ಹಕ್ಕಿ ಹಾರುತಿದೆ ನೋಡಿದಿರಾ…
ಬರ್ಡ್ಸ್ ಆಫ್ ಪ್ಯಾರಡೈಸ್‌ನಲ್ಲಿ 600ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿವೆ. ಇದು ಪ್ರಾಣಿ-ಪಕ್ಷಿಗಳನ್ನು ನೋಡಲು ಒಂದು ಟೂರ್ ಜತೆಗೆ ಅವುಗಳ ಜೀವನ ಶೈಲಿಯನ್ನು ಅರಿತುಕೊಳ್ಳವ ಯಾನವೂ ಆಗಿರುತ್ತದೆ. ಇಲ್ಲಿ ವಿವಿಧ ಜಾತಿಯ ಗಿಳಿ, ಕೋಳಿ, ಪಾರಿವಾಳ, ಮತ್ತು ಬಾತುಕೋಳಿ, ಟರ್ಕಿ, ಎಮು ಹೀಗೆ ಹಲವು ಪಕ್ಷಿಗಳಿವೆ. ಇಗ್ವಾನಾ, ಉಡ, ಹೆಬ್ಬಾವು, ನಕ್ಷತ್ರ ಆಮೆ, ಆಫ್ರಿಕನ್ ಪಿಗ್ಮಿ ಮುಳ್ಳುಹಂದಿ ಹೀಗೆ ಅಪರೂಪದ ಪ್ರಾಣಿಗಳಿವೆ. ಬೆಕ್ಕು, ನಾಯಿ, ಮೊಲ, ಇಲಿ, ಕುದುರೆಗಳೂ ಇವೆ.
ರೆಸಾರ್ಟ್‌ಗಳಲ್ಲಿ ಉಳಿಯುವ ಜನರು ಹೆಚ್ಚಾಗಿ ಬಯಸುವುದೇನು? ಉತ್ತಮ ವಾಸ್ತವ್ಯ, ಅತ್ಯುತ್ತಮ ಸಿಬ್ಬಂದಿ ಸೇವೆ, ಐಷಾರಾಮಿ ಫೀಲ್ ಕೊಡುವ ಕೊಠಡಿ ಮತ್ತು ಪರಿಸರ. ಹೆಚ್ಚೆಂದರೆ ಒಂದು ಸಫಾರಿ. ಆದರೆ, ಈ ʻಬರ್ಡ್ಸ್ ಆಫ್ ಪ್ಯಾರಡೈಸ್ʼನಲ್ಲಿ ಇದೆಲ್ಲದಕ್ಕೂ ಮೀರಿದ ಅನುಭವ ಪ್ರತಿ ಪ್ರಕೃತಿ ಪ್ರಿಯರಿಗೂ ದೊರೆಯುತ್ತದೆ. ಹೌದು, ಇದು ಮಾನವ- ಪ್ರಾಣಿಗಳ ನಡುವೆ ಒಂದಷ್ಟು ಕಾಲ ಕಳೆಯಲು ಅವುಗಳ ಕುರಿತು ಅರಿಯಲು ಉತ್ತಮ ಸ್ಥಾನ.
600ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳು
ಬರ್ಡ್ಸ್ ಆಫ್ ಪ್ಯಾರಡೈಸ್‌ನಲ್ಲಿ 600ಕ್ಕೂ ಅಧಿಕ ಪ್ರಾಣಿ-ಪಕ್ಷಿಗಳಿವೆ. ಇದು ಪ್ರಾಣಿ-ಪಕ್ಷಿಗಳನ್ನು ನೋಡಲು ಒಂದು ಟೂರ್ ಜತೆಗೆ ಅವುಗಳ ಜೀವನ ಶೈಲಿಯನ್ನು ಅರಿತುಕೊಳ್ಳವ ಯಾನವೂ ಆಗಿರುತ್ತದೆ. ಇಲ್ಲಿ ವಿವಿಧ ಜಾತಿಯ ಗಿಳಿ, ಕೋಳಿ, ಪಾರಿವಾಳ, ಮತ್ತು ಬಾತುಕೋಳಿ, ಟರ್ಕಿ, ಎಮು ಹೀಗೆ ಹಲವು ಪಕ್ಷಿಗಳಿವೆ. ಇಗ್ವಾನಾ, ಉಡ, ಹೆಬ್ಬಾವು, ನಕ್ಷತ್ರ ಆಮೆ, ಆಫ್ರಿಕನ್ ಪಿಗ್ಮಿ ಮುಳ್ಳುಹಂದಿ ಹೀಗೆ ಅಪರೂಪದ ಪ್ರಾಣಿಗಳಿವೆ. ಬೆಕ್ಕು, ನಾಯಿ, ಮೊಲ, ಇಲಿ, ಕುದುರೆಗಳೂ ಇವೆ.
ಗೈಡ್ ಜತೆಗೆ ಸುತ್ತಾಟ

ಇಲ್ಲಿನ ಎಲ್ಲಾ ಪ್ರಾಣಿ-ಪಕ್ಷಿಗಳನ್ನು ನಿಮಗೆ ಗೈಡ್‌ಗಳು ಪರಿಚಯಿಸುತ್ತಾರೆ. ಅವುಗಳ ಜೀವನ ಶೈಲಿಯ ಕುರಿತು ನಿಮಗೆ ಮಾಹಿತಿ ನೀಡುತ್ತಾರೆ. ಅವಕಾಶಗಳಿದ್ದರೆ ನೀವು ಅಲ್ಲಿ ಅವುಗಳಿಗೆ ಆಹಾರ ನೀಡಬಹುದು, ಸ್ನಾನ ಮಾಡಿಸಬಹುದು. ಉಳಿದಂತೆ ಇಲ್ಲಿನ ಪ್ರಾಣಿ-ಪಕ್ಷಿಗಳನ್ನು ನೀವು ಮುಟ್ಟಬಹುದು ಬೇಕಾದರೆ ಫೊಟೋಶೂಟ್ ಸಹ ಮಾಡಿಕೊಳ್ಳಬಹುದು. ವಿಶೇಷವೆಂದರೆ ಇಲ್ಲಿನ ಪಕ್ಷಿಗಳು ಪ್ರವಾಸಿಗರು ಕಂಡೊಡನೆ ಅವರ ಬಳಿ ಹಾರಿ ಬರುತ್ತವೆ. ಕೈಯಲ್ಲಿ ಕಾಳು ಹಿಡಿದು ಇಲ್ಲಿನ ಗಿಳಿಹಿಂಡಿನ ನಡುವೆ ನಿಂತುಕೊಳ್ಳಬೇಕು. ಆಗ ಅವುಗಳು ಕಾಳು ತಿನ್ನಲು ಧಾವಿಸುವುದನ್ನು, ಕೈಮೇಲೆ ತಾವಾಗಿಯೇ ಬಂದು ಕುಳಿತುಕೊಳ್ಳುವುದನ್ನು ನೋಡುವಾಗ ಮೈ ರೋಮಾಂಚನ ಅನಿಸುತ್ತದೆ. ಈ ಎಲ್ಲಾ ವಿಚಾರಗಳನ್ನು ನೀವು ಅನುಭವಿಸಿದ ನಂತರ ನೀವು ನಿಮ್ಮ ಮನೆಗೆ ಯಾವ ಸಾಕು ಪ್ರಾಣಿಯನ್ನು ತರಬೇಕು, ಅವುಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಕುರಿತು ಸ್ಪಷ್ಟ ಚಿತ್ರಣ ಪಡೆದುಕೊಳ್ಳುತ್ತೀರಿ.
ಮಕ್ಕಳಿಗೆ ಡಿಜಿಟಲ್ ಡಿಟಾಕ್ಸ್
ಮೊಬೈಲ್‌ಗಳಿಗೆ ಅಡಿಕ್ಟ್ ಆದ ಮಕ್ಕಳನ್ನು ಸುಧಾರಿಸಲು ಹರಸಾಹಸವೇ ಪಡಬೇಕು. ಒಮ್ಮೆ ಇಲ್ಲಿಗೆ ಮಕ್ಕಳೊಂದಿಗೆ ಬೇಟಿ ನೀಡಿ. ಅವರು ಅಂದು ಅಲ್ಲಿನ ಪರಿಸರ ಮತ್ತು ಪ್ರಾಣಿಗಳ ಜತೆಗೆ ಬೆರೆತು ಮೊಬೈಲ್ ಮರೆತುಬಿಡುತ್ತಾರೆ. ಡಿಜಿಟಲ್ ಡಿಟಾಕ್ಸ್ ಅನ್ನು ಪ್ರೇರೇಪಿಸುವ ಸ್ಥಳವಿದು. ನೀವು ಮಾತ್ರ ಮೊಬೈಲ್ ಕೈಗೆತ್ತಿಕೊಳ್ಳಬೇಡಿ.
ಮಂಗಳವಾರ ರಜಾದಿನ
ಇಲ್ಲಿ 600ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳು ಇರುವುದರಿಂದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಲ್ಲಿನ ಸ್ವಚ್ಛತೆ ಕಾರ್ಯಕ್ಕಾಗಿಯೇ ವಾರದ ಪ್ರತಿ ಮಂಗಳವಾರ ವಿಸಿಟರ್‌ಗಳಿಗೆ ಎಂಟ್ರಿ ಇರುವುದಿಲ್ಲ. ಆಗ ಇಲ್ಲಿ ನಿರ್ವಹಣೆ ಕಾರ್ಯಗಳಿಗೇ ಸಿಬ್ಬಂದಿ ಸಜ್ಜಾಗಿರುತ್ತಾರೆ. ಆಹಾರ ಪರಿಶೀಲನೆ, ನೈರ್ಮಲ್ಯ ಕಾರ್ಯಗಳು ನಡೆಯುತ್ತವೆ. ಪ್ರಾಣಿಗಳಿಗೆ ವಿಶ್ರಾಂತಿಯೂ ಅಂದು ಆಗುತ್ತದೆ. ಮತ್ತೆ ಮರುದಿನ ಯಥಾವತ್ತಾಗಿ ಪ್ಯಾರಡೈಸ್ ಕಾರ್ಯ ಆರಂಭವಾಗುತ್ತದೆ.
ಕಂಟೇನರ್ ವಾಸ್ತವ್ಯ

ಇಲ್ಲಿ ಕಂಟೇನರ್ ವಾಸ್ತವ್ಯ ಲಭ್ಯವಿದೆ. ಹಗಲು ಮತ್ತು ರಾತ್ರಿ ಉಳಿದುಕೊಳ್ಳಲು ಪ್ರತ್ಯೇಕ ಪ್ಯಾಕೇಜ್‌ಗಳಿವೆ. ಇವು ಬಜೆಟ್ ಸ್ನೇಹಿಯಾಗಿದ್ದು, ಕಂಟೇನರ್‌ಗಳು ವಿಶಾಲವಾಗಿರುವುದರಿಂದ ಆರಾಮವಾಗಿ ಇಬ್ಬರು ವಯಸ್ಕರು ಮಗುವಿನೊಂದಿಗೆ ಉಳಿದುಕೊಳ್ಳಲು ಅವಕಾಶವಿದೆ. ಪ್ಯಾಕೇಜ್‌ನಲ್ಲಿ ಸಾಹಸ ಚಟುವಟಿಕೆಗಳೂ ಇರುತ್ತವೆ ಅವುಗಳನ್ನೂ ಆನಂದಿಸಬಹುದು. ಉಳಿದಂತೆ ವಾಕ್-ಇನ್‌ಗೆ ಮಾತ್ರ ಪ್ರತ್ಯೇಕವಾಗಿ ಆನ್‌ಲೈನ್ ಮೂಲಕ ಮುಂಗಡವಾಗಿ ನೋಂದಣಿ ಮಾಡಿಕೊಳ್ಳಬೇಕು.
ಸಾಹಸ ಚಟುವಟಿಕೆಗಳು

ಬರ್ಡ್ಸ್ ಪ್ಯಾರಡೈಸ್‌ನಲ್ಲಿ ನೀವು ಹಲವು ಸಾಹಸ ಚಟುವಟಿಕೆಗಳನ್ನು ಆನಂದಿಸಬಹುದು. ಜಿಪ್ ಲೈನ್, ಸ್ಕೈ ಸೈಕ್ಲಿಂಗ್, ಬರ್ಮಾ ಬ್ರಿಡ್ಜ್, ಕುದುರೆ ಸವಾರಿ, ಎಟಿವಿ ರೈಡ್ ಹೀಗೆ ಮೈ ನವಿರೇಳಿಸುವ ಸಾಹಸ ಚಟುವಟಿಕೆಗಳನ್ನು ಮಾಡಲು ಇಲ್ಲಿ ಅವಕಾಶವಿದೆ. ಪಕ್ಷಿಗಳನ್ನು ನೋಡಲು ಬಂದ ನೀವು ಥೇಟ್ ಪಕ್ಷಿಯಂತೆ ಮನಸಿನ ಗರಿಬಿಚ್ಚಿ ಇಲ್ಲಿನ ಪರಿಸರ ಮತ್ತು ಚಟುವಟಿಕೆಗಳನ್ನು ಆನಂದಿಸುತ್ತೀರಿ. ಎಲ್ಲದಕ್ಕೂ ಇಲ್ಲಿ ಪಳಗಿದ ಕೈಗಳ ಆಶ್ರಯ ಸಿಗುವುದರಿಂದ ಭಯ ಆತಂಕಗಳು ಬೇಡ. ಇಲ್ಲಿನ ಸಿಬ್ಬಂದಿ ನಿಮ್ಮನ್ನು ಜಾಗರೂಕವಾಗಿ ನೋಡಿಕೊಳ್ಳುತ್ತಾರೆ.

ವಾರದ ಒಂದು ದಿನವಾದರೂ ನಿಮ್ಮ ದೇಹ ಮತ್ತು ಮನಸಿಗೆ ವಿರಾಮ ಹೇಳಿ. ಎಷ್ಟು ಅಂತ ಗೊಂದಲದ ಬದುಕಿನ ನಡುವೆ ಮೆತ್ತಗಾಗುತ್ತೀರಿ? ಬದುಕಿಗೂ ಸ್ವಲ್ಪ ರಿಲ್ಯಾಕ್ಸ್ ಬೇಕು ಅಲ್ಲವೇ? ನಿಮ್ಮ ದೇಹ ಮತ್ತು ಮನಸನ್ನು ಹಗುರವಾಗಿಸುವ ಬರ್ಡ್ಸ್ ಆಫ್ ಪ್ಯಾರಡೈಸ್‌ಗೆ ಒಮ್ಮೆಯಾದರೂ ಭೇಟಿಕೊಡಿ.
ದಾರಿ ಹೇಗೆ?
'ಬರ್ಡ್ಸ್ ಆಫ್ ಪ್ಯಾರಡೈಸ್ ಫಾರ್ಮ್' ಕೆಂಗೇರಿ ಹೋಬಳಿಯ ಬಂಜಾರಪಾಳ್ಯದಲ್ಲಿದೆ. ಹತ್ತಿರದ ಕೆಂಗೇರಿ ಮೆಟ್ರೋ ನಿಲ್ದಾಣಕ್ಕೆ ಬಂದಿಳಿದು. ಆಟೋ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ಈ ಸ್ಥಳವನ್ನು ತಲುಪಬಹುದು.