Thursday, February 12, 2026
Thursday, February 12, 2026

ಹಂಪಿ ಉತ್ಸವ: ಎಲ್ಲೆಲ್ಲಿ ಯಾವ್ಯಾವ ವೇದಿಕೆಗಳು ? ವಿವರ ಇಲ್ಲಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ.13ರಂದು ಹಂಪಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಾಳೆಯಿಂದ ಯಾವೆಲ್ಲ ವೇದಿಕೆಗಳು ನಾಡನ್ನು ಪ್ರತಿನಿಧಿಸುವ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಳಿವೆ ಎಂಬ ಮಾಹಿತಿ ಇಲ್ಲಿದೆ.

ವಿಜಯನಗರ ಸಾಮ್ರಾಜ್ಯದ ವೈಭವವನ್ನು ಮರಕಳಿಸುವ ಹಂಪಿ ಉತ್ಸವಕ್ಕೆ ಫೆ.13ಕ್ಕೆ ಚಾಲನೆ ಸಿಗಲಿದೆ. ಸಂಜೆ 7 ಗಂಟೆಗೆ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. ಈಗಾಗಲೇ ಉತ್ಸವದಲ್ಲಿ ಹಂಪಿಯ ವೈಭವವನ್ನು ಮೈದಳೆಸಲು ವೇದಿಕೆಗಳು ಸಜ್ಜಾಗಿವೆ. ಎಲ್ಲೆಲ್ಲಿ ಯಾವ್ಯಾವ ವೇದಿಕೆಗಳು ಇವೆ ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ: ಜಪಾನ್ ಪ್ರವಾಸದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ

ಹಂಪಿ ಉತ್ಸವಕ್ಕೆ ವೇದಿಕೆಗಳು ಸಜ್ಜಾಗಿವೆ. ಅವುಗಳಲ್ಲಿ ಮೊದಲನೆಯದು ಮತ್ತು ಮುಖ್ಯ ವೇದಿಕೆ ಎಂಪಿ ಪ್ರಕಾಶ್‌ ವೇದಿಕೆ. ಗಾಯತ್ರಿ ಪೀಠದ ಬಳಿ ಇರುವ ಮೈದಾನದಲ್ಲಿ ಈ ವೇದಿಕೆ ಇರಲಿದೆ. ಎಂಪಿ ಪ್ರಕಾಶ್‌ ಅವರು ಹಂಪಿ ಉತ್ಸವವನ್ನು ಆರಂಭಿಸಿದ್ದರು. ಅದರ ಗೌರವಾರ್ಥವಾಗಿ ಮುಖ್ಯ ವೇದಿಕೆಗೆ ಅವರ ಹೆಸರನ್ನು ಇಡಲಾಗಿದೆ.

hampi 1

ಎರಡನೆಯದ್ದು ಬಸವಣ್ಣ ವೇದಿಕೆ ಇದಕ್ಕೆ ಕೃಷ್ಣದೇವರಾಯ ವೇದಿಕೆ ಎಂದು ಹೆಸರು ನೀಡಲಾಗಿದೆ. ಮೂರನೆಯ ವೇದಿಕೆ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಇರಲಿದ್ದು, ಇದಕ್ಕೆ ವಿರೂಪಾಕ್ಷ ವೇದಿಕೆ ಎಂದು ಹೆಸರಿಡಲಾಗಿದೆ. ನಾಲ್ಕನೆಯ ವೇದಿಕೆ ಮಹಾನವಮಿ ದಿಬ್ಬ. ಇದಕ್ಕೆ ವಿದ್ಯಾರಣ್ಯ ವೇದಿಕೆ ಎಂದು ಹೆಸರು ನೀಡಲಾಗಿದೆ. ಐದನೆಯ ವೇದಿಕೆ ಸಾಸಿವೆ ಕಾಳು ಗಣೇಶ ಬಳಿ ಇರಲಿದೆ.

ಹಂಪಿ ಇತಿಹಾಸ ತಿಳಿಸಲು ಹೊನಲು ಬೆಳಕಿನ ಶೋ

ಆನೆಲಾಯದ ಬಳಿ ಸೌಂಡ್‌ ಆಂಡ್ ಲೈಟ್‌ ಶೋ ‘ವಿಜಯನಗರ ವೈಭವ’ ನಡೆಯಲಿದೆ. ಇಲ್ಲಿ ಪುಟ್ಟ ಪುಟ್ಟ ಏಳೆಂಟು ವೇದಿಕೆಗಳು ಇರಲಿವೆ. ನೃತ್ಯ ರೂಪಕಗಳು ಇಲ್ಲಿ ನಡೆಯಲಿವೆ. ಇದು ಆಕರ್ಷಣಿಯವೂ ಆಗಿರಲಿದ್ದು, ವಿಜಯ ನಗರ ಸಾಮ್ರಾಜ್ಯದ ಇತಿಹಾಸ ಪರಿಚಯಿಸುವ ಶೋ ಇದಾಗಿರಲಿದೆ.

Jadesha Emmiganur

Jadesha Emmiganur

Jadesha Emmiganur Is a Passionate Journalist from Ballari