Thursday, February 12, 2026
Thursday, February 12, 2026

ಹಂಪಿ ಉತ್ಸವದಲ್ಲಿ ಡ್ರೋನ್‌ ಶೋ ಹಬ್ಬ

ಈ ಬಾರಿಯ ಹಂಪಿ ಉತ್ಸವದಲ್ಲಿ ಡ್ರೋನ್‌ ಶೋ ವಿಶೇಷವಾಗಿರಲಿದೆ. ಫೆ.13-15ರವರೆಗೆ ಈ ಶೋವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಹಂಪಿ ಉತ್ಸವಕ್ಕೆ ಸಿದ್ಧವಾಗಿರುವ ಮುಖ್ಯ ವೇದಿಕೆಯ ಬಳಿ ಡ್ರೋನ್‌ ಶೋ ಇರಲಿದ್ದು, ಸಾವಿರಾರು ಡ್ರೋನ್‌ಗಳು ಆಗಸದಲ್ಲಿ ಹಾರಾಡಲಿವೆ. ಉತ್ಸವ ನಡೆಯುವ ಮೂರು ದಿನಗಳ ಸಂಜೆ 7 ಗಂಟೆಗೆ ಶೋ ಶುರುವಾಗಲಿದೆ.

ನಾಳೆ ಅಂದರೆ ಫೆ.13ಕ್ಕೆ ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಉತ್ಸವ ಆರಂಭವಾಗಲಿದೆ. ಐದು ವಿಶೇಷ ವೇದಿಕೆಗಳು, ಹೊನಲು ಬೆಳಕಿನ ರೂಪಕ, ವಿಶೇಷ ಅಲಂಕಾರ, ಲಕ್ಷಾಂತರ ಜನರ ಸೇರುವಿಕೆಯಿಂದ ಹಂಪಿ ಜೇನಿನ ಗೂಡಿನಂತಾಗಲಿದೆ.

ಇದನ್ನೂ ಓದಿ: ಹಂಪಿ ಉತ್ಸವ: ಎಲ್ಲೆಲ್ಲಿ ಯಾವ್ಯಾವ ವೇದಿಕೆಗಳು ? ವಿವರ ಇಲ್ಲಿದೆ

ಈ ಬಾರಿಯ ಹಂಪಿ ಉತ್ಸವದಲ್ಲಿ ಡ್ರೋನ್‌ ಶೋ ವಿಶೇಷವಾಗಿರಲಿದೆ. ಫೆ.13-15ರವರೆಗೆ ಈ ಶೋವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. ಹಂಪಿ ಉತ್ಸವಕ್ಕೆ ಸಿದ್ಧವಾಗಿರುವ ಮುಖ್ಯ ವೇದಿಕೆಯ ಬಳಿ ಡ್ರೋನ್‌ ಶೋ ಇರಲಿದ್ದು, ಸಾವಿರಾರು ಡ್ರೋನ್‌ಗಳು ಆಗಸದಲ್ಲಿ ಹಾರಾಡಲಿವೆ. ಉತ್ಸವ ನಡೆಯುವ ಮೂರು ದಿನಗಳ ಸಂಜೆ 7 ಗಂಟೆಗೆ ಶೋ ಶುರುವಾಗಲಿದೆ. 15 ನಿಮಿಷಗಳಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಸಾದರ ಪಡಿಸುವ ಚಿತ್ರಣಗಳನ್ನು ಆಗಸದಲ್ಲಿ ಮೂಡಿಸಲಿವೆ. ಇದರಲ್ಲಿ ಕಲ್ಲಿನ ರಥ, ಕಡಲೆಕಾಳು ಗಣೇಶ, ಸಾಸಿವೆಕಾಳು ಗಣೇಶ, ವಿರೂಪಾಕ್ಷ ದೇವಾಲಯ, ವಿಜಯ ವಿಠ್ಠಲ ದೇವಾಲಯ ಸೇರಿ ಮತ್ತಿತರ ಮಾದರಿಗಳೂ ಇರಲಿವೆ.

hampi 2

ಪಕ್ಷಿನೋಟಕ್ಕೆ ಹಂಪಿ ಬೈ ಸ್ಕೈ

ಹಂಪಿಯ ಉತ್ಸವವನ್ನು ಆಗಸದಿಂದ ನೋಡುವುದು ಹಲವರ ಕನಸಾಗಿರುತ್ತದೆ. ಅಂಥವರಿಗೆ ಹಂಪಿ ಬೈ ಸ್ಕೈ ಅವಕಾಶ ಮಾಡಿಕೊಟ್ಟಿದೆ. ಹೆಲಿಕಾಫ್ಟರ್‌ ಮೂಲಕ ಹಂಪಿ ಉತ್ಸವವನ್ನು ಕಣ್ತುಂಬಿಕೊಳ್ಳಬಹುದು. ಇಂದಿನಿಂದ (ಫೆ.12) ಹಂಪಿ ಬೈ ಸ್ಕೈ ಆರಂಭವಾಗಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari