗಳಾಗಿವೆ?

ಬೆಂಗಳೂರಿನಲ್ಲಿ ಇರುವಂಥ ಓಂ ಶಕ್ತಿ ತಾಯಿ ದೇವಸ್ಥಾನ ನನಗೆ ಯಾಕೆ ಕನಸಿನಲ್ಲಿ ಬರ್ತಾ ಇತ್ತು ಅನ್ನೋದು ಗೊತ್ತಿರಲಿಲ್ಲ. ಬಸವೇಶ್ವರ ನಗರ ಥಿಯೇಟರ್‌ ಹತ್ತಿರ ಇರುವ ದೇವಸ್ಥಾನ ನನ್ನ ಕನಸಿನಲ್ಲಿ ಆ ದೇವಸ್ಥಾನ ಬಂದಿತ್ತು. ನಾನು ಆ ದೇವಸ್ಥಾನಕ್ಕೆ ಹೋಗಿದ್ದೆ. ದೇವಿ ವಿಗ್ರಹ ಒಡೆದು ಆಚೆ ಬಂದು ನನ್ನನ್ನು ತೊಡೆ ಮೇಲೆ ಮಲಗಿಸಿಕೊಂಡು "ಯಾವಾಗ ಕರೆದರೂ ಬರ್ತೇನೆ" ಅನ್ನುವಂಥ ಪ್ರಾಮಿಸ್‌ ಮಾಡಿದ್ರು! ನನ್ನ ಅಪ್ಪ ಅಮ್ಮನಿಗೆ ಒಂದ್ಸಲ ಅಲ್ಲೇ ಆಕ್ಸಿಡೆಂಟ್‌ ಆಗಿತ್ತು. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದೇ ಆ ತಾಯಿಯ ಕೃಪೆಯಿಂದ ಎಂದು ನಂಬಿದ್ದೇನೆ. ಬಾಲ್ಯದಲ್ಲಿ ಅಪ್ಪ ನನ್ನನ್ನು ಶಬರಿಮಲೆಗೆ ಕೂಡ ಕರೆದುಕೊಂಡು ಹೋಗಿದ್ದರು. ನಾನು ಗರ್ಭಿಣಿ ಆಗಿದ್ದಾಗ, ಮುಲ್ಕಿಯಲ್ಲಿ ನಮ್ಮದೇ ಬನದ ಹಾವು ನನಗೆ ಕಾಣಿಸಿಕೊಂಡಿತ್ತು. ನಮ್ಮ ಬನದ ನಾಗದೇವತೆ ಅಲ್ಲಿಗೆ ಬಂದ ಸೊಸೆಯಂದಿರಲ್ಲಿ ನನಗೆ ಮಾತ್ರ ಕಾಣಿಸಿಕೊಂಡಿತ್ತು.

ನಿಮ್ಮ ಮರೆಯಲಾಗದ ಪ್ರವಾಸದ ಅನುಭವ ಯಾವುದು?

ಗೋವಾಗೆ ಬಿಸಿನೆಸ್‌ ಮೀಟಿಂಗ್‌ಗೆ ಹೋಗಿದ್ದೆ. ಆದರೆ ಗೋವಾ ನೋಡಿದ್ದಾಗಲಿ ಸ್ಟೇ ಮಾಡಿದ್ದಾಗಲಿ ಇಲ್ಲ. ಮದುವೆಯಾದ ಮೇಲೆ ನಾವು ಮೂರು-ನಾಲ್ಕು ತಿಂಗಳ ನಂತರ ಗೋವಾಗೆ ಹನಿಮೂನ್‌ಗೆ ಹೋದ್ವಿ. ಗೋವಾದಲ್ಲಿ ಪ್ಯಾರಾಗೈಡಿಂಗ್‌, ಸ್ವಿಮ್ಮಿಂಗ್‌, ಶಿಪ್ಪಿಂದ ಹಾರಿ ಸ್ವಿಮ್ಮಿಂಗ್‌ ಎಲ್ಲ ಕಲಿತಿದ್ದೀನಿ. ಸಮುದ್ರದಲ್ಲಿ ಸ್ವಿಮ್ಮಿಂಗ್‌ ಕಲಿಯುವುದರ ಜತೆಗೆ ನಾನು ಅಂಡರ್‌ವಾಟರ್‌ ಎಕ್ಸ್‌ಪೀರಿಯನ್ಸ್‌ ಮಾಡಿದ್ದೆ. ಬೆಂಗಳೂರಿಗೆ ಬಂದ ಮೇಲೆ ನಾನು ಪ್ರೆಗ್ನೆಂಟ್‌ ಇದ್ದೆ ಅಂತ ಗೊತ್ತಾಯಿತು. ನನ್ನ ಪ್ರೆಗ್ನೆನ್ಸಿಯಲ್ಲಿ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಈ ತರಹದ ಎಕ್ಸ್‌ಪೀರಿಯನ್ಸ್‌ ಮಾಡಿದ್ದು ದೊಡ್ಡ ವಿಚಾರ. ಇದು ಕೂಡಾ ನನ್ನ ಲೈಫ್‌ನಲ್ಲಿ ಮರೆಯಲಾಗದ ಪ್ರವಾಸದ ಅನುಭವ ಎಂದು ಹೇಳಬಹುದು.

Untitled design (1)

ಉತ್ತರ ಭಾರತದಲ್ಲಿ ಇಷ್ಟವಾದ ಪ್ರವಾಸಿ ತಾಣ ಯಾವುದು?

ನನ್ನ ಮದುವೆಗೂ ಮೊದಲು ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ಜತೆ ಮನಾಲಿಗೆ ಹೋಗಿದ್ದೆವು. ಸೈನಸ್‌ ಇರುವಂಥ ಹುಡುಗಿ ನಾನು. ಚಳಿ ತಡೆದುಕೊಳ್ಳೋಕೆ ಆಗಲ್ಲ. ಅದರಲ್ಲೂ ಮನಾಲಿಯ ಪೀಕ್‌ ಗೆ ಹೋಗಿದ್ದು ಮರೆಯಲಾಗದ ಅನುಭವ. ಎಲ್ಲಿ ನೋಡಿದರೂ ಅಲ್ಲಿ ಮಂಜು. ಆದರೆ ಅದನ್ನು ತುಂಬಾ ಎಂಜಾಯ್ ಮಾಡಿದ್ದೇವೆ.

ವಿದೇಶಿ ಪ್ರವಾಸದ ಅನುಭವ ಹೇಗಿತ್ತು?

ನಾನು ಇದುವರೆಗೆ ವಿದೇಶಕ್ಕೆ ಎಂದು ಹೇಗಿರುವುದು ಒಂದೇ ಬಾರಿ. ಅದು ವಿಯೆಟ್ನಾಂ ಪ್ರವಾಸ. ನನಗೆ ಹೈಟ್‌ ಫೋಬಿಯಾ ಇದೆ. ಏಳೆಂಟು ಮಹಡಿಯಿಂದ ನೋಡಿದರೆ ತಲೆ ಸುತ್ತೋತ್ತುತ್ತದೆ. ಹಾಗಿದ್ದರೂ ನಾನು ವಿಯೆಟ್ನಾಂನಲ್ಲಿ ಎಷ್ಟೋ ಫೀಟ್‌ ಎತ್ತರದಲ್ಲಿ ಕೇಬಲ್‌ ಕಾರಲ್ಲಿ ಹೋಗಿದ್ದೆ. ಅದು ನನ್ನ ಬೆಸ್ಟ್‌ ಪ್ರವಾಸ. ಗಂಡ ಮತ್ತು ಮಗುವಿನ ಜತೆಗೆ ಹೋದ ಪ್ರವಾಸವದು. ಹತ್ತು ದಿನದ ಪ್ರವಾಸದಲ್ಲಿ ಕೆಲವೊಂದು ರಾಜ್ಯಗಳನ್ನು ಮಾತ್ರ ಕವರ್‌ ಮಾಡಿದ್ದೀವಿ. ಇಡೀ ವಿಯೆಟ್ನಾಂ ಸುತ್ತಾಡುವುದಕ್ಕೆ ಒಂದೆರಡು ತಿಂಗಳ ಕಾಲ ಸಮಯವಿದ್ದರೂ ಕಡಿಮೆಯೇ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್