Wednesday, October 21, 2026
Wednesday, October 21, 2026

ವಾರಾಣಸಿಯಲ್ಲೊಂದು ಶೈಲಿಪುತ್ರಿಯ ದೇಗುಲ

ನವರಾತ್ರಿ ಆಚರಣೆಯಲ್ಲಿ ಒಂಬತ್ತು ದಿನ ಒಂಬತ್ತು ಮಾತೆಯರನ್ನು ಪೂಜಿಸುವ ಸಂಪ್ರದಾಯವಿದೆ ನಮ್ಮಲ್ಲಿ, ನವರಾತ್ರಿಯ ಮೊದಲನೇ ದಿನ ಶೈಲಪುತ್ರಿಯನ್ನು ಪೂಜಿಸುವ ಪರಿಪಾಠವಿದೆ. ನಾವು ಶೈಲಪುತ್ರಿಯ ಕಥೆ ಹಾಗೂ ಆಕೆಯ ದೇಗುಲದ ಬಗ್ಗೆ ತಿಳಿಯೋಣ.

  • ಸುವರ್ಣ ಲಕ್ಷ್ಮೀ ಎಂ.ಎಚ್.‌

ಶೈಲಪುತ್ರಿ ಅಂದರೆ ಶೈಲ (ಪರ್ವತ ರಾಜ) ನ ಪುತ್ರಿ ಅಂದರೆ ಮಗಳು. ಇವಳು ಹಿಂದಿನ ಜನ್ಮದಲ್ಲಿ ಸತಿ ಎಂಬ ಹೆಸರಿನಲ್ಲಿ ದಕ್ಷರಾಜನ ಮಗಳಾಗಿ ಹುಟ್ಟಿ ಶಿವನನ್ನೇ ಮದುವೆಯಾಗಲು ತಂದೆಯನ್ನು ಕೇಳುತ್ತಾಳೆ. ಶ್ಮಶಾನವಾಸಿಯಾದ ಶಿವನಿಗೆ ತನ್ನ ಮಗಳನ್ನು ಕೊಡಲು ದಕ್ಷರಾಜನು ಒಪ್ಪಿಕೊಳ್ಳದಿದ್ದರೂ ತಂದೆಯನ್ನು ವಿರೋಧಿಸಿ ಶಿವನನ್ನು ವಿವಾಹವಾಗಿ ಕೈಲಾಸದಲ್ಲಿ ನೆಮ್ಮದಿಯಾಗಿ ಬಾಳುತ್ತಿರುತ್ತಾಳೆ. ಈ ಮಧ್ಯೆ ದಕ್ಷರಾಜನು ಶಿವನಿಗೆ ಅವಮಾನ ಮಾಡಲು ಸಮಯ ಕಾಯುತ್ತಿರುತ್ತಾನೆ. ಒಮ್ಮೆ ಒಂದು ಯಾಗವನ್ನು ಏರ್ಪಸಿದ್ದ ಎಲ್ಲರನ್ನೂ ಆಹ್ವಾನಿಸಿ ಶಿವ ಮತ್ತು ಸತಿಯರನ್ನು ಆಹ್ವಾನಿಸಲಿಲ್ಲ. ಯಾಗದ ಸಂಗತಿ ತಿಳಿದ ಸತಿ ತಂದೆಯ ಮನೆಗೆ ಹೋಗುವ ಇಚ್ಚೆ ತೋರುತ್ತಾಳೆ. ಆಗ ಶಿವನು ತಮಗೆ ಆಹ್ವಾನವಿಲ್ಲ.

ನಾವು ಈಗ ಅಲ್ಲಿಗೆ ಹೋದರೆ ಅವಮಾನ ಆಗುವುದು ಖಚಿತ. ಆದುದರಿಂದ ಹೋಗುವುದು ಬೇಡ ಎಂದರೂ ಕೇಳದೆ ಸತಿ ಯಾಗ ನಡೆಯುವಲ್ಲಿಗೆ ಹೋಗುತ್ತಾಳೆ. ಅಲ್ಲಿ ದಕ್ಷರಾಜನು ಬೇಕೆಂದೇ ಶಿವ ಹಾಗೂ ಸತಿಯನ್ನು ನಿಂದಿಸುತ್ತಾನೆ. ಅವಮಾನ ತಾಳಲಾರದೆ ಸತಿ ಯಜ್ಞ ಕುಂಡಲ್ಲಿಯೇ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮುಂದಿನ ಜನ್ಮದಲ್ಲಿ ಪರ್ವತ ರಾಜ ಹಾಗೂ ಮೇನಾದೇವಿಯ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ ಮತ್ತು ಚಿಕ್ಕಂದಿನಿಂದಲೂ ಶಿವನನ್ನೇ ಧ್ಯಾನಿಸುತ್ತಾ ರಾಜನ ಮಗಳಾದರೂ ಸಾಮಾನ್ಯ ಜನರ ನಡುವೆ ಅವರ ನೋವು ನಲಿವುಗಳಿಗೆ ಸ್ಪಂದಿಸುತ್ತಿರುತ್ತಾಳೆ. ಹೀಗಿರುವಾಗ ಒಮ್ಮೆ ತನ್ನ ಸ್ನೇಹಿತೆಯರ ಜತೆ ಹಸುಗಳನ್ನು ಮೇಯಿಸಲು ಕಾಡಿಗೆ ಹೋಗಿದ್ದಳು.

Untitled design - 2026-10-21T193234.318

ಆ ಸಮಯದಲ್ಲಿ ಆ ಕಾಡಿನಲ್ಲಿ ಖಂಡಕಾಸುರನೆಂಬ ದೈತ್ಯ ಕಲ್ಲಿನಾಕಾರದ ರಾಕ್ಷಸನು ಸಿಕ್ಕ ಸಿಕ್ಕ ಜಾನುವಾರುಗಳನ್ನು ತನ್ನ ಸ್ಪರ್ಶದಿಂದ ಕಲ್ಲು ಮಾಡುತ್ತಿದ್ದನು. ಹೀಗಿರುವಾಗ ಹಸುವೊಂದು ರಕ್ಕಸನು ತನ್ನ ಕರುವನ್ನು ಕಲ್ಲು ಮಾಡುತ್ತಿದ್ದದನ್ನು ಕಂಡುಕೊಳ್ಳುವ ಮೂಲಕ ಓಡಿ ಬಂದು ಪೂಜೆಗೆಂದು ತಾವರೆ ಹೂಗಳನ್ನು ತರಲು ಹೋಗಿದ್ದ ಪಾರ್ವತಿಯನ್ನು ಕರೆದೊಯ್ಯುತ್ತದೆ. ಅವಳ ಹೇಳುತ್ತಾಳೆ ನಾನು ಪರ್ವತ ರಾಜನ ಮಗಳು ಅನೇಕ ಕಲ್ಲುಗಳ ಶಕ್ತಿಯನ್ನು ನಾನು ಹೊಂದಿದ್ದೇನೆ ಎಂದು ಹೇಳಿ ಆ ಬಂಡೆಗಲ್ಲಿನಂತಿದ್ದ ಆ ರಾಕ್ಷಸನನ್ನು ಪುಡಿ ಪುಡಿ ಮಾಡಿಬಿಡುತ್ತಾಳೆ. ಆಗ ಹಸು ಬಂದು ಆಕೆಗೆ ತನ್ನ ಬೆನ್ನನ್ನು ಉಜ್ಜುತ್ತಾ ಧನ್ಯವಾದ ಹೇಳುತ್ತದೆ. ಪಾರ್ವತಿಯ ಈ ಸಾಹಸ ಕಂಡ ಸ್ನೇಹಿತರು ಹಾಗೂ ಊರ ಜನ ಅಂದಿನಿಂದ ಶೈಲಪುತ್ರಿ ಎಂದು ಕರೆಯಲು ಆರಂಭಿಸಲಾಗಿದೆ. ನಂತರದಲ್ಲಿ ಆಕೆ ಶಿವನನ್ನು ಹುಡುಕುತ್ತಾ ವಾರಾಣಸಿಗೆ ಹೋಗಿ ಶಿವನನ್ನು ವರಿಸಿ ಅಲ್ಲಿಯೇ ನೆಲೆಸಿದಳೆಂದು ಶಿವ ಪುರಾಣ ಹೇಳುತ್ತದೆ.

ಅದರಂತೆಯೇ ಇಂದಿಗೂ ಶೈಲಪುತ್ರಿ ದೇಗುಲ ವಾರಣಾಸಿಯಲ್ಲಿ ಇದ್ದು ಆಕೆಯನ್ನು ಆರಾಧಿಸುವ ನವರಾತ್ರಿಯ ಮೊದಲ ದಿನ ಭಕ್ತರು ತಂಡೋಪತಂಡವಾಗಿ ಬಂದು ವಾರಾಣಸಿಯಲ್ಲಿ ದರ್ಶನ ಪಡೆಯುತ್ತಾರೆ.

ಅವಳ ಸ್ವರೂಪ ಹೀಗಿದೆ: ಅವಳ ಗೂಳಿಯ ಮೇಲೆ ಕುಳಿತು ಒಂದು ಕೈಯಲ್ಲಿ ಕಮಲ ಇನ್ನೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಮಸ್ತಿಷ್ಚಂದ್ರಚಂದ್ರನನ್ನು ಧರಿಸಿದ್ದಾಳೆ. ಈಕೆಯು ಮೂಲಾಧಾರ ಚಕ್ರದಲ್ಲಿ ಕುಂಡಲಿನೀ ಶಕ್ತಿಯಾಗಿ ನೆಲೆಗೊಂಡಿದ್ದಾಳೆಂದು ನಂಬಿದ ಯೋಗ ಸಾಧಕರು ನವರಾತ್ರಿಯ ಮೊದಲ ದಿನ ಮಲ್ಲಿಗೆಯಿಂದ ಆರಾಧಿಸಿದರೆ ಶಕ್ತಿ ', ಇಂದ್ರಿಯ ನಿಗ್ರಹಗಳು ಅನುಗ್ರಹಿಸುತ್ತಾಳೆ ಎಂದು ನಂಬುತ್ತಾರೆ. ಈ ಸಲ ವಾರಾಣಸಿಗೆ ಹೋದಾಗ ಶೈಲಪುತ್ರಿಯನ್ನು ನೋಡಿಕೊಂಡು ಬನ್ನಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ