Saturday, September 5, 2026
Saturday, September 5, 2026

ಬಿಸಿಲ ನಾಡಿನಲ್ಲಿ ಮಲೆನಾಡಿನ ಸೊಬಗು

ಈ ವೃಕ್ಷೋದ್ಯಾನದ ನಿರ್ಮಾಣವು ಕೇವಲ ಸಸಿಗಳನ್ನು ನೆಡುವ ಪ್ರಕ್ರಿಯೆಯಾಗಿರದೆ, 3000 ಭರವಸೆಗಳನ್ನು ಹಾಗೂ 3,000 ಕನಸುಗಳನ್ನು ನೆಟ್ಟ ಒಂದು ಅಪೂರ್ವ ಕಾರ್ಯಕ್ರಮವಾಗಿದೆ. ಈ ಯೋಜನೆಯಲ್ಲಿ ಕೈಜೋಡಿಸಿರುವ ಸ್ಥಳೀಯ ಫೌಂಡೇಶನ್, ಅರಣ್ಯ ಅಧಿಕಾರಿಗಳ ಜೊತೆಗೂಡಿ 'ಹಕ್ಕಿಗೊಂದು ಹನಿ ನೀರು' ಹಾಗೂ 'ಸ್ವಚ್ಛ ಸಾವಳಸಂಗ' ಎಂಬಂಥ ಪರಿಸರ ಪೂರಕ ಅಭಿಯಾನಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

  • ಶರಣಬಸಪ್ಪ ಎನ್‌ ಕಾಂಬಳೆ

ಬಿಸಿಲನಾಡು ಎಂದೇ ಬಿಂಬಿತವಾಗಿರುವ ವಿಜಯಪುರ ಜಿಲ್ಲೆಯ ಬರದ ನಾಡಿನಲ್ಲಿ ಇದೀಗ ಹಸಿರಿನ ಸಿರಿ ಕಂಗೊಳಿಸುತ್ತಿದೆ. ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಶ್ರಮ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಹಸ್ತದಿಂದ ಲೋಕಾರ್ಪಣೆಗೊಂಡಿರುವ 'ಸಾವಳಸಂಗ ವೃಕ್ಷೋದ್ಯಾನ'ವು ಉತ್ತರ ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ನೀಡಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ...40ನೆಯ ವರ್ಷದ ಸಡಗರ

ಬರದ ನಾಡಿನಲ್ಲಿ ಹಸಿರ ಕ್ರಾಂತಿ

ಸದಾ ಧಗೆ, ಬಂಜರು ಭೂಮಿ ಹಾಗೂ ಒಣಹವೆಯನ್ನೇ ಹೊದ್ದುಕೊಂಡಿದ್ದ ವಿಜಯಪುರ ಜಿಲ್ಲೆಯ ಬರದ ಚಿತ್ರಣವೀಗ ಸಂಪೂರ್ಣವಾಗಿ ಬದಲಾಗುತ್ತಿದೆ. ಬಿಸಿಲ ನಾಡು ಎಂದೇ ಗುರುತಿಸಲ್ಪಡುವ ಈ ಭಾಗದಲ್ಲಿ ಇದೀಗ ಮಲೆನಾಡಿನ ತಂಪಾದ, ಹಸಿರು ವಾತಾವರಣದ ಅನುಭವ ಮರುಕಳಿಸಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಕನಸಿನ ಕೂಸಾದ 'ಸಾವಳಸಂಗ ವೃಕ್ಷೋದ್ಯಾನ'ವು ಸಾರ್ವಜನಿಕರ ಬಳಕೆಗೆ ಲೋಕಾರ್ಪಣೆಗೊಳ್ಳುವ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ರಂಗಕ್ಕೆ ಹೊಸ ಶಕ್ತಿ ಬಂದಂತಾಗಿದೆ.

Untitled design (35)

ಕೋಟಿ ವೆಚ್ಚದ ನಿಸರ್ಗ ಸ್ನೇಹಿ ಯೋಜನೆ

ಸುಮಾರು 2.60 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಂತ ಆಕರ್ಷಕವಾಗಿ ನಿರ್ಮಾಣವಾಗಿರುವ ಈ ವೃಕ್ಷೋದ್ಯಾನಕ್ಕೆ ಪರಮಪೂಜ್ಯ 'ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ' ಎಂದು ನಾಮಕರಣ ಮಾಡಲಾಗಿದೆ. ರಾಜ್ಯದ ಸಚಿವ ರಾಮಲಿಂಗ ರೆಡ್ಡಿ ಅವರು ಈ ಸುಂದರ ಉದ್ಯಾನವನ್ನು ಉದ್ಘಾಟಿಸಿದ್ದು, ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ವಿಶೇಷ ಕಾಳಜಿ ಹಾಗೂ ನಿರಂತರ ಶ್ರಮದಿಂದ ಈ ಯೋಜನೆ ನನಸಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ಹಾಗೂ ಪ್ರಕೃತಿ ಪ್ರೇಮಿಗಳಿಗೆ ಪ್ರಶಾಂತ ವಾತಾವರಣದಲ್ಲಿ ಕಾಲ ಕಳೆಯಲು ಇದೊಂದು ಅದ್ಭುತ ತಾಣವಾಗಿ ಮೂಡಿಬಂದಿದೆ.

ನಿಸರ್ಗದಲ್ಲಿ ಬೆರೆತ ಜ್ಞಾನಯೋಗಿ

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ಕೇವಲ ಆಶ್ರಮಕ್ಕೆ ಸೀಮಿತರಾಗದೆ ಇಡೀ ಪ್ರಕೃತಿಯಲ್ಲಿ ಬೆರೆತುಹೋಗಿದ್ದಾರೆ. ಈ ವೃಕ್ಷೋದ್ಯಾನದಲ್ಲಿರುವ ಪ್ರತಿಯೊಂದು ಗಿಡ, ಮರ ಹಾಗೂ ಇಲ್ಲಿನ ಹಸಿರೀಕರಣದಲ್ಲಿ ಆ ಮಹಾನ್ ಸಂತರ ದಿವ್ಯ ಉಪಸ್ಥಿತಿಯನ್ನು ಕಾಣಬಹುದು.

ಶಾಸಕ ಯಶವಂತರಾಯಗೌಡ ಪಾಟೀಲ್ ನುಡಿಗಳು

'ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳನ್ನು ಪೂಜಿಸತಕ್ಕಂತ ಪ್ರತಿಯೊಂದು ಜೀವಿಯೂ ಇಂಥ ಹಸಿರು ನಾಡನ್ನು ಪ್ರೀತಿಸಬೇಕು. ಬರೀ ಸಾವಳಸಂಗದ ಗುಡ್ಡ ಅಷ್ಟೇ ಅಲ್ಲ, ಪ್ರಪಂಚದಲ್ಲಿ ಎಲ್ಲೆಲ್ಲಿ ಹಸಿರಿದೆಯೋ, ಎಲ್ಲೆಲ್ಲಿ ಕೃಷಿ ಹಾಗೂ ಬದುಕಿದೆಯೋ ಅದನ್ನು ಪ್ರೀತಿಸುವ ವ್ಯವಧಾನ ನಿಸರ್ಗದಲ್ಲಿದೆ. ನಿಸರ್ಗದಲ್ಲಿ ದೇವರಿದ್ದಾನೆ. ಜ್ಞಾನಯೋಗಿ ಸಿದ್ದೇಶ್ವರ ಮಹಾ ಸ್ವಾಮಿಗಳು ಈ ಭಾಗದ ಜನರಿಗೆ ಜ್ಞಾನದಾಸೋಹ ನೀಡುವ ಮೂಲಕ ಹೃದಯ ಶ್ರೀಮಂತರನ್ನಾಗಿಸಿದ್ದಾರೆ. ಸಾವಳಸಂಗ ಬೆಟ್ಟದಲ್ಲಿ ಮಹಾಸ್ವಾಮಿಗಳು ಪಾದಸ್ಪರ್ಶ ಮಾಡಿರುವುದರಿಂದ ಉದ್ಯಾನಕ್ಕೆ ಸಿದ್ದೇಶ್ವರ ಮಹಾಸ್ವಾಮಿಗಳ ಹೆಸರಿಡಲಾಯಿತು. ನಾವು ಸ್ವಾಮಿ ವಿವೇಕಾನಂದರನ್ನು ನೋಡಿಲ್ಲ. ಆದರೆ ಈ ಶತಮಾನ ಕಂಡ ಶ್ರೇಷ್ಠ ಸಂತ, ಅತ್ಯಂತ ಸರಳ ಬದುಕನ್ನು ಬದುಕಿದ ಮೇಧಾವಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು. ನಾವೆಲ್ಲಿದ್ದೇವೋ ಅಲ್ಲಿ ಅವರ ಹೆಸರು ಇರಬೇಕು ಎಂಬುದು ನನ್ನ ಚಿಂತನೆ. ಅದಕ್ಕಾಗಿಯೇ ಇಂಡಿ ನಗರದ ಮೆಗಾ ಮಾರ್ಕೆಟ್‌ಗೂ ಹಾಗೂ ವಿದ್ಯಾರ್ಥಿಗಳಿಗಾಗಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಭವನಕ್ಕೂ ಶ್ರೀಗಳ ಹೆಸರನ್ನೇ ಇಡಲಾಗುತ್ತಿದೆ.'

ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ

ಒಂದು ಕಾಲದಲ್ಲಿ ಕೇವಲ ಬಂಜರು ಭೂಮಿಯಾಗಿದ್ದ ಪ್ರದೇಶವಿಂದು ಹಸಿರಿನ ಸಿರಿಯಿಂದ ಕಂಗೊಳಿಸುತ್ತಿದ್ದು, ಇಲ್ಲಿನ ಮನಮೋಹಕ ದೃಶ್ಯಗಳನ್ನು ನೋಡಿದವರು ಅಚ್ಚರಿಪಡುವುದು ಖಂಡಿತ. ಪರಿಸರ ಸಂರಕ್ಷಣೆಗೆ ಇಲ್ಲಿ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಾರಾಂತ್ಯ ಬಂತೆಂದರೆ ಸಾಕು, ಸಾವಿರಾರು ಪ್ರವಾಸಿಗರು ಕುಟುಂಬ ಸಮೇತ ಇಲ್ಲಿಗೆ ಆಗಮಿಸಿ ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ.

3000 ಕನಸುಗಳು ಮತ್ತು ನಿರಂತರ ಅಭಿಯಾನಗಳು

ಈ ವೃಕ್ಷೋದ್ಯಾನದ ನಿರ್ಮಾಣವು ಕೇವಲ ಸಸಿಗಳನ್ನು ನೆಡುವ ಪ್ರಕ್ರಿಯೆಯಾಗಿರದೆ, 3000 ಭರವಸೆಗಳನ್ನು ಹಾಗೂ 3,000 ಕನಸುಗಳನ್ನು ನೆಟ್ಟ ಒಂದು ಅಪೂರ್ವ ಕಾರ್ಯಕ್ರಮವಾಗಿದೆ. ಈ ಯೋಜನೆಯಲ್ಲಿ ಕೈಜೋಡಿಸಿರುವ ಸ್ಥಳೀಯ ಫೌಂಡೇಶನ್, ಅರಣ್ಯ ಅಧಿಕಾರಿಗಳ ಜೊತೆಗೂಡಿ 'ಹಕ್ಕಿಗೊಂದು ಹನಿ ನೀರು' ಹಾಗೂ 'ಸ್ವಚ್ಛ ಸಾವಳಸಂಗ' ಎಂಬಂಥ ಪರಿಸರ ಪೂರಕ ಅಭಿಯಾನಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

Untitled design (33)

ಪ್ರವಾಸೋದ್ಯಮಕ್ಕೆ ಹೊಸ ಭರವಸೆ

ಬಿಸಿಲ ನಾಡಿನಲ್ಲಿ ತಲೆಎತ್ತಿರುವ ಈ ಹಸಿರು ಕ್ರಾಂತಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಹಾಗೂ ಮೆರುಗು ನೀಡಿದೆ. ಪರಿಸರ ಸಂರಕ್ಷಣೆಯ ಜೊತೆಗೆ ವಾರಾಂತ್ಯದಲ್ಲಿ ಮನಸ್ಸಿಗೆ ವಿಶ್ರಾಂತಿ ಮತ್ತು ಮುದ ನೀಡಲು 'ಸಾವಳಸಂಗ ವೃಕ್ಷೋದ್ಯಾನ'ಕ್ಕಿಂತ ಉತ್ತಮ ತಾಣ ಮತ್ತೊಂದಿಲ್ಲ. ಪ್ರಕೃತಿ ಪ್ರಿಯರು ಹಾಗೂ ಪ್ರವಾಸಿಗರು ತಪ್ಪದೇ ಭೇಟಿ ನೀಡಬೇಕಾದ ಪ್ರಮುಖ ತಾಣವಾಗಿ ಇದು ಮೂಡಿಬಂದಿದೆ.

ಪರಮಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ವೃಕ್ಷೋದ್ಯಾನ

* ಸ್ಥಳ: ಸಾವಳಸಂಗ, ಇಂಡಿ ತಾಲೂಕು,

ವಿಜಯಪುರ ಜಿಲ್ಲೆ

* ಒಟ್ಟು ವೆಚ್ಚ: ₹2.60 ಕೋಟಿ ರೂಪಾಯಿ

* ಉದ್ಘಾಟನೆ: ಸಚಿವ ರಾಮಲಿಂಗಾರೆಡ್ಡಿ

* ಸಂಕಲ್ಪ ಹಾಗೂ ಮುತುವರ್ಜಿ: ಶಾಸಕ ಯಶವಂತರಾಯಗೌಡ ಪಾಟೀಲ್

* ವಿಶೇಷ ಅಭಿಯಾನಗಳು: ಯಶವಂತರಾಯಗೌಡ ವಿಠಲಗೌಡ ಪಾಟೀಲ್‌ ಫೌಂಡೇಶನ್‌ 'ಹಕ್ಕಿಗೊಂದು ಹನಿ ನೀರು' ಹಾಗೂ 'ಸ್ವಚ್ಛ ಸಾವಳಸಂಗ'

* ಪರಿಕಲ್ಪನೆ: ವಿಜಯಪುರ ಜಿಲ್ಲೆಯ ಪ್ರಮುಖ ಪರಿಸರ ಪ್ರವಾಸೋದ್ಯಮ ತಾಣ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..