Friday, March 20, 2026
Friday, March 20, 2026

ಅಡ್ಡಾ ಅಂದ್ರೆ ಸಡ್ಡಾ!

ಬೆಂಗಳೂರು ಈಗಂತೂ ಫುಡ್‌ ಅಡ್ಡಾ ಆಗಿದೆ. ಗಲ್ಲಿ ಗಲ್ಲಿಗಳಲ್ಲೂ ಹೊಟೇಲ್‌, ರೆಸ್ಟೋರೆಂಟ್ಸ್‌ ತಲೆ ಎತ್ತಿರುವುದರಿಂದ ಸೌತ್‌ ಇಂಡಿಯನ್‌, ನಾರ್ತ್‌ ಇಂಡಿಯನ್‌, ಚೈನೀಸ್‌, ಇಟಾಲಿಯನ್‌, ಥಾಯ್‌ ಫುಡ್‌, ಕೇರಳ, ಆಂಧ್ರ ವೆರೈಟೀಸ್ ಹೀಗೆ ಎಲ್ಲ ಬಗೆಯ ಆಹಾರಗಳೂ ಹೆಚ್ಚು ಹುಡುಕಾಡದೆಯೇ ಸಿಗುತ್ತವೆ. ಆದರೆ ಡಾಬಾ ಫುಡ್‌ ಸಿಗುತ್ತಾ..ಅದಕ್ಕಾಗಿ ಬೆಂಗಳೂರು ನಗರ ಬಿಟ್ಟು ಒಂದಷ್ಟು ಕಿಲೋಮೀಟರ್‌ ಹೊರಗೆ ಹೋಗಬೇಕಲ್ಲ ಅಂತ ಯೋಚಿಸುತ್ತಿದ್ದೀರಾ..ಸಡ್ಡಾ ಪಂಜಾಬಿ ಡಾಬಾ ಈಗ ಬೆಂಗಳೂರಿನೊಳಗೇ ಮೂರು ಶಾಖೆಗಳನ್ನು ಹೊಂದಿ ಸದ್ದು ಮಾಡುತ್ತಿದೆ.

ಅಥೆಂಟಿಕ್‌ ಪಂಜಾಬಿ ಫುಡ್‌ ತಿನ್ನಬೇಕೆನಿಸಿತ್ತು. ಆದರೆ ಅದಕ್ಕಾಗಿ ಅನೇಕ ರೆಸ್ಟೋರೆಂಟ್‌ ಗಳಿವೆಯಾದರೂ ಡಾಬಾದಲ್ಲಿ ಸಿಗುವ ಪಕ್ಕಾ ಡಾಬಾ ಶೈಲಿಯ ಪಂಜಾಬಿ ಡಿಶ್‌ಗಳೇ ಬೇಕೆನಿಸಿದ್ದರಿಂದ ಇನ್‌ಸ್ಟಾಗ್ರಾಮ್‌ ಹುಡುಕಾಟ ಶುರುವಾಗಿತ್ತು. ಹಾಗೆ ಪರಿಚಯವಾಗಿದ್ದೇ ಸಡ್ಡಾ ಪಂಜಾಬಿ ಡಾಬಾ. ನವಿ ಮುಂಬೈ, ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಹೆಸರು ಮಾಡಿದ್ದ ಸಡ್ಡಾ ಪಂಜಾಬಿ ಡಾಬಾ ಬೆಂಗಳೂರಿನಲ್ಲೂ ಆಹಾರ ಪ್ರಿಯರ ಮನಗೆದ್ದಿದೆ. ಮೊದಲು ರಾಜಾಜಿನಗರದಲ್ಲಿ ಸಡ್ಡಾ ಪಂಜಾಬಿ ಡಾಬಾ ಪ್ರಾರಂಭವಾಗಿ ಬಹು ಬೇಡಿಕೆಯನ್ನು ಪಡೆದುಕೊಂಡ ನಂತರ ಹೆಚ್ ಎಸ್‌ ಆರ್‌ ಲೇಔಟ್‌ ನಲ್ಲಿ ಇದರ ಎರಡನೆಯ ಶಾಖೆಯನ್ನು ಪ್ರಾರಂಭಿಸಲಾಗಿತ್ತು. ಅಲ್ಲದೆ ಗ್ರಾಹಕರ ಬೇಡಿಕೆಗೆ ಮಣಿದು ಇದರ ಮೂರನೇ ಶಾಖೆಯೀಗ ಕೋಣನಕುಂಟೆ ಮೆಟ್ರೋ ಸ್ಟೇಷನ್‌ ಸಮೀಪದಲ್ಲೇ ಪ್ರಾರಂಭವಾಗಿದ್ದು ಇಲ್ಲಿನ ಡಾಬಾ ಫುಡ್‌ಗೆ ಮನಸೋಲದವರೇ ಇಲ್ಲ.

ಇದನ್ನೂ ಓದಿ: ಕ್ರಿಕೆಟ್‌ನ ಕಿಕ್ ಹೆಚ್ಚಿಸುವ ರೆಸ್ಟೋ ಬಾರ್

ಬೆಂಗಳೂರಿನಲ್ಲೇ ಇದ್ದರೂ ಪಂಜಾಬ್‌ನಲ್ಲಿರುವ ಅನುಭವ ನೀಡುವ ಈ ಸಡ್ಡಾ ಪಂಜಾಬಿ ಡಾಬಾದಲ್ಲಿ ಸೀಟಿಂಗ್‌ ವ್ಯವಸ್ಥೆಯಂತೂ ವಿಭಿನ್ನ ಹಾಗೂ ಕಲರ್‌ಫುಲ್‌ ಆಗಿದೆ. ಸುತ್ತಲಿನ ಆಂಬಿಯನ್ಸ್‌ ಕೂಡ ಡಾಬಾವನ್ನೇ ಹೋಲುವಂತಿದ್ದು, ಆಹಾರದ ರುಚಿಯನ್ನು ಪದಗಳಲ್ಲಿ ವರ್ಣಿಸುವುದೇ ಬಲು ಕಷ್ಟ.

ಮುರ್ತಾಲ್‌ ಪರಾಠ ತಿನ್ನಲು ಮರೆಯಲೇ ಬೇಡಿ

New Project (4)

ಪಂಜಾಬ್‌ ಭಾಗದಲ್ಲಿ ಪರಾಠಗಳಿಗೆ ಇರುವಷ್ಟು ಬೇಡಿಕೆ ರೈಸ್‌ ಐಟಂಗಳಿಗೂ ಇಲ್ಲ. ಡಾಬಾಗಳಲ್ಲಂತೂ ವಿಭಿನ್ನ ಬಗೆಯ ಪರಾಠಗಳಿಗೆ ಆಹಾರಪ್ರಿಯರು ಮುಗಿಬೀಳುತ್ತಾರೆ. ಆದರೆ ನೀವು ಎಂದಾದರೂ ಮುರ್ತಾಲ್‌ ಪರಾಠದ ರುಚಿ ನೋಡಿದ್ದೀರಾ? ಇಲ್ಲವಾದರೆ ಸಡ್ಡಾ ಪಂಜಾಬಿ ಡಾಬಾದ ಪ್ರಮುಖ ಆಕರ್ಷಣೆಯಾಗಿರುವ ಮುರ್ತಾಲ್‌ ಪರಾಠವನ್ನು ಒಮ್ಮೆಯಾದರೂ ಟೇಸ್ಟ್‌ ಮಾಡಿ ನೋಡಲೇಬೇಕು. ದೆಹಲಿ ಸಮೀಪದ ಮುರ್ತಾಲ್‌ ಡಾಬಾದಲ್ಲಿ ಮಾತ್ರವೇ ಸಿಗುವ ಈ ರುಚಿಕರ ಪರಾಠವನ್ನು ಈ ಡಾಬಾದ ಮೂಲಕ ಬೆಂಗಳೂರಿಗರಿಗೂ ಪರಿಚಯಿಸಲಾಗಿದೆ.

ಜೈನ್‌ ಫುಡ್‌ ಬೇಕೆನ್ನುವವರಿಗಾಗಿ…

New Project (3)

ಪಂಜಾಬಿ ಫುಡ್..ಮಸಾಲೆಯೆ ಹೆಚ್ಚು, ಎಲ್ಲದರಲ್ಲೂ ನೀರುಳ್ಳಿ, ಬೆಳ್ಳುಳ್ಳಿಯ ಬಳಕೆಯನ್ನೇ ಮಾಡಲಾಗುತ್ತದೆ. ಘಾಟು ಕಷ್ಟವೆನಿಸುತ್ತದೆಯಾದ್ದರಿಂದ ಸಿಂಪಲ್‌ ರುಚಿಯ ಜೈನ್‌ ಫುಡ್‌ ಬೇಕೆನ್ನುವವರಿಗಾಗಿ ಇಲ್ಲಿ ಪ್ರತ್ಯೇಕ ಮೆನುವನ್ನೇ ಸಿದ್ಧಪಡಿಸಲಾಗಿದೆ. ಮಕ್ಕಳಿಗೂ ಒಪ್ಪುವಂಥ ಈ ಜೈನ್‌ ಫುಡ್‌ ನಲ್ಲಿ ಆಯ್ಕೆಗಳನ್ನು ನೋಡಿದರಂತೂ ಬೆರಗಾಗಿಬಿಡುತ್ತೀರಿ.

ಕ್ರಿಕೆಟ್‌ ಸ್ಕ್ರೀನಿಂಗ್‌ ಹವಾ !

ಈಗಂತೂ ಎಲ್ಲ ರೆಸ್ಟೋರೆಂಟ್‌ಗಳಲ್ಲೂ ಕ್ರಿಕೆಟ್‌ ಸ್ಕ್ರೀನಿಂಗ್‌ ಎಂಬುದು ಸಾಮಾನ್ಯವಾಗಿಬಿಟ್ಟಿದೆ. ನೆಚ್ಚಿನ ಐಪಿಎಲ್‌ ವರ್ಲ್ಡ್‌ ಕಪ್‌ ನೋಡುತ್ತಲೇ ಊಟ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಅದಕ್ಕಾಗಿಯೇ ಗ್ರಾಹಕರು ರೆಸ್ಟೋರೆಂಟ್‌ ಬುಕಿಂಗ್‌ ಮಾಡುವ ಮುನ್ನ ಕ್ರಿಕೆಟ್‌ ಸ್ಕ್ರೀನಿಂಗ್‌ ಇದೆಯೇ ಎಂದು ಚೆಕ್‌ ಮಾಡಿಕೊಂಡೇ ಹೋಗಲು ಬಯಸುತ್ತಾರೆ. ಇಲ್ಲಂತೂ ಬೃಹತ್‌ ಪರದೆಯಲ್ಲೇ ಕ್ರಿಕೆಟ್‌ ಸ್ಕ್ರೀನಿಂಗ್‌ ಮಾಡುವುದರಿಂದ ನೋಟ- ಊಟ ಎರಡಕ್ಕೂ ಒಳ್ಳೆಯ ಅವಕಾಶವಿದೆ.

ಇಲ್ಲಿ ಮುರ್ತಾಲ್‌ ಪರಾಠ ಮಾತ್ರವಲ್ಲದೆ ಇಬ್ಬರು ಕೂತು ಉಂಡರೂ ಮುಗಿಯದ ಮಹಾರಾಣಿ ಥಾಲಿ, ಅಸಾರ್ಟೆಡ್‌ ವೆಜಿಟೆಬಲ್ಸ್‌ ಇನ್‌ ಹನಿ ಮಸ್ಟರ್ಡ್‌ ಸಾಸ್‌, ಪಟ್ಟಿ ಕೇ ಫಲ್.‌ ಸ್ಪಿನ್ಯಾಚ್‌ ಕಬಾಬ್‌, ರಬ್ಡಿ ಲಸ್ಸಿ ಹೀಗೆ ದೇಸಿ ಫೀಲ್‌ ನೀಡುವ ಬಹುಬಗೆಯ ಆಯ್ಕೆಗಳಿವೆ. ಪಕ್ಕಾ ಪಂಜಾಬಿ ಶೈಲಿಯ ರಿಚ್‌ ಹಾಗೂ ಫ್ಲೇವರ್‌ಫುಲ್‌ ತಿನಿಸುಗಳನ್ನು ಟೇಸ್ಟ್‌ ಮಾಡದಿರಲು ಮನಸ್ಸೇ ಬರದು.

ಇಲ್ಲಿ ಪಂಜಾಬಿನ ಸವಿಯೂಟವಷೇ ಅಲ್ಲದೆ 30-50 ಜನರು ಸೇರುವ ಬರ್ತ್‌ ಡೇ ಪಾರ್ಟಿ, ಕಿಟ್ಟಿ ಪಾರ್ಟೀಸ್‌ ಗೂ ಅವಕಾಶ ಕಲ್ಪಿಸಿಕೊಡುತ್ತಾರೆ. ವಿಶೇಷವೆಂದರೆ 30 ಜನರ ಮೇಲಿದ್ದರೆ ಬಫೆಯನ್ನೂ ಸಿದ್ಧಪಡಿಸಿಕೊಡುತ್ತಾರೆ. ಮೆನುವಿನಲ್ಲಿ ಆಯ್ಕೆಯಿದ್ದರೆ ಮುಂಚಿತವಾಗಿಯೇ ಮಾಹಿತಿ ನೀಡಬೇಕಷ್ಟೇ. ವಾರದ ಎಲ್ಲ ದಿನವೂ ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ಈ ಡಾಬಾ ಗ್ರಾಹಕರಿಗೆ ಮುಕ್ತವಾಗಿರುತ್ತದೆ.

ಹಕ್ಕಿ ಹಾರುತಿದೆ ನೋಡಿದಿರಾ…

New Project (2)

ಈಗಾಗಲೇ ಬೆಂಗಳೂರಿನಲ್ಲಿ ಮೂರು ಶಾಖೆಗಳನ್ನು ತೆರೆದು ಯಶಸ್ವಿಯಾಗಿರುವ ಸಡ್ಡಾ ಪಂಜಾಬಿ ಡಾಬಾ ಮುಂದಿನ ದಿನಗಳಲ್ಲಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಅದರಲ್ಲೂ ಮುಖ್ಯವಾಗಿ ಬನಶಂಕರಿಯಲ್ಲಿ ಹೊಸ ಶಾಖೆಯನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ.

ಪಂಚ್‌ ಸ್ಪೆಷಲ್‌ ಮೆನು

ಇತ್ತೀಚೆಗೆ ಜಪಾನ್‌ನ ಏಳು ತಿಂಗಳ ಪುಟ್ಟ ಮಂಗ ಪಂಚ್ ಸೋಷಿಯಲ್‌ ಮೀಡಿಯಾದಲ್ಲೂ ಭಾರೀ ಸುದ್ದಿಯಾಗಿತ್ತು. ಹುಟ್ಟಿದ ಕೂಡಲೇ ತಾಯಿಯಿಂದ ದೂರವಾಗಿದ್ದು, ಬೊಂಬೆಯನ್ನೇ ತಾಯಿ ಎಂದು ಭಾವಿಸಿಕೊಂಡು ಬದುಕುತ್ತಿದೆ. ಇದರ ದೃಶ್ಯವು ಪ್ರಪಂಚದಾದ್ಯಂತದ ಪ್ರಾಣಿಪ್ರಿಯರ ಕಣ್ಣು ಒದ್ದೆಯಾಗುವಂತೆ ಮಾಡಿದೆ. ವಿಶೇಷವೇನು ಗೊತ್ತಾ..? ಈ ಪಂಚ್‌ ಬೇಬಿ ಮಂಕಿಯ ಹೆಸರಿನಲ್ಲಿ ಇಲ್ಲೊಂದು ವಿಶೇಷ ಮೆನುವೇ ಸಿದ್ಧವಾಗಿದೆ. ಪಂಚ್‌ ಸ್ಪೆಷಲ್‌ ಮೆನುವಿನ ಮೇಲೆ ಶೆ.10ರಷ್ಟು ರಿಯಾಯಿತಿಯೂ ಗ್ರಾಹಕರಿಗೆ ಲಭ್ಯವಿದೆ.

ವಿಳಾಸ:

19, 1ಸ್ಟ್ ಕ್ರಾಸ್ ರ್ಡ್, ಅಂಜನಾದ್ರಿ ಲೇಔಟ್, ಕೋಣನಕುಂಟೆ, ಬೆಂಗಳೂರು, ಕರ್ನಾಟಕ 560062

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

Read Previous

ಪ್ರವಾಸಿಗರ ನೆಚ್ಚಿನ ಎವರ್ ಗ್ರೀನ್ ಕೌಂಟಿ...

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ

Read Next

ಪ್ರಕೃತಿಯ ಮೈಮಾಟವನ್ನು ನೋಡಬೇಕೆ? ಸಮತಗೆ ಬನ್ನಿ