Wednesday, July 16, 2025
Wednesday, July 16, 2025

ತಕ್ಷಣ ಲ್ಯಾಂಡ್‌ ಮಾಡಬಹುದಾ ?

ವಿಮಾನದ ಭಾರ ಜಾಸ್ತಿಯಿರುವಾಗ ಲ್ಯಾಂಡ್ ಮಾಡುವುದು ಸುರಕ್ಷಿತವಲ್ಲ. ವಿಮಾನ ಲ್ಯಾಂಡ್ ಆಗುವಾಗ ಅದರ ಗರಿಷ್ಠ ಇಳಿಯುವ ತೂಕ ಒಂದು ಮಿತಿಗಿಂತ ಜಾಸ್ತಿಯಾದರೆ, ಲ್ಯಾಂಡಿಂಗ್ ಗಿಯರ್ (landing gear)ಗಳ ಮೇಲೆ ಭಾರ ಬಿದ್ದು ಅದಕ್ಕೆ ಧಕ್ಕೆಯಾಗಬಹುದು. ಇದು ವಿಮಾನದ ರಚನೆಯ ಮೇಲೆ ಬಲವಾದ ಪ್ರಭಾವ (structural damage) ಬೀರಬಹುದು.

ಪ್ರಯಾಣಿಕರು ತುಂಬಿದ ದೊಡ್ಡ ವಿಮಾನ ಟೇಕಾಫ್ ಮಾಡಿದ ತಕ್ಷಣ ತುರ್ತು ಲ್ಯಾಂಡ್ ಮಾಡಬಹುದಾ? ಸಾಮಾನ್ಯವಾಗಿ ಈ ಪ್ರಶ್ನೆಗೆ, ತಕ್ಷಣ ಲ್ಯಾಂಡ್ ಮಾಡಬಹುದು ಎಂದೇ ಎಲ್ಲರೂ ಹೇಳುತ್ತಾರೆ. ಆದರೆ ವಿಷಯ ಅಷ್ಟು ಸರಳವಾಗಿಲ್ಲ. ವಿಮಾನ ಟೇಕಾಫ್ ಆಗುವಾಗ ದೀರ್ಘ ಪ್ರಯಾಣಕ್ಕಾಗಿ ಅದರ ಇಂಧನ ಟ್ಯಾಂಕ್ ಭರ್ತಿ ಆಗಿರುತ್ತದೆ. ಕೆಲವು ಸಲ 15-18 ಗಂಟೆ ಹಾರ‌ ಬೇಕಾಗಿರುವುದರಿಂದ, ಅಷ್ಟು ದೂರದ ಪ್ರಯಾಣಕ್ಕಾಗಿ ಇಂಧನವನ್ನು ಭರ್ತಿ ಮಾಡಲಾಗುತ್ತದೆ.

ಇಂಥ ಸಂದರ್ಭದಲ್ಲಿ ವಿಮಾನದ ಒಟ್ಟು ತೂಕ ( AUW: All-Up Weight) ಬಹಳ ಜಾಸ್ತಿ ಇರುತ್ತದೆ. ಈ ತೂಕವು ಹೆಚ್ಚಿನ ವೇಳೆ ಗರಿಷ್ಠ ಇಳಿಯುವ ತೂಕ ( MLW- Maximum Landing Weight) ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ವಿಮಾನ ಲ್ಯಾಂಡ್ ಆಗುವಾಗ, ದೂರ ಪ್ರಯಾಣದಿಂದ ಅದರ ಇಂಧನ ಖಾಲಿಯಾಗಿರುತ್ತದೆ. ಆದರೆ ತಕ್ಷಣ ಲ್ಯಾಂಡ್ ಮಾಡಿದರೆ, ಇಂಧನ ಖಾಲಿಯಾಗದೇ, ಅದರ ತೂಕ ಹಾರುವಾಗ ಇರುವಷ್ಟೇ ಇರುತ್ತದೆ.

ಇದನ್ನೂ ಓದಿ: ಕಿಸ್ಸಿಂಗ್‌ ಲ್ಯಾಂಡಿಂಗ್‌ ಅಂದರೇನು ?

ವಿಮಾನದ ಭಾರ ಜಾಸ್ತಿಯಿರುವಾಗ ಲ್ಯಾಂಡ್ ಮಾಡುವುದು ಸುರಕ್ಷಿತವಲ್ಲ. ವಿಮಾನ ಲ್ಯಾಂಡ್ ಆಗುವಾಗ ಅದರ ಗರಿಷ್ಠ ಇಳಿಯುವ ತೂಕ ಒಂದು ಮಿತಿಗಿಂತ ಜಾಸ್ತಿಯಾದರೆ, ಲ್ಯಾಂಡಿಂಗ್ ಗಿಯರ್ (landing gear)ಗಳ ಮೇಲೆ ಭಾರ ಬಿದ್ದು ಅದಕ್ಕೆ ಧಕ್ಕೆಯಾಗಬಹುದು. ಇದು ವಿಮಾನದ ರಚನೆಯ ಮೇಲೆ ಬಲವಾದ ಪ್ರಭಾವ (structural damage) ಬೀರಬಹುದು.

84d35fb7a9022dafb744adfd0d1f4cba

ಕೆಲವೊಮ್ಮೆ ಟೈರ್ ಸೋಟಗೊಳ್ಳಬಹುದು. ವೀಲ್‌ಗಳು ಮುರಿಯಬಹುದು. ಏರ್ ಫ್ರೇಮ್ ( airframe ) ವಿಫಲವಾಗಬಹುದು. ವಿಮಾನದ ಒಟ್ಟೂ ಭಾರ ಲ್ಯಾಂಡಿಂಗ್ ಗಿಯರ್ ಮತ್ತು ಟೈರ್ ಮೇಲೆ ಬೀಳುವುದರಿಂದ, ಒಂದಕ್ಕಿಂತ ಹೆಚ್ಚು ಭಾಗಗಳು ಧಕ್ಕೆಯಾಗಿ ಅಪಾಯವುಂಟಾಗಬಹುದು. ಕ್ಷಣಾರ್ಧದಲ್ಲಿ ವಿಮಾನ ಬೆಂಕಿಯುಂಡೆಯಂತಾಗಬಹುದು. ಈ ಯಾವ ಅಪಾಯವೂ ಆಗಲಿಲ್ಲ ವೆನ್ನಿ, ರನ್‌ವೇ ಮೇಲೆ ವಿಮಾನ ಬಲವಾಗಿ ಬಂದು ಅಪ್ಪಳಿಸುವುದರಿಂದ ವಿಮಾನದ ಕೆಲವು ಬಿಡಿಭಾಗಗಳಿಗಾದರೂ ಧಕ್ಕೆಯಾಗದೇ ಹೋಗುವುದಿಲ್ಲ.

ಹೆಚ್ಚು ತೂಕದ ವಿಮಾನಗಳು ಅಂದರೆ Wide-body jet ಗಳಲ್ಲಿ ಇಂಧನ ಸುರಿಯುವ ವ್ಯವಸ್ಥೆ ( Fuel Jettison System) ಇರುತ್ತದೆ. ವಿಮಾನದಲ್ಲಿ ರೆಕ್ಕೆಗಳ ಹಿಂಬದಿಯಲ್ಲಿ ಇರುವ ನೋಜಲ್‌ ಗಳಿಂದ ಇಂಧನವನ್ನು ಹೊರಹಾಕಲಾಗುತ್ತದೆ. ಇಂಧನವು ಪ್ರತಿ ನಿಮಿಷ 2000-2500 ಕಿಲೋಗ್ರಾಂ ವೇಗದಲ್ಲಿ ಹೊರಬೀಳುತ್ತದೆ.

ಪೈಲಟ್ ಗಳು ಇಂಧನವನ್ನು ಖಾಲಿಮಾಡಿ ಅಥವಾ ಚೆಲ್ಲಿ ಎಷ್ಟು ತೂಕವನ್ನು ಕಮ್ಮಿ ಮಾಡಬಹುದು ಎಂಬುದನ್ನು ನಿರ್ಧರಿಸಬಹುದು. ಇದಕ್ಕೆ Target Landing Weight ಅಂತ ಹೇಳುತ್ತಾರೆ. ತಾತ್ಕಾಲಿಕವಾಗಿ ಎಷ್ಟು ಇಂಧನ ಇಟ್ಟುಕೊಂಡು ಭಾರವನ್ನು ಇಳಿಸಬೇಕು ಎಂಬುದನ್ನು ಕಾಕ್‌ ಪಿಟ್‌ನಲ್ಲಿರುವ ಕಂಪ್ಯೂಟರ್ ಬಳಸಿಕೊಂಡು ನಿರ್ಧರಿಸಲಾಗುತ್ತದೆ. ಇಂಧನವನ್ನು ಮೇಲೆ ಚೆಲ್ಲುವಾಗ ವಿಮಾನ ಎಷ್ಟು ಎತ್ತರದಲ್ಲಿ ಹಾರುತ್ತಿದೆ ಎಂಬುದು ಬಹಳ ಮುಖ್ಯ.

ಆ ಹಂತದಲ್ಲಿ ವಿಮಾನ ಕನಿಷ್ಠ 6000 ಅಡಿ ಎತ್ತರದಲ್ಲಿ ಹಾರುತ್ತಿರಬೇಕು. ಇಂಧನ ಚೆಲ್ಲುವ ಸ್ಥಳ ಯಾವುದು ಎಂಬುದು ಸಹ ಮುಖ್ಯ. ಅದು ಜನವಸತಿ ಪ್ರದೇಶ ಆಗಿರಬಾರದು. ಅಕ್ಕಪಕ್ಕದಲ್ಲಿ ಬೇರೆ ವಿಮಾನಗಳು ಹಾರುತ್ತಿರಬಾರದು. ಕನಿಷ್ಠ 15 ರಿಂದ 20 ಕಿ.ಮೀ. ಅಂತರವನ್ನು ಕಾಪಾಡಬೇಕು. ಇಂಧನ ಸುರಿಯುವ ವ್ಯವಸ್ಥೆ ಎಲ್ಲ ವಿಮಾನಗಳಲ್ಲೂ ಇರುವುದಿಲ್ಲ.

plane landing (1)

ಉದಾಹರಣೆಗೆ, ಏರ್‌ಬಸ್ ಎ-320, ಬೋಯಿಂಗ್ 737 ವಿಮಾನಗಳಲ್ಲಿ ಈ ವ್ಯವಸ್ಥೆ ಇಲ್ಲ. ಬೋಯಿಂಗ್ 747, ಏರ್‌ಬಸ್ ಎ-350 ವಿಮಾನಗಳಲ್ಲಿ ಈ ವ್ಯವಸ್ಥೆ ಇದೆ. ಈ ವ್ಯವಸ್ಥೆ ಇಲ್ಲದ ವಿಮಾನಗಳು ತುರ್ತು ಇಳಿಯಬೇಕಾದರೆ ಏನು ಮಾಡುತ್ತವೆ? ವಿಮಾನ ನಿರ್ದಿಷ್ಟ ವಲಯದಲ್ಲಿ ಇಂಧನ ಖಾಲಿಯಾಗುವ ತನಕ ಮೇಲೆ ಹಾರಾಡುತ್ತಲೇ ಇರಬೇಕಾಗುತ್ತದೆ.

ಹೊಸ ತಂತ್ರಜ್ಞಾನವಿರುವ ವಿಮಾನಗಳನ್ನು ಭಾರ ಜಾಸ್ತಿಯಿದ್ದರೂ ತುರ್ತು ಸಂದರ್ಭದಲ್ಲಿ ಇಳಿಸಬಹುದು. ಆದರೆ, ಇಳಿದ ತಕ್ಷಣ ಎಂಜಿನಿಯರ್‌ಗಳು ತಕ್ಷಣ ವಿಮಾನದ ಲ್ಯಾಂಡಿಂಗ್ ಗಿಯರ್, ಏರ್ ಫ್ರೇಮ್ ಇತ್ಯಾದಿಗಳನ್ನು ತಪಾಸಣೆ ಮಾಡಬೇಕು. ವಿಮಾನದ ಭಾಗಗಳಿಗೆ ಧಕ್ಕೆ ಆಗಿಲ್ಲ ಎಂಬ ಸರ್ಟಿಫಿಕೇಟ್ ಪಡೆಯುವ ತನಕ ಹಾರಿಸುವಂತಿಲ್ಲ

Vishweshwar Bhat

Vishweshwar Bhat

Editor in Chief

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?