ಧರ್ಮಸ್ಥಳ, ಕುಕ್ಕೆಗೆ ಕೆಎಸ್‌ಟಿಡಿಸಿ ಬಜೆಟ್ ಫ್ರೆಂಡ್ಲಿ ಟೂರ್
ಈ ಪ್ಯಾಕೇಜ್ ಒಂದು ರಾತ್ರಿ, ಎರಡು ದಿನದ ಈ ಪ್ರವಾಸವನ್ನು ಕಲ್ಪಸಿದ್ದು, ಧರ್ಮಸ್ಥಳ ಮಂಜುನಾಥ ದೇವಾಲಯ, ರಾಮ ಮಂದಿರ, ಸೌತಡ್ಕ ಮಹಾಗಣಪತಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳ ದರ್ಶನವನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಪ್ಯಾಕೇಜನ್ನು ಹೆಚ್ಚು ಪ್ರವಾಸಿಗರು ಮೆಚ್ಚಿಕೊ೦ಡಿದ್ದಾರೆ.
ಕರ್ನಾಟಕದಲ್ಲಿ ಟೆಂಪಲ್ ಟೂರಿಸಂ ಅಡ್ಡಾ ಅಂದರೆ ಅದು ಅವಿಭಜಿತ ದಕ್ಷಿಣ ಕನ್ನಡ. ಅಲ್ಲಿ ಕರಾವಳಿ, ಸುಂದರ ಪ್ರಕೃತಿ, ಘಾಟ್ ಸೆಕ್ಷನ್‌ಗಳ ಜತೆಗೆ ದೇವಾಲಯಗಳಿದ್ದು, ದರ್ಶನದ ಜತೆಗೆ ಉತ್ತಮ ಪ್ರವಾಸದ ಅನುಭವವನ್ನೂ ನೀಡುತ್ತವೆ. ಮೇಲಾಗಿ ಇದು ಮಾನ್ಸೂನ್ ಕಾಲ. ಬೇಸಗೆಗೆ ಒಣಗಿದ ಮರ- ಗಿಡಗಳು ಈ ಕಾಲದಲ್ಲಿ ಹಸಿರೊದ್ದು ನಿಲ್ಲುತ್ತವೆ. ಅವುಗಳನ್ನು ನೋಡಲು ಪ್ರವಾಸಿಗರು ಇಷ್ಟ ಪಡುತ್ತಾರೆ. ಇದೇ ಯೋಚನೆಯೊಂದಿಗೆ ಕೆಎಸ್‌ಟಿಡಿಸಿ ಜೂನ್ 13ರಂದು ಹೊರತಂದಿದೆ.
ಇದನ್ನೂ ಓದಿ:ಶ್ರವಣಬೆಳಗೊಳದತ್ತ ಕೆಎಸ್‌ಟಿಡಿಸಿ ರಾಜರಥ
ಈ ಪ್ಯಾಕೇಜ್ ಒಂದು ರಾತ್ರಿ, ಎರಡು ದಿನದ ಈ ಪ್ರವಾಸವನ್ನು ಕಲ್ಪಸಿದ್ದು, ಧರ್ಮಸ್ಥಳ ಮಂಜುನಾಥ ದೇವಾಲಯ, ರಾಮ ಮಂದಿರ, ಸೌತಡ್ಕ ಮಹಾಗಣಪತಿ ದೇವಾಲಯ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯಗಳ ದರ್ಶನವನ್ನು ಒಳಗೊಂಡಿದೆ. ವಿಶೇಷವೆಂದರೆ ಈ ಪ್ಯಾಕೇಜನ್ನು ಹೆಚ್ಚು ಪ್ರವಾಸಿಗರು ಮೆಚ್ಚಿಕೊ೦ಡಿದ್ದಾರೆ.
ಪ್ರವಾಸಿಗರ ಮೆಚ್ಚುಗೆಗೆ ಕಾರಣಗಳು
ಶೀಘ್ರ ಮತ್ತು ಸುಲಭ ದರ್ಶನ
ಈ ಪ್ಯಾಕೇಜ್ ಜನಪ್ರಿಯವಾಗಲು ಕಾರಣ ಏನು ಎಂದು ನೋಡುವುದಾದರೆ, ವಿಶೇಷ ದರ್ಶನಕ್ಕೆ ಅವಕಾಶ ಅವುಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುಯತ್ತದೆ. ಸಾಮಾನ್ಯವಾಗಿ ಬೇರಾವುದೇ ಪ್ಯಾಕೇಜ್ ಪ್ರವಾಸದಲ್ಲಿ ನೀವು ಪ್ರವಾಸ ಹೋದರು ಈ ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಿತ್ತು. ಅದನ್ನು ಅರಿತ ಕೆಎಸ್‌ಟಿಡಿಸಿ ಧರ್ಮಸ್ಥಳ ಹಾಗೂ ಕುಕ್ಕೆಸುಬ್ರಹ್ಮಣ್ಯದಲ್ಲಿ ಸರದಿಯನ್ನು ತಪ್ಪಿಸಲು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಆಡಳಿತಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದೆ. ನಿಗಮದಿಂದ ಪ್ರವಾಸ ಬರುವವರ ವಿಶೇಷ ಹಾಗೂ ಶೀಘ್ರ ದರ್ಶನಕ್ಕೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಈ ಪ್ರವಾಸ ಬೇರೆ ಪ್ರವಾಸಗಳಿಗಿಂತ ಹೆಚ್ಚು ಅನುಕೂಲಕರ ಹಾಗೂ ಸುರಕ್ಷಿತ ಭಾವವನ್ನು ಪ್ರವಾಸಿಗರಿಗೆ ನೀಡಿದೆ.
ಗೈಡ್‌ಗಳ ಸಹಚರ್ಯೆ
ಕೆಎಸ್‌ಟಿಡಿಸಿಯೊಂದಿಗೆ ಯಾವುದೇ ಪ್ರವಾಸ ಹೋದರೂ ಇಡೀ ಪ್ರವಾಸದಲ್ಲಿ ಪ್ರವಾಸಿಗರೊಂದಿಗೆ ಕೆಎಸ್‌ಟಿಡಿಸಿಯ ಗೈಡ್ ಒಬ್ಬರು ಜತೆಯಲ್ಲಿರುತ್ತಾರೆ. ಇವರು ಪ್ರವಾಸಕ್ಕೆ ಹೋದ ಸ್ಥಳದ ಮಾಹಿತಿ ನೀಡುತ್ತಾರೆ. ಅಗತ್ಯ ವ್ಯವಸ್ಥೆಯನ್ನೂ ಮಾಡುತ್ತಾರೆ. ಹಾಗಾಗಿ ಪ್ರವಾಸಿ ಬೇರೆಲ್ಲಾ ಚಿಂತೆಗಳನ್ನು ಬಿಟ್ಟು ಗೈಡ್‌ಗಳ ಮಾತನ್ನು ಆಲಿಸಿದರಾಯಿತು. ಉಳಿದೆಲ್ಲಾ ಕೆಲಸಗಳನ್ನು ನಿಗಮ ನೋಡಕೊಳ್ಳುತ್ತದೆ.
ಯಾವವ ಪ್ಯಾಕೇಜ್ ನಿಮಗೆ ಬೇಕು
ಕೆಎಸ್‌ಟಿಡಿಸಿ ಬಜೆಟ್‌ಸ್ನೇಹಿ ಹಾಗೂ ಪ್ರೀಮಿಯಂ ಎಂಬ ಎರಡು ಬಗೆಯ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಪ್ರೀಮಿಯಂ ಪ್ಯಾಕೇಜ್‌ನಲ್ಲಿ ಪ್ರತಿಯೊಬ್ಬರಿಗೆ 4450 ರುಪಾಯಿಗಳು ನಿಗದಿ ಪಡಿಸಲಾಗಿದ್ದು, ಐಷಾರಾಮಿ ಹೊಟೇಲ್‌ನಲ್ಲಿ ವಾಸ್ತವ್ಯ ಹಾಗೂ ಬೆಳಗ್ಗಿನ ಉಪಾಹಾರ ಈ ಪ್ಯಾಕೇಜ್‌ನಲ್ಲಿ ಸೇರಿಸಲಾಗಿದೆ. ಡಬಲ್ ಹಾಗೂ ಟ್ರಿಪಲ್ ಶೇರಿಂಗ್‌ನಲ್ಲಿ ಹೋದರೆ ಪ್ಯಾಕೇಜ್ ಮೊತ್ತ ಮತ್ತಷ್ಟು ಕಡಿಮೆಯಾಗುತ್ತದೆ. ಇನ್ನು ಬಜೆಟ್ ಪ್ಯಾಕೇಜ್ ಒಂದು ಸಾವಿರ ರುಪಾಯಿಗಳಷ್ಟು ಕಡಿಮೆಯಾಗಲಿದ್ದು, ಉತ್ತಮ ಗುಣಮಟ್ಟದ ಹೊಟೇಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಇರುತ್ತದೆ.
ಅನುಭವಿಯ ಜತೆಗೆ ಪ್ರವಾಸ
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮ ರಾಜ್ಯದ ಉದ್ದಗಲಕ್ಕೂ ಇರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಅಡ್ಡಾಡಿಸಿದೆ. ದಶಕಗಳ ಕಾಲ ಕಾರ್ಯ ನಿರ್ವಹಿಸಿ ಅನುಭವಿಯಾಗಿದೆ. ಯಾವ ಕಾಲದಲ್ಲಿ ಪ್ರವಾಸಿಯ ಬೇಡಿಕೆ ಏನಿರುತ್ತದೆ ಎಂಬುದನ್ನು ಅದು ಚೆನ್ನಾಗಿ ಬಲ್ಲದು. ಮೇಲಾಗಿ ಕೆಎಸ್‌ಟಿಡಿಸಿಯೊಂದಿಗೆ ಪ್ರವಾಸ ಕೈಗೊಂಡ ಹೆಚ್ಚೂಕಮ್ಮಿ ಪ್ರತಿ ಪ್ರವಾಸಿಯೂ ತನ್ನ ಮುಂದಿನ ಪ್ರವಾಸವನ್ನು ಕೆಎಸ್‌ಟಿಡಿಸಿಯೊಂದಿಗೆ ಯೋಜಿಸುತ್ತಾನೆ. ಜತೆಗೆ ಇದು ಬೇಸಗೆ ಸರಿದು ಮಳೆ ಆವರಿಸುತ್ತಿರುವ ಕಾಲ. ಮಳೆ ಇನ್ನೇನು ಭಾರತಕ್ಕೆ ಕಾಲೂರುತ್ತಿದೆ. ಈ ವೇಳೆಗೆ ಉಡುಪಿ-ದಕ್ಷಿಣ ಕನ್ನಡ, ಮಲೆನಾಡು ಭಾಗಗಳು ಹಸಿರೊದ್ದು ನಿಲ್ಲುತ್ತವೆ. ಇಲ್ಲಿನ ಟೆಂಪಲ್ ಟೂರಿಸಂ ಕಲರವ ಹೆಚ್ಚುತ್ತದೆ. ಎಂಬುದನ್ನು ಅರಿತು ಕೆಎಸ್‌ಟಿಡಿಸಿ ಈ ಪ್ಯಾಕೇಜ್ ಹೊರತಂದಿದೆ. ಇದೇ ಕಾರಣಕ್ಕೆ ಹೊಸ ಪ್ರವಾಸ ಪ್ಯಾಕೇಜ್‌ಗಳಾದರೂ ಹೆಚ್ಚು ಜನಪ್ರಿಯತೆ ಗಳಿಸಿವೆ.

ಧರ್ಮಸ್ಥಳ ಮಂಜುನಾಥ
ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಧರ್ಮಸ್ಥಳ ಮಂಜುನಾಥ ದೇವಾಲಯವೂ ಒಂದು. ಇದು ಸುಮಾರು 800 ವರ್ಷಗಳಿಗೂ ಹೆಚ್ಚು ಪುರಾತನ ದೇವಾಲಯ. ಅಂದು ಈ ಸ್ಥಳದಲ್ಲಿ ಬಿರ್ಮಣ್ಣ ಪೆರ್ಗಡೆ ಮತ್ತು ಅಮ್ಮು ಬಲ್ಲಾಳ್ತಿ ಎಂಬ ದಂಪತಿ ವಾಸಿಸುತ್ತಿದ್ದರು. ಅವರ ಧರ್ಮನಿಷ್ಠೆಗೆ ಮೆಚ್ಚಿದ ಧರ್ಮದೇವತೆಗಳು ಅವರ ಕನಸಿನಲ್ಲಿ ಬಂದು, ಅಲ್ಲಿ ಧರ್ಮ ಸ್ಥಾಪನೆ ಮಾಡಲು ಸೂಚಿಸಿದರು. ನಂತರ ಉಡುಪಿಯ ಮಠದ ಶ್ರೀ ವಾದಿರಾಜ ಸ್ವಾಮಿಗಳು ಇಲ್ಲಿ ಶಿವನ ಲಿಂಗವನ್ನು ಪ್ರತಿಷ್ಠಾಪಿಸಿದರು. ನಂತರ ಆ ಸ್ಥಳದಲ್ಲಿ ನೆಲೆಯೂರಿದ್ದ ಧರ್ಮಪ್ರಜ್ಞೆಯನ್ನು ಕಂಡು ಈ ಸ್ಥಳಕ್ಕೆ 'ಧರ್ಮಸ್ಥಳ' ಎಂದು ಹೆಸರಿಟ್ಟರು ಎನ್ನಲಾಗಿದೆ. ದೇವಾಲಯದ ಆವರಣದಲ್ಲಿ ಅನ್ನಪೂರ್ಣ ಛತ್ರವಿದೆ. ಅಲ್ಲಿ ಜರುಗುವ ಪ್ರಸಾದ ಸೇವೆಗೆ ಹೆಚ್ಚು ಮಹತ್ವವಿದೆ. ಇಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿಯೇ ನೆಲೆಸಿದ್ದಾಳೆ ಎಂಬುದು ನಂಬಿಕೆ.
ಮಂಜುನಾಥ ದೇವಾಲಯ ಸುತ್ತಾಟವೇ ಒಂದು ಪಿಕ್‌ನಿಕ್ ಆಗಬಹುದು. ಮಂಜುನಾಥ ದೇವಸ್ಥಾನದ ಹತ್ತಿರವಿರುವ ರತ್ನಗಿರಿ ಬೆಟ್ಟದ ಮೇಲೆ 39 ಅಡಿ ಎತ್ತರದ ಏಕಶಿಲಾ ಬಾಹುಬಲಿ ಮೂರ್ತಿ, 'ಮಂಜೂಷಾ' ವಸ್ತುಸಂಗ್ರಹಾಲಯ ಮತ್ತು ರಥಗಳ ಸಾಲು, ನೇತ್ರಾವತಿ ಸ್ನಾನ ಘಟ್ಟವನ್ನು ನೋಡಿಕೊಂಡು ಬರಬಹುದು.

ಸೌತಡ್ಕ ಮಹಾಗಣಪತಿ
ಈ ದೇವಾಲಯ ಧರ್ಮಸ್ಥಳದಿಂದ ಅನತಿ ದೂರದಲ್ಲಿದ್ದು, ಧಾರ್ಮಿಕವಾಗಿ ಬಲು ಮಹತ್ವದ ತಾಣ. ಹೆಚ್ಚೂಕಮ್ಮಿ ಧರ್ಮಸ್ಥಳ ವೀಕ್ಷಣೆಗೆ ಬಂದ ಎಲ್ಲಾ ಪ್ರವಾಸಿಗರು ಇಲ್ಲಿಗೆ ತಪ್ಪದೆ ಭೇಟಿ ನೀಡುತ್ತಾರೆ. ಇದು ಬಯಲು ಆಲಯದಲ್ಲಿನ ಗಣಪತಿ. ಕಥೆಯ ಪ್ರಕಾರ ರಾಜ ಮನೆತನದವರು ಈ ಗಣಪತಿಯನ್ನು ಪೂಜಿಸುತ್ತಿದ್ದರು. ಅದರ ದೇಗುಲವನ್ನು ಶತ್ರುಗಳು ನಾಶಪಡಿಸಿದ ನಂತರ ಅಲ್ಲಿನ ದನ ಕಾಯುವ ಹುಡುಗರು ಗಣಪತಿ ಮೂರ್ತಿಯನ್ನು ತಂದು ಇಲ್ಲಿ ಕೂಡಿಸಿದರಂತೆ. ಇಲ್ಲಿ ಆಗ ರೈತರು ಬೆಳೆದ ಸೌತೆಕಾಯಿಯನ್ನು ನೈವೇದ್ಯಕ್ಕೆ ಅರ್ಪಿಸುವ ರೂಡಿಯಿತ್ತು ಎನ್ನಲಾಗಿದೆ. ಇದರಿಂದಲೇ ಸೌತಡ್ಕ ಗಣಪತಿ ಎಂಬ ಹೆಸರು ಬಂದಿದೆ ಎನ್ನಲಾಗಿದೆ. ಇಲ್ಲಿ ಭಕ್ತರು ಏನೇ ಹರಸಿಕೊಂಡರೂ ಈಡೇರುತ್ತದೆ ಎಂದು ನಂಬಲಾಗಿದ್ದು, ಬೇಡಿಕೆ ಈಡೇರಿದ ನಂತರ ಭಕ್ತರು ಇಲ್ಲಿಗೆ ಬಂದು ಗಂಟೆ ಕಟ್ಟುವುದು ಪ್ರಚಲಿತದಲ್ಲಿದೆ. ಇಲ್ಲಿ ಹಾಗೆ ಕಟ್ಟಿದ ಸಾಕಷ್ಟು ಗಂಟೆಗಳನ್ನು ಕಾಣಬಹುದು. ಮರವೊಂದರ ನೆರಳಲ್ಲಿ ಬಯಲನ್ನೇ ಆಲಯವಾಗಿರಿಸಿಕೊಂಡ ಇಲ್ಲಿನ ಗಣಪನಿಗೆ ನಿತ್ಯವೂ ಪೂಜೆ- ಪುನಸ್ಕಾರಗಳು ಜರುಗುತ್ತಿವೆ. ಮೇಲಾಗಿ ಯಾವುದೇ ಸಮಯದಲ್ಲಿ ಭಕ್ತರು ಬಂದರೂ ಗಣಪತಿಯ ದರ್ಶನ ಪಡೆಯಬಹುದು.
ಪ್ಯಾಕೇಜ್
ದಿನ - 1
ಮಧ್ಯಾಹ್ನ 2:00 ಗಂಟೆಗೆ ಬೆಂಗಳೂರಿನ ಯಶವಂತಪುರದಿಂದ ಪ್ರವಾಸ ಆರಂಭ.
ಮಧ್ಯಾಹ್ನ 2:30 ಗಂಟೆಗೆ ಬೆಂಗಳೂರಿನಿಂದ ಧರ್ಮಸ್ಥಳದೆಡೆಗೆ ಪ್ರಯಾಣ
ಸಂಜೆ 6:30 ಗಂಟೆಗೆ ವಿಶ್ರಾಂತಿ ಪಡೆಯಲು ನಿಲುಗಡೆ
ರಾತ್ರಿ 10:30 ಗಂಟೆಗೆ ಧರ್ಮಸ್ಥಳಕ್ಕೆ ಆಗಮನ. ಹೊಟೇಲ್‌ಗೆ ಚೆಕ್- ಇನ್ ಆಗಿ
ರಾತ್ರಿ 11:00 ಗಂಟೆಗೆ ಕನ್ಯಾಡಿಯಲ್ಲಿ ರಾತ್ರಿ ವಾಸ್ತವ್ಯ
ದಿನ - 2
ಬೆಳಗ್ಗೆ 7:00 ಗಂಟೆಗೆ ಹೊರಟು ಸೂರ್ಯ ನಾರಾಯಣ ದೇವಾಲಯಕ್ಕೆ ಭೇಟಿ
ಬೆಳಗ್ಗೆ 8:30 ಗಂಟೆಗೆ ಉಜಿರೆಯಲ್ಲಿ ಉಪಾಹಾರದ ನಂತರ ರಾಮಮಂದಿರ ಭೇಟಿಗೆ ಹೊರಡುವುದು
ಬೆಳಗ್ಗೆ 9:30 ಗಂಟೆಗೆ ಧರ್ಮಸ್ಥಳ ತಲುಪುವುದು
ಬೆಳಗ್ಗೆ 10:30 ಗಂಟೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ದರ್ಶನ
ಮಧ್ಯಾಹ್ನ 12:30 ಗಂಟೆಗೆ ಬೆಳ್ತಂಗಡಿಯ ಶಿಶಿಲೇಶ್ವರ ದೇವಾಲಯಕ್ಕೆ ಬೇಟಿ
ಮಧ್ಯಾಹ್ನ 1:30 ಗಂಟೆಗೆ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹೊರಡುವುದು
ಮಧ್ಯಾಹ್ನ 2:00 ಗಂಟೆಗೆ ಸೌತಡ್ಕ ಮಹಾಗಣಪತಿ ದೇವರ ದರ್ಶನ ಮತ್ತು ಊಟ
ಮಧ್ಯಾಹ್ನ 3:30 ಗಂಟೆಗೆ ಕುಕ್ಕೆಗೆ ಹೊರಡುವುದು
ಸಂಜೆ 6:00 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ
ರಾತ್ರಿ 7:30 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭೋಜನ
ರಾತ್ರಿ 8:30 ಗಂಟೆಗೆ ದೇವಾಲಯ ಭೇಟಿ, ದೃಶ್ಯ ವೀಕ್ಷಣೆ, ಭೋಜನದ ನಂತರ ಬೆಂಗಳೂರಿಗೆ ಪ್ರಯಾಣ
ರಾತ್ರಿ 10:30 ರಿಫ್ರೆಶ್‌ಮೆಂಟ್ ಬ್ರೇಕ್
ದಿನ – 3
ಬೆಳಗ್ಗೆ 5:30 ಗಂಟೆಗೆ ಬೆಂಗಳೂರಿಗೆ ಮರಳಿ
ಇಲ್ಲಿ ಗಮನಿಸಿ
ಕೆಎಸ್‌ಟಿಡಿಸಿ ಬುಕ್ ಮಾಡುವವರಿಗೆ ವಿಶೇಷ ಅವಕಾಶಗಳಿವೆ.
ಡಿಲಕ್ಸ್ ಎಸಿ ಬಸ್‌ನಲ್ಲಿ ಆರಾಮದಾಯಕ ಮತ್ತು ಸುಖಕರ ಪ್ರಯಾಣ.
ಆಯ್ಕೆ ಮಾಡಿಕೊಂಡ ಪ್ಯಾಕೇಜ್ ಅನ್ವಯ ಪ್ರವಾಸ
ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ ಸೌಲಭ್ಯ
ಕೆಎಸ್‌ಟಿಡಿಸಿ ನಿಮ್ಮ ಆಯ್ಕೆಯಾಗಲಿ
ಕೆಎಸ್‌ಟಿಡಿಸಿಯ ಪ್ಯಾಕೇಜ್ ಬಜೆಟ್ ಸ್ನೇಹಿಯಾಗಿದೆ.
ಆರಾಮದಾಯಕ ಪ್ರಯಾಣ: ಆಧುನಿಕ ಬಸ್‌ಗಳು ಮತ್ತು ಅನುಭವಿ ಚಾಲಕರೊಂದಿಗೆ ಇಡೀ ದಿನ ಸುರಕ್ಷಿತ ಪ್ರಯಾಣ ಮಾಡಬಹುದು.
ವಿಶೇಷ ಗೈಡ್‌ಗಳು: ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸುವ ತಜ್ಞ ಗೈಡ್‌ಗಳು ಪ್ರವಾಸಿಗರೊಂದಿಗೆ ಇರುತ್ತಾರೆ.
ಸಮಗ್ರ ಯೋಜನೆ: ಪ್ಯಾಕೇಜ್‌ನಲ್ಲಿ ಇರುವ ಎಲ್ಲ ತಾಣಗಳನ್ನೂ ಮನತಣಿಯುವವರೆಗೂ ನೋಡಬಹುದು. ಹಿತಾನುಭವ ಪಡೆಯಬಹುದು. ಸಮಯದ ಪ್ಲ್ಯಾನಿಂಗ್ ಇಲ್ಲಿ ಅತ್ಯಂತ ಶಿಸ್ತಿನಿಂದ ರೂಪಿಸಿರಲಾಗುತ್ತದೆ.
--
ಸಂಪರ್ಕ
Yogesh. MK
Manager (Tours)
Mob No: +91 960 6987 822 | Email ID: tour.manager@kstdc.co
Karnataka State Tourism Development Corporation Ltd. (KSTDC)