ವಿಮಾನವನ್ನು ಪಾರ್ಕ್ ಮಾಡುವುದು
ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ನಿಲ್ಲಿಸಲು (ಪಾರ್ಕ್ ಮಾಡುವುದು) ಒಂದು ಕ್ರಮವಿದೆ. ವಿಮಾನವನ್ನು ಏರೋ ಬ್ರಿಡ್ಜ್ ಹತ್ತಿರ ನಿಲ್ಲಿಸುವ ಪ್ರಕ್ರಿಯೆ ಬಹುಮಟ್ಟಿಗೆ ಸೂಕ್ಷ್ಮ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳ ಪಾಲನೆಯಿಂದ ಕೂಡಿದೆ. ಈ ಪ್ರಕ್ರಿಯೆಯಲ್ಲಿ ಗ್ರೌಂಡ್ ಸ್ಟಾಫ್ ಅಥವಾ ನೆಲದ ಸಿಬ್ಬಂದಿಯ ಪಾತ್ರ ಅತ್ಯಂತ ಮುಖ್ಯ. ಅವರು ನೀಡುವ ಸೂಚನೆಗಳು ವಿಮಾನವನ್ನು ಸುರಕ್ಷಿತ ವಾಗಿ, ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲು ನೆರವಾಗುತ್ತದೆ.
ವಿಮಾನ ನಿಲ್ದಾಣದಲ್ಲಿ ವಿಮಾನಗಳನ್ನು ನಿಲ್ಲಿಸಲು (ಪಾರ್ಕ್ ಮಾಡುವುದು) ಒಂದು ಕ್ರಮವಿದೆ. ವಿಮಾನವನ್ನು ಏರೋ ಬ್ರಿಡ್ಜ್ ಹತ್ತಿರ ನಿಲ್ಲಿಸುವ ಪ್ರಕ್ರಿಯೆ ಬಹುಮಟ್ಟಿಗೆ ಸೂಕ್ಷ್ಮ ಹಾಗೂ ನಿರ್ದಿಷ್ಟ ಮಾರ್ಗಸೂಚಿಗಳ ಪಾಲನೆಯಿಂದ ಕೂಡಿದೆ. ಈ ಪ್ರಕ್ರಿಯೆಯಲ್ಲಿ ಗ್ರೌಂಡ್ ಸ್ಟಾಫ್ ಅಥವಾ ನೆಲದ ಸಿಬ್ಬಂದಿಯ ಪಾತ್ರ ಅತ್ಯಂತ ಮುಖ್ಯ. ಅವರು ನೀಡುವ ಸೂಚನೆಗಳು ವಿಮಾನವನ್ನು ಸುರಕ್ಷಿತವಾಗಿ, ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಲು ನೆರವಾಗುತ್ತದೆ.
ವಿಮಾನಗಳ ದುರಸ್ಥಿ ಅಥವಾ ನಿರ್ವಹಣಾ ಕಾರ್ಯಕ್ಕಾಗಿ ಹ್ಯಾಂಗರ್‌ನಲ್ಲಿ ನಿಲ್ಲಿಸುತ್ತಾರೆ. ಹ್ಯಾಂಗರ್ ಎಂದರೆ ವಿಮಾನಗಳನ್ನು ನಿರ್ವಹಣೆಗೆ ಒಳಪಡಿಸಲು ಬಳಸುವ ಒಂದು ದೊಡ್ಡ ಕಟ್ಟಡ ಅಥವಾ ಶೆಡ್. ಇವು ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಬಳಿ ಇರುತ್ತವೆ. ಹ್ಯಾಂಗರ್‌ಗಳು ವಿವಿಧ ಗಾತ್ರಗಳಲ್ಲಿ ಇರುತ್ತವೆ ಹಾಗೂ ಅವುಗಳಲ್ಲಿ ಒಂದಕ್ಕಿಂತ ಹೆಚ್ಚು ವಿಮಾನಗಳು ನಿಲ್ಲಿಸಬಹುದಾದ ಸಾಮರ್ಥ್ಯವಿರುತ್ತದೆ.
ಇದನ್ನೂ ಓದಿ: ತಕ್ಷಣ ಲ್ಯಾಂಡ್ ಮಾಡಬಹುದಾ ?
ಗ್ರೌಂಡ್ ಸ್ಟಾ- ಅಥವಾ ವಿಮಾನ ನಿಲ್ದಾಣದಲ್ಲಿ ವಿಮಾನದ ಸುತ್ತಮುತ್ತ ನೆಲದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿ ವಿಮಾನದ ಚಲನವಲನಕ್ಕೆ ನೆರವಾಗುತ್ತಾರೆ. ಇವರಲ್ಲಿ ಮಾರ್ಷಲಿಂಗ್ ಸಿಬ್ಬಂದಿ (Marshalling staff), ಟೆಕ್ನಿಕಲ್ ಎಂಜಿನಿಯರ್‌ಗಳು, ತುರ್ತುಸಿದ್ಧತೆಯ ಸಿಬ್ಬಂದಿ, ನಿರ್ವಹಣಾ ತಂಡ (ಮೆಂಟೆನನ್ಸ್ ಟೀಮ್), ಟೋವಿಂಗ್ ಸಿಬ್ಬಂದಿ ಮುಂತಾದ ವಿಭಾಗಗಳಿರುತ್ತವೆ. ವಿಮಾನ ಹ್ಯಾಂಗರ್‌ಗೆ ಪ್ರವೇಶಿಸುವ ಸಮಯದಲ್ಲಿ ಮಾರ್ಷಲಿಂಗ್ ಸಿಬ್ಬಂದಿ ಪ್ರಮುಖ ಪಾತ್ರವಹಿಸುತ್ತಾರೆ.

ಅವರ ನಿರ್ವಹಣೆಯು ವಿಮಾನವನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ವಿಮಾನ ರನ್ ವೇಯಿಂದ ಬಂದ ನಂತರ ಏರೋ ಬ್ರಿಡ್ಜ್ ಹತ್ತಿರ ನಿಲ್ಲಿಸುವ ಪ್ರಕ್ರಿಯೆಯೂ ನಿರ್ದಿಷ್ಟ ಕ್ರಮ ಮತ್ತು ಸೂಚನೆಯಂತೆ ನಡೆಯುತ್ತದೆ. ವಿಮಾನಗಳನ್ನು ನಿಲ್ಲಿಸಲು ಪೈಲಟ್ ಕಣ್ಣಿಗೆ ಕಾಣುವ ರೀತಿಯಲ್ಲಿ ಸೂಚನೆ ನೀಡಿ ನೆರವಾಗುವುದು ಮಾರ್ಷಲಿಂಗ್ ವಿಭಾಗದವರ ಕರ್ತವ್ಯ.
ಇದು ದೃಶ್ಯಸೂಚನೆಗಳ (visual signals) ಮೂಲಕವಾಗಿರುತ್ತದೆ. ಈ ಸೂಚನೆಗಳನ್ನು ನೀಡುವ ಸಿಬ್ಬಂದಿಯನ್ನು ಮಾರ್ಷಲರ್ ಎನ್ನುತ್ತಾರೆ. ಇವರು ಹೆಚ್ಚಿನ ಸಮಯ ಮಿನುಗುವ ಕೋಲು ( Fluorescent baton) ಅಥವಾ ಹೊಳೆಯುವ ಜಾಕೆಟ್ ಧರಿಸುತ್ತಾರೆ. ಪೈಲಟ್ ಮತ್ತು ಮಾರ್ಷಲರ್ ಆಂಗಿಕ ಭಾಷೆಯ ಮೂಲಕ ಸಂವಹನ ನಡೆಸುತ್ತಾರೆ. ಉದಾಹರಣೆಗೆ, ಮುಂದಕ್ಕೆ ಹೋಗಿ ಎನ್ನಲು, ಎರಡೂ ಕೈಗಳನ್ನು ಜೋಡಿಸುವುದು, ಎಡಕ್ಕೆ / ಬಲಕ್ಕೆ ತಿರುಗಿ ಎನ್ನಲು ಒಂದೆಡೆ ಕೈ ತಿರುಗಿಸುವ ಮೂಲಕ ತಿರುಗುವ ದಿಕ್ಕು ಸೂಚಿಸುತ್ತಾರೆ, ವೇಗ ಕಡಿಮೆ ಮಾಡಿ ಎನ್ನಲು ಮೇಲಿಂದ ಕೆಳಗೆ ಕೈಗಳನ್ನು ತೋರಿಸುವುದು ಇತ್ಯಾದಿ.
ವಿಮಾನವನ್ನು ನಿಲ್ಲಿಸಲು ಕೆಲವೊಮ್ಮೆ ಟೋವಿಂಗ್ ಟ್ರ್ಯಾಕ್ಟರ್ ಬಳಸಲಾಗುತ್ತದೆ. ಪೈಲಟ್ ಎಂಜಿನ್ ಆನ್ ಮಾಡದೇ ಇದ್ದರೂ, ಟೋವ್ ಟೀಮ್ ವಿಮಾನವನ್ನು ಹ್ಯಾಂಗರ್ ಒಳಗೆ ತರುತ್ತದೆ. ಟೋವಿಂಗ್ ವೇಳೆ ಟೈರ್ ಪ್ರೆಶರ್, ಬ್ರೇಕ್ ವ್ಯವಸ್ಥೆ, ಟೋ ಬಾರ್ ಕನೆಕ್ಷನ್ ಇತ್ಯಾದಿ ಪರಿಶೀಲಿಸಲಾಗುತ್ತದೆ. ವಿಮಾನದ ಹಿಂದೆ ಮತ್ತು ಮುಂದೆ ಎರಡೂ ತುದಿಗಳಲ್ಲೂ ಸಿಬ್ಬಂದಿಯು ನಿಂತು ವಿಮಾನವನ್ನು ಬಲವಾಗಿ ತಿರುಗಿಸದೆ ಸರಾಗವಾಗಿ ನಿಲ್ಲಿಸಲು ನೆರವಾಗುತ್ತಾರೆ.
ಗ್ರೌಂಡ್ ಸ್ಟಾಫ್ ಸಿಬ್ಬಂದಿ ಇಂಟರ್ ಕಾಮ್ ಅಥವಾ ಹ್ಯಾಂಡ್ ಸೆಟ್ ಮೂಲಕ ಸಂಪರ್ಕದಲ್ಲಿರುತ್ತಾರೆ. ವಿಮಾನ ತಾನು ನಿಲ್ಲಿಸಬೇಕಾದ ನಿಖರ ಸ್ಥಾನವನ್ನು ತಲುಪಿದಾಗ, ಮಾರ್ಷಲರ್ ಸ್ಟಾಪ್ ಸೂಚನೆ ನೀಡುತ್ತಾನೆ. ವಿಮಾನ ನಿಲ್ಲಿಸುವಾಗ ಯಾವ ತಪ್ಪು ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ವಿಮಾನವನ್ನು ನಿಖರವಾಗಿ ನಿಗದಿತ ಸ್ಥಳದಲ್ಲಿ ನಿಲ್ಲಿಸಲಾಗಿದೆಯೇ ಎಂಬುದನ್ನು ಸ್ಪಾಟ್ ಲೈಟ್ ಅಥವಾ ಸೆನ್ಸರ್ ಮೂಲಕ ಪರಿಶೀಲಿಸಲಾಗುತ್ತದೆ.

ವಿಮಾನ ನಿಂತ ತಕ್ಷಣ ಎಲ್ಲ ಟೈರ್‌ಗಳಿಗೆ ತಡೆಪಟ್ಟಿ ಹಾಕಲಾಗುತ್ತದೆ. ಇದು ವಿಮಾನವು ಕದಲದಂತೆ ನಿಯಂತ್ರಿಸುತ್ತದೆ. ಎಲ್ಲ ಎಂಜಿನ್‌ಗಳು ನಿಂತಿರುವುದನ್ನು ದೃಢೀಕರಿಸಿದ ಮೇಲೆ ಸಿಬ್ಬಂದಿ ವಿಮಾನ ಹತ್ತಿರ ಬರುತ್ತಾರೆ. ಒಳಗೆ ಪ್ರವೇಶಿಸುತ್ತಾರೆ. ತುರ್ತು ಪರಿಸ್ಥಿತಿಗೆ ಅಗ್ನಿಶಾಮಕ ಉಪಕರಣಗಳು ಸದಾ ಸಿದ್ಧವಾಗಿರುತ್ತವೆ. ನಂತರ ಮೆಂಟೆನ ತಂಡ ಇಂಧನ ಮಟ್ಟ, ಎಂಜಿನ್ ತಾಪಮಾನ, ಹೈಡ್ರಾಲಿಕ್ ಲೈನ್, ಸಣ್ಣಪುಟ್ಟ ದುರಸ್ತಿ ಅಥವಾ ತುರ್ತು ತಪಾಸಣೆ ಮಾಡುತ್ತಾರೆ.
ವಿಮಾನ ಹ್ಯಾಂಗರ್‌ನಲ್ಲಿ ವಿಮಾನ ನಿಲ್ಲಿಸುವುದು ಕೇವಲ ನಿಲ್ಲಿಸುವ ಕ್ರಿಯೆಯಲ್ಲ, ಅದು ಭದ್ರತೆ, ಸಂವಹನ, ಸಹಕಾರ ಮತ್ತು ಅನುಭವದ ಸಮೃದ್ಧ ಸಂಯೋಜನೆಯಾಗಿದೆ.