ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಕ್ರೀಡೆಯಲ್ಲ, ಅದೊಂದು ಭಾವನೆ. ಇಡೀ ದೇಶ ಸೇರಿ ಆಚರಿಸುವ ಹಬ್ಬ. ಈ ಭಾವನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಭಾರತದ ಜನಪ್ರಿಯ ಕೆಫೆ ಮತ್ತು ಕೋ-ವರ್ಕಿಂಗ್ ಸ್ಪೇಸ್ ʼಸೋಷಿಯಲ್‌ʼ, ʼ#DoosraStadiumʼ ಎಂಬ ಹೊಸ ಅಭಿಯಾನ ಶುರು ಮಾಡಿದೆ. ಕ್ರಿಕೆಟ್‌ ಅಭಿಮಾನಿಗಳೆಲ್ಲ ಒಟ್ಟಿಗೆ ಕುಳಿತು ಕ್ರೀಡಾಂಗಣದಲ್ಲೇ ವೀಕ್ಷಿಸುವ ಅನುಭವವನ್ನು ತಂತ್ರಜ್ಞಾನದ ಮೂಲಕ ನೀಡಲು ಮುಂದಾಗಿದೆ. ಇದರ ಜತೆಗೆ ರುಚಿಕರ ಆಹಾರ ಕೂಡ ಇರಲಿದೆ.

ಏನಿದು 'ದೂಸ್ರಾ ಸ್ಟೇಡಿಯಂ'?

ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದ ಲಕ್ಷಾಂತರ ಅಭಿಮಾನಿಗಳಿಗಾಗಿ ಸೋಷಿಯಲ್‌ ತನ್ನ ಕೆಫೆಗಳನ್ನೇ ಇನ್ನೊಂದು ಕ್ರೀಡಾಂಗಣವಾಗಿ ಪರಿವರ್ತಿಸಿದೆ. ಇಲ್ಲಿ ಪಂದ್ಯದ ನೇರ ಪ್ರಸಾರ ಮಾತ್ರವಲ್ಲದೆ, ಕ್ರೀಡಾಂಗಣದಲ್ಲಿ ಇರುವಂಥ ಹೈ-ಎನರ್ಜಿ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.

ಇದನ್ನೂ ಓದಿ: ವಿಹಂಗಮ ಸಂಗಮ

ಬೃಹತ್ ಎಲ್‌ಇಡಿ ಪರದೆಗಳು ಮತ್ತು ಸ್ಟೇಡಿಯಂನಂಥ ಸೌಂಡ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ. ಕ್ಯೂಆರ್ ಕೋಡ್ ಆಧಾರಿತ ಆರ್ಡರ್ ಮಾಡುವುದು ಮತ್ತು ಅಭಿಮಾನಿಗಳಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಾದಾತ್ಮಕ ಗೇಮ್‌ಗಳನ್ನು ಆಯೋಜಿಸಲಾಗಿದೆ.

ಕ್ರಿಕೆಟ್ ಪಂದ್ಯಗಳಿಗೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾದ 'ಕ್ರಿಕೆಟ್ ಸ್ಪೆಷಲ್' ಆಹಾರ ಮತ್ತು ಪಾನೀಯಗಳನ್ನು ಪರಿಚಯಿಸಲಾಗಿದೆ. ಇವುಗಳಿಗೆ ಕ್ರಿಕೆಟ್ ಲೋಕದ ಪದಗಳನ್ನೇ ಬಳಸಲಾಗಿದೆ. ಉದಾಹರಣೆಗೆ ಬೌಂಡರಿ ಬೈಟ್ಸ್, ಗೂಗ್ಲಿ ಡ್ರಿಂಕ್ಸ್ ಹೀಗೆ.

ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಲು ಸೋಷಿಯಲ್‌ ಹಲವು ವಿಶೇಷತೆಗಳನ್ನು ಅಳವಡಿಸಿದೆ. ಕೆಲವು ಪ್ರಮುಖ ಔಟ್‌ಲೆಟ್‌ಗಳಲ್ಲಿ ಲೈವ್ ಡ್ರಮ್ಸ್ ಮತ್ತು ಚಿಯರಿಂಗ್ ತಂಡಗಳ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಕ್ಕೆ ಸಪೋರ್ಟ್ ಮಾಡಲು ಫೇಸ್ ಪೇಂಟಿಂಗ್ ಮತ್ತು ತಂಡದ ಟಿ-ಶರ್ಟ್‌ಗಳನ್ನು ಧರಿಸಲು ಅವಕಾಶ ಕಲ್ಪಿಸಲಾಗಿದೆ. ಅಪರಿಚಿತ ಕ್ರಿಕೆಟ್ ಪ್ರೇಮಿಗಳು ಒಂದೆಡೆ ಸೇರಿ ಒಟ್ಟಾಗಿ ಕಿರುಚುತ್ತಾ, ಸಂಭ್ರಮಿಸುತ್ತಾ ಪಂದ್ಯ ವೀಕ್ಷಿಸುವುದು ಇಲ್ಲಿನ ವಿಶೇಷ.

ಭಾರತದಾದ್ಯಂತ ಇರುವ 50 ಕ್ಕೂ ಹೆಚ್ಚು ಸೋಷಿಯಲ್ ಔಟ್‌ಲೆಟ್‌ಗಳಲ್ಲಿ ಈ 'ದೂಸ್ರಾ ಸ್ಟೇಡಿಯಂ' ಅನುಭವ ಪಡೆಯಬಹುದು. ಪಂದ್ಯದ ವೇಳೆ ಲಕ್ಕಿ ಡ್ರಾ ಮತ್ತು 'ಪ್ರೆಡಿಕ್ಟ್ ಅಂಡ್ ವಿನ್' ಸ್ಪರ್ಧೆಗಳ ಮೂಲಕ ಗ್ರಾಹಕರಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ.