Saturday, March 28, 2026
Saturday, March 28, 2026

ಕಳೆದು ಹೋಯಿತೆ ನಿನ್ನಯ ಜೋಳಿಗೆ...

ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಬ್ಯಾಗ್‌ಗಳು ಪ್ರತಿದಿನ ಓಡಾಡುತ್ತವೆ. ಕೆಲವೊಮ್ಮೆ ತಪ್ಪಾದ ವಿಮಾನಕ್ಕೆ ಹೋಗುತ್ತವೆ. ಕನೆಕ್ಷನ್ ಫ್ಲೈಟ್ ಇದ್ದಾಗ ಕೆಲವೊಮ್ಮೆ ಬ್ಯಾಗ್ ಮಿಸ್ ಆಗುತ್ತವೆ. ಬ್ಯಾಗೇಜ್ ವ್ಯವಸ್ಥೆಯ ತಾಂತ್ರಿಕ ದೋಷದಿಂದಲೂ ಬ್ಯಾಗ್ ಕಳೆಯುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕಳೆಯದಿದ್ದರೂ ಕೈಗೆ ಸಿಗುವುದು ತಡವಾಗುತ್ತದೆ. ಇದು ಪ್ರಯಾಣಿಕರ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಹುಡುಕಿಕೊಡುವ ತಂತ್ರಜ್ಞಾನವೇ ಗೂಗಲ್‌ನ Find Hub.

ವಿಮಾನ ಪ್ರಯಾಣ ಮಾಡುವಾಗ ಬಹುತೇಕ ಪ್ರವಾಸಿಗರು ಎದುರಿಸುವ ದೊಡ್ಡ ಸಮಸ್ಯೆಗಳಲ್ಲಿ ಒಂದು ಲಗೇಜ್ ಕಳೆದುಹೋಗುವುದು. ಹಲವಾರು ಬಾರಿ ಪ್ರಯಾಣಿಕರು ತಮ್ಮ ಬ್ಯಾಗ್ ಎಲ್ಲಿದೆ ಎಂಬುದನ್ನು ತಿಳಿಯದೆ ದಿನಗಳವರೆಗೆ ಕಾಯಬೇಕಾಗುತ್ತದೆ. ಈಗ ಈ ಸಮಸ್ಯೆಗೆ ತಂತ್ರಜ್ಞಾನ ದೈತ್ಯ ಗೂಗಲ್ ಹೊಸ ಪರಿಹಾರವನ್ನು ನೀಡಿದೆ. ನಿಮ್ಮ ಬ್ಯಾಗ್ ಮಿಸ್ ಆಗಿದೆ ಅಥವಾ ಇನ್ನಾದರೂ ಕಾಣುತ್ತಿಲ್ಲವೆಂದರೆ ಗೂಗಲ್ ಗೆ ಒಂದು ಮಾತು ಹೇಳಿ. ಅದೇ ಹುಡುಕಿಕೊಡುತ್ತದೆ.

ಲಾಸ್ಟ್‌ ಅಂಡ್‌ ಫೌಂಡ್‌ ಇನ್‌ ಬೆಂಗಳೂರು ಏರ್‌ಪೋರ್ಟ್‌

Find Hub. ಇದು ಗೂಗಲ್ ಪರಿಚಯಿಸುತ್ತಿರುವ ಹೊಸ ಅಪ್ಲಿಕೇಶನ್. ಇದರ ಮೂಲಕ ಪ್ರಯಾಣಿಕರು ತಮ್ಮ ಕಳೆದುಹೋದ ಬ್ಯಾಗ್‌ಗಳ ರಿಯಲ್-ಟೈಮ್ ಲೊಕೇಶನ್ ಅನ್ನು ನೋಡಬಹುದು ಮತ್ತು ನೇರವಾಗಿ ಆ ವಿವರವನ್ನು ಏರ್‌ಲೈನ್ ಸಿಬ್ಬಂದಿಗೆ ಹಂಚಬಹುದು. ಇದರ ಮೂಲಕ ಕಳೆದುಹೋದ ಲಗೇಜ್‌ನ್ನು ಶೀಘ್ರವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಏರ್ ಪೋರ್ಟ್ ನಲ್ಲಿ ಲಾಸ್ಟ್ ಅಂಡ್ ಫೌಂಡ್ ಎಂಬ ಘಟಕ ಇರಬಹುದು. ಆದರೆ ಅಂಗೈಲಿ ಬೆಣ್ಣೆ ಇಟ್ಕೊಂಡು ತುಪ್ಪಕ್ಕಾಗಿ ಹುಡುಕಾಡೋದು ಯಾಕೆ? ಮೊದಲು ಫೈಂಡ್ ಹಬ್ ಮೂಲಕ ನಿಮ್ಮ ಬ್ಯಾಗ್ ಹುಡುಕಿ. ಹಾಗೂ ಸಿಗಲಿಲ್ಲವೆಂದಾಗ ಏರ್ ಪೋರ್ಟ್ ಸಿಬ್ಬಂದಿಗೆ ದೂರು ನೀಡಿ. ವಾಸ್ತವ ಏನೆಂದರೆ ಫೈಂಡ್ ಹಬ್ ನಿಮ್ಮ ಬಳಿ ಇದ್ದರೆ ಸಿಬ್ಬಂದಿಗೆ ಬ್ಯಾಗ್ ಹುಡುಕುವ ಪ್ರಕ್ರಿಯೆ ಸುಲಭವಾಗುತ್ತದೆ.

ಹೌದು. ಈ ವ್ಯವಸ್ಥೆ ಪ್ರಯಾಣಿಕರಿಗೂ, ವಿಮಾನ ಸಂಸ್ಥೆಗಳಿಗೂ ಲಗೇಜ್ ಹುಡುಕುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಹೊಸ ತಂತ್ರಜ್ಞಾನವಾಗಿದ್ದು, ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಬಹಳ ಉಪಯುಕ್ತ ಕ್ರಾಂತಿ ಅನ್ನಬಹುದಾಗಿದೆ.

ಕಳೆದು ಹೋಗುವ ಕ್ಷಣ!

New Project (40)

ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಬ್ಯಾಗ್‌ಗಳು ಪ್ರತಿದಿನ ಓಡಾಡುತ್ತವೆ. ಕೆಲವೊಮ್ಮೆ ತಪ್ಪಾದ ವಿಮಾನಕ್ಕೆ ಹೋಗುತ್ತವೆ. ಕನೆಕ್ಷನ್ ಫ್ಲೈಟ್ ಇದ್ದಾಗ ಕೆಲವೊಮ್ಮೆ ಬ್ಯಾಗ್ ಮಿಸ್ ಆಗುತ್ತವೆ. ಬ್ಯಾಗೇಜ್ ವ್ಯವಸ್ಥೆಯ ತಾಂತ್ರಿಕ ದೋಷದಿಂದಲೂ ಬ್ಯಾಗ್ ಕಳೆಯುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕಳೆಯದಿದ್ದರೂ ಕೈಗೆ ಸಿಗುವುದು ತಡವಾಗುತ್ತದೆ. ಇದು ಪ್ರಯಾಣಿಕರ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರಿಗೆ ಬ್ಯಾಗ್ ಹುಡುಕಿಕೊಡುವ ತಂತ್ರಜ್ಞಾನವೇ ಗೂಗಲ್‌ನ Find Hub.

Find Hub ಏನು ಮಾಡುತ್ತೆ?

ಫೈಂಡ್ ಹಬ್ ಮೂಲಕ ನಿಮ್ಮ ಬ್ಯಾಗ್ ಪತ್ತೆ ಆಗಬೇಕು ಅಂದ್ರೆ ಮುಖ್ಯವಾಗಿ . ನಿಮ್ಮ ಬ್ಯಾಗ್ ಗೆ ಟ್ರ್ಯಾಕರ್ ಟ್ಯಾಗ್ ಜೋಡಿಸಬೇಕು. ಆಗ ಮಾತ್ರವೇ ನಿಮ್ಮ ಬ್ಯಾಗನ್ನು, ಬ್ಯಾಗ್ ಇರುವ ಸ್ಥಳವನ್ನು ಮೊಬೈಲ್ ಆಪ್ ಮೂಲಕ ಟ್ರ್ಯಾಕ್ ಮಾಡಬಹುದು.

ಹೀಗೆ ಮಾಡಿ

  1. Find Hub ಆಪ್ ಓಪನ್ ಮಾಡಿ
  2. ಅದರಲ್ಲಿ ನಿಮ್ಮ ಬ್ಯಾಗ್ ಗಳ ಪಟ್ಟಿ ಸಿಗುತ್ತದೆ. ಕಳೆದುಹೋದ ಬ್ಯಾಗನ್ನು ಆಯ್ಕೆ ಮಾಡಿ
  3. ಅಲ್ಲಿ “Share Item Location” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
  4. ಆಗ ಆಪ್ ಒಂದು ಸುರಕ್ಷಿತ ಲಿಂಕ್ ಸೃಷ್ಟಿಸುತ್ತದೆ
  5. ಆ ಲಿಂಕ್ ಅನ್ನು ಏರ್‌ಲೈನ್ ವೆಬ್‌ಸೈಟ್ ಅಥವಾ ಆಪ್‌ನಲ್ಲಿ ಲೋಡ್ ಮಾಡಿ

ಈ ಲಿಂಕ್ ಮೂಲಕ ಏರ್‌ಲೈನ್ ಸಿಬ್ಬಂದಿ ಬ್ಯಾಗ್ ಇರುವ ನಿಖರ ಸ್ಥಳವನ್ನು ನೋಡಲು ಸಾಧ್ಯವಾಗುತ್ತದೆ ಮತ್ತು ತ್ವರಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

New Project (39)

ಪ್ರಯಾಣಿಕರ ಗೌಪ್ಯತೆಗೂ ಆದ್ಯತೆ

ಗೂಗಲ್ ಈ ವ್ಯವಸ್ಥೆಯಲ್ಲಿ ಗೌಪ್ಯತೆ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದೆ.

  • ಲೊಕೇಶನ್ ಡೇಟಾ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಆಗಿರುತ್ತದೆ
  • ಲಿಂಕ್ 7 ದಿನಗಳ ನಂತರ ಸ್ವಯಂ ರದ್ದಾಗುತ್ತದೆ
  • ಪ್ರಯಾಣಿಕರು ತಮಗೆ ಬೇಕಾದಾಗ ಲೊಕೇಶನ್ ಶೇರ್ ಮಾಡುವುದನ್ನು ನಿಲ್ಲಿಸಬಹುದು
  • ಬ್ಯಾಗ್ ಮಾಲೀಕರ ಬಳಿ ಬಂದಾಗ ಈ ಫೀಚರ್ ಸ್ವಯಂಚಾಲಿತವಾಗಿ ಆಫ್ ಆಗುತ್ತದೆ

ಯಾವ್ಯಾವ ಏರ್‌ಲೈನ್ಸ್ ನಲ್ಲಿ?

ಔಷಧ ಮರೆತರೆ ಆಪತ್ತು

Find Hub ವ್ಯವಸ್ಥೆಯನ್ನು ಈಗಾಗಲೇ ಹಲವಾರು ಜಾಗತಿಕ ವಿಮಾನ ಕಂಪನಿಗಳು ಬಳಸಲು ಆರಂಭಿಸಿವೆ. ಟರ್ಕಿಶ್ ಏರ್ ಲೈನ್ಸ್ , ಏರ್ ಇಂಡಿಯಾ, ಚೈನ ಏರ್ ಲೈನ್ಸ್, ಲುಫ್ತಾನ್ಸಾ ಗ್ರೂಪ್, ಸೌದಿಯಾ, ಸ್ಕ್ಯಾಂಡಿನೇವಿಯನ್ ಏರ್ ಲೈನ್ಸ್, ಎಜೆಟ್

ಇನ್ನೂ ಹಲವು ಏರ್‌ಲೈನ್‌ಗಳು ಈ ವ್ಯವಸ್ಥೆಯನ್ನು ತಮ್ಮ ಬ್ಯಾಗೇಜ್ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಸೇರಿಸಿವೆ. Find Hub ತಂತ್ರಜ್ಞಾನವನ್ನು WorldTracer ಮತ್ತು NetTracer ಎಂಬ ಜಾಗತಿಕ ಬ್ಯಾಗೇಜ್ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದ್ದು, ಬ್ಯಾಗ್ ಗಳು ಸುರಕ್ಷಿತವಾಗಿ ಮರಳಿ ವಾರಸ್ದಾರರ ಕೈಗೆ ಸಿಗುವಲ್ಲಿ ಸಹಕಾರಿಯಾಗಿದೆ.

ಫೈಂಡ್ ಹಬ್ ಮಹತ್ವ

New Project (41)

Find Hub ಅಪ್ಲಿಕೇಶನ್ ನಿಂದ ಪ್ರವಾಸೋದ್ಯಮಕ್ಕೆ ಹಲವಾರು ಲಾಭಗಳಿವೆ. ಇದರಿಂದಾಗಿ ಪ್ರಯಾಣಿಕರ ಆತಂಕ ಕಡಿಮೆಯಾಗುತ್ತದೆ. ಲಗೇಜ್ ಹುಡುಕುವ ಸಮಯ ಕಡಿಮೆಯಾಗುತ್ತದೆ. ವಿಮಾನ ಕಂಪನಿಗಳ ಸೇವಾ ಗುಣಮಟ್ಟ ಹೆಚ್ಚುತ್ತದೆ. ವಿಮಾನ ನಿಲ್ದಾಣಗಳಲ್ಲಿ ಕಾರ್ಯಕ್ಷಮತೆ ಸುಧಾರಿಸುತ್ತದೆ. ಈ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಸ್ಮಾರ್ಟ್ ಟ್ರಾವೆಲ್ ವ್ಯವಸ್ಥೆಯ ಪ್ರಮುಖ ಭಾಗವಾಗುವ ಸಾಧ್ಯತೆ ಕೂಡ ಇದೆ.

“Find Hub” – ಗೂಗಲ್ ನ ಹೊಸ ಲಗೇಜ್ ಟ್ರ್ಯಾಕಿಂಗ್ ಫೀಚರ್

  • ರಿಯಲ್-ಟೈಮ್ ನಲ್ಲಿ ಕಳೆದುಹೋದ ಬ್ಯಾಗ್‌ನ ಲೊಕೇಶನ್ ಪತ್ತೆ
    • ಲೊಕೇಶನ್ ಲಿಂಕ್ ನೇರವಾಗಿ ಏರ್‌ಲೈನ್‌ಗೆ ರವಾನಿಸಬಹುದು
    • ಲಗೇಜ್ ಹುಡುಕುವ ಪ್ರಕ್ರಿಯೆಗೆ ವೇಗ
    • ಗೌಪ್ಯತೆ ಕಾಪಾಡುತ್ತದೆ
    • ಲಿಂಕ್ 7 ದಿನಗಳ ನಂತರ ಸ್ವಯಂಚಾಲಿತವಾಗಿ ನಿಷ್ಕ್ರಿಯ
    • ಹಲವು ಏರ್‌ಲೈನ್‌ಗಳಲ್ಲಿ ಸೌಲಭ್ಯ
    • WorldTracer ಮತ್ತು NetTracer ವ್ಯವಸ್ಥೆಗಳೊಂದಿಗೆ ಸಂಪರ್ಕ
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಮಾ ’ಕಸಂ..’ ಇನ್ನೊಮ್ಮೆ ’ಕಸ’ ಎಸೆಯಲು ಹೋಗಲ್ಲ!

Read Previous

ಮಾ ’ಕಸಂ..’ ಇನ್ನೊಮ್ಮೆ ’ಕಸ’ ಎಸೆಯಲು ಹೋಗಲ್ಲ!

ಯಾರಿಗೂ ಕಾಣದ ದೆವ್ವ ಕಾಜೋಲ್ ಗೆ ಕಂಡದ್ದು ಹೇಗೆ?

Read Next

ಯಾರಿಗೂ ಕಾಣದ ದೆವ್ವ ಕಾಜೋಲ್ ಗೆ ಕಂಡದ್ದು ಹೇಗೆ?